ವನಸಿರಿ ಪೌಂಡೇಷನ್ ನಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಪಕ್ಷಿಗಳಿಗೆ – ಕುಡಿಯುವ ನೀರಿನ ಅರವಟ್ಟಿಗೆ ಅಭಿಯಾನ.
ಬೊಮ್ಮನಾಳ (ಇ.ಜೆ) ಮಾ.22

ಸಿಂಧನೂರು ತಾಲೂಕಿನ ಬೊಮ್ಮನಾಳ (ಇ.ಜೆ) ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಪೌಂಡೇಷನ್ (ರಿ) ರಾಯಚೂರು ಹಾಗೂ ನಿಸರ್ಗ ಯುಕೋ ಕ್ಲಬ್ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಪಕ್ಷಿಗಳಿಗೆ ದಾಹ ನೀಗಿಸಲು ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಶ್ವ ಜಲದಿನದ ಅಂಗವಾಗಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ ಸಸಿ ನೆಟ್ಟು ನಿರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪರಿಸರ ಪ್ರೇಮಿ ನಾಗರಾಜ ಬೊಮ್ಮನಾಳ ಮಾತನಾಡಿ ವನಸಿರಿ ಪೌಂಡೇಷನ್ ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡುವ ಗುರಿಯನ್ನು ಹೊಂದಿದ್ದು. ಈ ಭಾಗದ ಜಿಲ್ಲೆ ತಾಲೂಕ, ಗ್ರಾಮಗಳಲ್ಲಿ ಪರಿಸರ ಜಾಗೃತಿ ಅಂಗವಾಗಿ ಈಗಾಗಲೇ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪ್ರತಿ ವರ್ಷ ಪ್ರತಿ ದಿನ ಪ್ರತಿ ನಿತ್ಯ ಈ ಭಾಗದಲ್ಲಿ ಅತ್ಯದ್ಭುತವಾಗಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬಿಸಿಲಿನ ತಾಪದಿಂದ ನರಳುವ ಜನರಿಗೆ ನೆರಳು ಕೊಡುವ ಒಂದು ಸಂಕಲ್ಪಕ್ಕೆ ನಾವುಗಳೆಲ್ಲರೂ ಕೈ ಜೋಡಿಸುವ ಮೂಲಕ ಅಮರೇಗೌಡ ಮಲ್ಲಾಪುರ ಕೈ ಬಲಪಡಿಸೋಣ ಎಂದರು.ವನಸಿರಿ ತಂಡ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ದಾಹ ತೀರಿಸಲು ಪಕ್ಷಿಗಳಿಗೆ ಅರವಟ್ಟಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಾಣಿ ಪಕ್ಷಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದು ಕೇವಲ ವನಸಿರಿ ಪೌಂಡೇಷನ್ ಕಾರ್ಯ ಅಲ್ಲ ಪ್ರತಿಯೊಬ್ಬರೂ ಮಾಡುವ ಕರ್ತವ್ಯ. ಇದಕ್ಕೆ ಎಲ್ಲಾ ವಿದ್ಯಾರ್ಥಿಗಳು ಕೈಜೋಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಪಕ್ಷಿ ಸಂಕುಲ ಉಳಿಸಬಹುದು ಜೊತೆಗೆ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿರುತ್ತದೆ ಪ್ರತಿಯೊಬ್ಬರೂ ನೀರಿನ ಸಂರಕ್ಷಣೆ ಮಾಡಬೇಕು.

ಪ್ರಾಣಿ ಪಕ್ಷಗಳಿಗೆ ನೀರು ನಾವು ಕೂಡಾ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ಮತ್ತು ವಿವಿಧ ಕೆಲಸಗಳಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಿ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ವನಸಿರಿ ಅಮರೇಗೌಡ ಮಲ್ಲಾಪುರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಈ ಸಂಧರ್ಭದಲ್ಲಿ ಮುಖ್ಯ ಗುರುಗಳು ಶಾಂತರಾಜ NR, ನಾಗರಾಜ ಬೊಮ್ಮನಾಳ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ಶಿಕ್ಷಕಿ ಕುಮಾರಿ ಪದ್ಮಾವತಿ, ಶಿಕ್ಷಕಿ ಶ್ರೀಮತಿ ಅನುಸೂಯ ಮಸ್ಕಿ, ಅತಿಥಿ ಶಿಕ್ಷಕ ಲಿಂಗಣ್ಣ, ಅಂಗನವಾಡಿ ರಾಜೇಶ್ವರಿ, ಸುನೀತಾ, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.