ಈ.ತುಕಾರಾಂ ಪರವಾಗಿ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಸತೀಶ್ ಜಾರಕಿಹೊಳಿ ಅವರಿಂದ – ರೋಡ್ ಶೋ.
ಕೂಡ್ಲಿಗಿ ಏಪ್ರಿಲ್.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸುತ್ತಿರುವಂತ ಕೂಡ್ಲಿಗಿ ಕ್ಷೇತ್ರದ ಶಾಸಕರು ಎನ್. ಟಿ. ಶ್ರೀನಿವಾಸ್ ರವರ ನೇತೃತ್ವದಲ್ಲಿ ನಡೆಯುವಂತ ಚುನಾವಣೆ ಮತ ಪ್ರಚಾರಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತದ ಅನುಯಾಯಿಗಳು ಲೋಕಪಯೋಗಿ ಸಚಿವರು ಹಿರಿಯ ಮುತ್ಸದಿ ನಾಯಕರು ಹಾಗೂ ಕರ್ನಾಟಕ ರಾಜ್ಯದ ಎಸ್. ಟಿ ಸಮುದಾಯದ ಪ್ರಭಾವಿ ಮುಖಂಡರು ಸತೀಶ ಜಾರಕಿಹೊಳಿ ಅವರು ಈ ದಿನ 14 ಏಪ್ರಿಲ್ 2024 ರಂದು ಸಂಜೆ 5: 30 ಕ್ಕೆ ಕಾಂಗ್ರೆಸ್ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ .ತುಕಾರಾಮ್ ಅವರ ಪರವಾಗಿ, ಚುನಾವಣಾ ಪ್ರಚಾರದ ನಿಮಿತ್ತ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತಗಳಿಂದ ಗೆಲ್ಲಿಸುವಂತೆ ಸಾರ್ವಜನಿಕವಾಗಿ ಕೂಡ್ಲಿಗಿ ಪಟ್ಟಣಕ್ಕೆ ರೋಡ್ ಶೋ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು.

ಕ್ಷೇತ್ರದ ಸಮಸ್ತ ಮುಖಂಡರು, ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಮಸ್ತ ನಾಗರಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಕೂಡ್ಲಿಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ್ರು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ.