ಮಾರ್ಚ್ 8. ರಿಂದ ಡವಳಗಿ ಮಡಿವಾಳೇಶ್ವರ – ಜಾತ್ರಾ ಪ್ರಾರಂಭ.
ಡವಳಗಿ ಮಾ.07





ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರ 518 ನೇ. ಜಾತ್ರಾ ಮಹೋತ್ಸವ ಮಾರ್ಚ್ 8 ರಿಂದ 14 ರ ವರೆಗೆ ಅತಿ ವಿಜೃಂಭಣೆ ಯಿಂದ ಜರಗುವುದು ಮಾರ್ಚ್ 8 ರಂದು ಶ್ರೀ ಮದ್ದಗಿರಿ ರಾಜ ಶ್ರೀಶೈಲ ಸೂರ್ಯ ಸಿಂಹಾಸನಾದೀಶ್ವರ ಶ್ರೀ ಶ್ರೀ 1008 ಜಗದ್ಗುರು ಡಾ, ಚನ್ನ ಸಿದ್ದರಾಮ ಶಿವಾಚಾರ್ಯ ಭಗವತ್ಪಾದರ ಅದ್ದೂರಿ ಜೋಡು ಅಡ್ಡ ಪಲ್ಲಕ್ಕಿ ಮಹೋತ್ಸವ ನಂತರ ಧರ್ಮ ಸಭೆ ಮತ್ತು ಸನ್ಮಾನ ಸಮಾರಂಭ ಜರುಗುವುದು ಮಾರ್ಚ್ 9 ರವಿವಾರ ದಂದು ಮುಂಜಾನೆ 8 ಗಂಟೆಗೆ ಜಂಗಮ ವಟುಗಳಿಗೆ ಅಯ್ಯಾಚಾರ ಉಪದೇಶ ಸಾಯಂಕಾಲ 5 ಗಂಟೆಗೆ ಭೈವ್ಯ ರಥೋತ್ಸವ ಜರಗುವುದು ರಾತ್ರಿ 10 ಗಂಟೆಗೆ ಕಲಾ ಸಿಂಚನ ಮೆಲೋಡಿಸ್ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವುದು ಮಾರ್ಚ್ 10 ಸೋಮವಾರ ದಂದು ದೇಹದಾರ್ಢ್ಯ ಸ್ಪರ್ಧೆಗಳಾದ ಭಾರವಾದ ಗುಂಡು .ಚೀಲ . ಕಲ್ಲು. ಸಂಕ್ರಾಣಿಕಲ್ಲು. ಎತ್ತುವುದು. ಮತ್ತು ಸಂಕ್ರಾಣಿಕಲ್ಲು ಒತ್ತುಗಲ್ಲ ಮಾಡುವುದು ನಡೆಯುತ್ತವೆ. ಮಾರ್ಚ್ 11 ಮಂಗಳವಾರ ದಂದು ಮುಂಜಾನೆ 10 ಗಂಟೆಗೆ ರಾಜ್ಯ ಮಟ್ಟದ ತೇರ ಬಂಡಿ ಸ್ಪರ್ಧೆ ಜರುಗುವುದು. ಅಂದೇ ರಾತ್ರಿ 10 ಗಂಟೆಗೆ ಜಯಂ ಕಾರ್ ಮೆಲೋಡಿಸ್ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವುದು. ಮಾರ್ಚ್ 12 ಬುಧವಾರ ದಂದು ಬೆಳಿಗ್ಗೆ 10 ಗಂಟೆಗೆ ಜೋಡೆತ್ತುಗಳಿಂದ ಭಾರವಾದ ಕಲ್ಲು ಜಗ್ಗಿಸುವುದು. ಮಧ್ಯಾಹ್ನ 3 ಗಂಟೆಗೆ ಜಾನುವಾರುಗಳ ಪ್ರದರ್ಶನ ನಡೆಯುತ್ತದೆ. ಮಾರ್ಚ್ 13 ರಂದು ಮಧ್ಯಾಹ್ನ 3 ಗಂಟೆಗೆ ಎತ್ತುಗಳಿಂದ ದಿಂಡು ಬಡಿಯುವ ಸ್ಪರ್ಧೆ ನಡೆಯುವುದು. ಮಾರ್ಚ್ 14 ಶುಕ್ರವಾರ ದಂದು ಮಧ್ಯಾಹ್ನ 12 ಗಂಟೆಗೆ ಪುಟ್ಟಿ ಗಾಡಿ ರೇಸ್ ಜರಗುವುದು. ಅಂದೇ ಸಾಯಂಕಾಲ 5 ಗಂಟೆಗೆ ಕಳಸ ಇಳಿಯುವುದು ಹಾಗೂ ಹಂಪಾ ಕೊಡುವುದು ಎಂದು ಶ್ರೀ ಮಠದ ಧರ್ಮಾಧಿಕಾರಿ ಯಾದ ಶ್ರೀ ಗನಮಟೇಶ್ವರ ಸ್ವಾಮೀಜಿ ಗದ್ದುಗೆ ಮಠ ಡವಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ