ಚಿತ್ರದುರ್ಗ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ರವರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಾರಿಸಿ ತರಬೇಕೆಂದ – ಶಾಸಕರು.
ರಾಂಪುರ ಏಪ್ರಿಲ್.16
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರಾಂಪುರದ ಎಸ್ ಎಲ್ ಎನ್ ಎಸ್ ಶಾಲಾ ಮೈದಾನದಲ್ಲಿ ಇಂದು ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೆಲೆ ರಾಂಪುರ, ಜೆ ಬಿ ಹಳ್ಳಿ, ಸಂತೆಗುಡ್ಡ, ತಮ್ಮೇನಹಳ್ಳಿ, ದೇವಸಮುದ್ರ, ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮುಖಂಡರು, ಕಾರ್ಯಕರ್ತರ ಸಮಾವೇಶದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡು ಮಾತನಾಡಿದರು.ಮತದಾರ ಬಂಧುಗಳು ಹಸ್ತದ ಗುರುತಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಪಕ್ಷದ ಅಭ್ಯರ್ಥಿಯಾದ ಬಿ ಎನ್ ಚಂದ್ರಪ್ಪ ಅವರನ್ನು ಹೆಚ್ಚಿನ ಬಹುಮತ ದಿಂದ ಹಾರಿಸಿ ತರಬೇಕೆಂತದು ವಿನಂತಿ ಮಾಡಿದರು ಮಹಿಳೆಯರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಬಸ್ಸಿನ ವ್ಯವಸ್ಥೆ ಮನೆ ಕುಟುಂಬಕ್ಕೆ ಆರ್ಥಿಕ ಸಹಾಯ ಮತ್ತು ವಿದ್ಯುತ್ತು ಫ್ರೀ ಯಾಗಿ ಕೊಟ್ಟಿರುವುದರಿಂದ ಮಹಿಳೆಯರ ಮನಸ್ಸೆಲ್ಲ ಕಾಂಗ್ರೆಸ್ ಪಕ್ಷದ ಬಲವಾಗಿರುತ್ತದೆ.
ಮತ್ತು ನಾನು ಒಬ್ಬ ಕ್ಷೇತ್ರದ ಶಾಸಕರು ಜೊತೆಗೆ ಲೋಕಸಭಾ ಸದಸ್ಯರನ್ನು ಪಾರ್ಲಿಮೆಂಟಿಗೆ ಹಾರಿಸಿ ಕಳಿಸಿದರೆ ಎರಡು ಜೋಡೆತ್ತುಗಳ ಕೈ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಅನುದಾನಗಳನ್ನು ತಂದು ಹಿಂದುಳಿದ ಮೊಳಕಾಲ್ಮೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಕ್ಕೆ ಮತ್ತು ರೈತರಿಗೆ ನೀರಾವರಿ ಯೋಜನೆ ಮಾಡಲಿಕ್ಕೆ ಅನುಕೂಲವಾಗುತ್ತದೆ ಎಂದು ಮಾನ್ಯ ಶಾಸಕರು ಬಿ.ಎನ್. ಚಂದ್ರಪ್ಪನವರನ್ನು ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲಿಸಲೇಬೇಕು ಎಂದು ಮತದಾರರ ಮನಸ್ಸು ಗೆಲ್ಲುತ್ತಾರೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಸಂದರ್ಭದಲ್ಲಿ ಹೇಳಿದರು.ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಯುವ ಮುಖಂಡರುಗಳು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರ, ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮೂರು.