ನರೇಗಾ ಕೂಲಿಯಿಂದಲೇ ಉತ್ತಮ ಜೀವನ.
ತೂಲಹಳ್ಳಿ ಏಪ್ರಿಲ್.17





ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದಿನಾಂಕ 16.4.2024 ರಂದು ತೂಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂ ವೀರೇಶ ತಂದೆ ಸಿದ್ದಪ್ಪ ಎಂಬುವರ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಕುರಿತು ಹೊಸದಾಗಿ ನರೇಗಾ ಸಹಾಯವಾಣಿ ನಂಬರನ್ನು ತಿಳಿಸುತ್ತಾ ನಿಮ್ಮ ಕೂಲಿ ಕಾರ್ಯದಲ್ಲಿ ಯಾವುದೇ ರೀತಿ ತೊಂದರೆಗಳಾದರೆ ಈ ನಂಬರಿಗೆ ಕಾಲ್ ಮಾಡಿ ವಿಷಯ ತಿಳಿಯಬಹುದು ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಕಡ್ಡಾಯವಾಗಿ ಮಾಡಬೇಕು ಯಾವುದೇ ಭಯ ಭೀತಿ ಇಲ್ಲದೆ ನಿರ್ಭಿತರಾಗಿ ಮತ ಚಲಾಯಿಸಿ, ದೇಶದ ಅಭಿವೃದ್ಧಿಗೆ ಉತ್ತಮವಾದ ರಾಷ್ಟ್ರವನ್ನು ಮಾಡಲಿಕ್ಕೆ ಅನುಕೂಲವಾಗ ಬೇಕು ಎಂದು ಪಿಡಿಒ ಪ್ರಶಾಂತ್ ಕುಮಾರ್ ತಿಳಿಸಿದರು. ಒಂದು ತಿಂಗಳ ಕಾಲ ಕೃಷಿ ಹೊಂಡ ನಿರ್ಮಾಣದಲ್ಲಿ ಕೂಲಿ ಕಾರ್ಮಿಕರು ಸಫಲವಾಗಿ ಕಾರ್ಯನಿರ್ವಹಿಸಿ ನರೇಗಾ ಕೂಲಿಯಿಂದ ಗುಳೆ ಹೋಗದೆ ಜನರು ಉತ್ತಮವಾಗಿ ಜೀವನ ಸಾಗಿಸುತ್ತಿದ್ದಾರೆ ಇತರಹದ ಕೆಲಸವನ್ನು ನೀಡಿ ಅನುಕೂಲ ಮಾಡಿ ಕೊಟ್ಟಂತಹ ಅಧಿಕಾರಿಗಳಿಗೂ ಮತ್ತು ನಮ್ಮ ಘನ ಸರ್ಕಾರಕ್ಕೂ ವಂದನೆಗಳನ್ನು ತಿಳಿಸುತ್ತೇನೆ ಎಂದು ಕೊಟ್ರೇಶ್ ಕೆ ಕಾಯಕ ಬಂದು ಹೇಳಿದರು.ಈ ಸಂದರ್ಭದಲ್ಲಿ ಡಿ ಭರಮನಗೌಡ ಅಧ್ಯಕ್ಷರು ಗ್ರಾಮ ಪಂಚಾಯಿತಿ ತೂಲಹಳ್ಳಿ ಮರಿಯಪ್ಪ ಸೆಕ್ರೆಟರಿ ಎಚ್ ನಾಗರಾಜ್ ಡಾಟಾ ಆಪರೇಟರ್ ಮತ್ತು ಕ್ಲರ್ಕ್ ಚಂದ್ರಶೇಖರ್ ಇಂಜಿನಿಯರ್ ಪ್ರಕಾಶ್ ಬಿಲ್ ಕಲೆಕ್ಟರ್ ಬಿ ಎಫ್ ಟಿ ದಾನಪ್ಪ ನಿವೇದಿತ ಜಿಕೆಎನ್ಎಂ ಕಾಯಕ ಬಂದು ಬಸವರಾಜ್ ಕೂಲಿ ಕಾರ್ಮಿಕರು ಉಪಸ್ಥಿರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.