ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿಯಲು ಕಡ್ಡಾಯ ಮತದಾನ ಮಾಡುವಂತೆ ವಿಶೇಷ ಚೇತನರಿಂದ ತ್ರಿಚಕ್ರ ವಾಹನದ ಮೂಲಕ ಜಾಥಾ.

ಕೂಡ್ಲಿಗಿ ಏಪ್ರಿಲ್.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ತಾಲೂಕಾ ಆಡಳಿತ ಹಾಗೂ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ವಿಶೇಷ ಚೇತನರಿಂದ ತ್ರಿಚಕ್ರ ವಾಹನ ಜಾಥಾ ಆಯೋಜಿಸಿದ್ದು ಸಹಾಯಕ ಚುನಾವಣಾ ಅಧಿಕಾರಿಗಳಾದ ಡಾ. ಹೆಚ್. ಎನ್.ರಘು ರವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರವಿಕುಮಾರ್ ವೈ ರವರು ಸಾರ್ವಜನಿಕರಿಗೆ ಜಾಥಾವನ್ನು ಉದ್ದೇಶಿಸಿ ಈ ದಿನ ವಿಶೇಷ ಚೇತನರಿಂದ ಮತದಾನ ಜಾಗೃತಿಯನ್ನು ಆಯೋಜಿಸಿದ್ದು, ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮತದಾನದ ಚಲಾಯಿಸದೆ ಇರುವುದರಿಂದ ತಮ್ಮ ಮತದಾನದ ಹಕ್ಕನ್ನು ವಂಚನೆ ಮಾಡಿಕೊಳ್ಳದೆ ಮೇ 7 ರ ನಡೆಯುವಂತಹ ಚುನಾವಣೆಗೆ ಎಲ್ಲಾ ಮತದಾರರು ತಮ್ಮ ತಮ್ಮ ಮತಗಟ್ಟೆಳಗಲ್ಲಿ ಮತದಾನ ದಿನದಂದು ನಾವು ನೀವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದರ ಜೊತೆಗೆ ನಿಮ್ಮ ನೆರೆಹೊರೆಯವರು, ಹಿತೈಷಿಗಳು, ಸಂಬಂಧಿಕರು ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸುವ ಮೂಲಕ ತಾಲೂಕಿನಲ್ಲಿ ಶೇಕಡ 100 ರಷ್ಟು ಮತದಾನ ವಾಗುವಂತೆ ಜಾಗೃತಿ ವಹಿಸಲು ತಿಳಿಸಿದರು . ಜಿಲ್ಲಾ ಚುನಾವಣಾ ರಾಯಭಾರಿಯವರಾದ ಕುಮಾರಿ ಲಕ್ಷ್ಮಿ ದೇವಿಯವರು ಮಾತನಾಡುತ್ತಾ ನನಗೆ ಎರಡು ಕೈಗಳು ಇಲ್ಲದಿದ್ದರೂ ಕಳೆದ 16 ವರ್ಷಗಳಿಂದ ಒಂದು ಚುನಾವಣೆಗಳನ್ನು ತಪ್ಪಿಸದೆ ಮತದಾನ ಮಾಡುತ್ತಾ ಬಂದಿದ್ದೇನೆ. ಅದೇ ರೀತಿ ನಿವೆಲ್ಲರೂ ಸಹ ಎಂತಹುದೇ ಪರಿಸ್ಥಿತಿಯಲ್ಲಿಯೂ ಇದ್ದರು ತಪ್ಪಿಸಿ ಕೊಳ್ಳದೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಪ್ರಜಾಪ್ರಭತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು. ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದ ಬಳಿ ಮತದಾರರ ಪ್ರತಿಜ್ಞಾ ವಿಧಿ ಬೋದಿಸಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯ್ತಿಯ ಮುಖ್ಯ ಅಧಿಕಾರಿಗಳು, ತಾಲೂಕಾ ನರೇಗಾ IEC ಸಂಯೋಜಕರು , ಚೌಡೇಶ.ಬಿ.ಹೆಚ್. ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ (MRW), ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ VRW ರವರು ಮತ್ತು ತಾ.ಪಂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button