“ಜ್ಞಾನ ಕೌಶಲ್ಯ ಹಾಗೂ ಪರಿಶ್ರಮದಿಂದ ಯಶಸ್ಸು” ವಿದ್ಯಾರ್ಥಿಗಳಿಗೆ.
ಕೂಡ್ಲಿಗಿ ಏಪ್ರಿಲ್.18
ವಿದ್ಯಾರ್ಥಿಗಳು ಸಿಇಟಿ, ನೀಟ್ ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಜ್ಞಾನ, ಪರಿಶ್ರಮದ ಜೊತೆಗೆ ಕೌಶಲ್ಯ ಬಹು ಮುಖ್ಯವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪರೀಕ್ಷೆಗಳಲ್ಲಿ ಎಚ್ಚರಿಕೆಯಿಂದ ಉತ್ತರಿಸ ಬೇಕಾಗುತ್ತದೆ.ಬಹು ಆಯ್ಕೆಯ ಉತ್ತರಗಳಲ್ಲಿ ಎರಡು ಆಯ್ಕೆಗಳು ಉತ್ತರಕ್ಕೆ ಬಹು ಸಮೀಪ ಇರುವಂತೆ ಪ್ರಶ್ನೆಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳ ಜ್ಞಾನ ಕೌಶಲ್ಯವನ್ನು ಪರೀಕ್ಷೆ ಮಾಡುತ್ತಾರೆ. ಇಲ್ಲಿ ಎಡವಿದರೆ ವರ್ಷಗಟ್ಟಲೆ ಎಷ್ಟೇ ಶ್ರಮ ಪಟ್ಟು ಓದಿದರು ವ್ಯರ್ಥ ವಾಗುತ್ತದೆ. ಆದುದರಿಂದ ಜ್ಞಾನ, ಕೌಶಲ್ಯದ ಜೊತೆಗೆ ನಿಪುಣತೆಯಿಂದ ಉತ್ತರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಕರೆ ನೀಡಿದರು. ಇವರು ತಾಲೂಕಿನ ಗುಂಡಿನಹೊಳೆ ಸಮೀಪದ ಜ್ಞಾನ ಮಂಟಪ ಸಂಸ್ಥೆಯ ಸುಜ್ಞಾನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಿಇಟಿ,ನೀಟ್ ತರಬೇತಿಯಲ್ಲಿನ ಸಿಇಟಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಈ ಪರೀಕ್ಷೆಗಳಲ್ಲಿ1ಲಕ್ಷ ಸ್ಥಾನಗಳಿಗೆ 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಹೀಗಾಗಿ ಇಂಜಿನಿಯರ್, ಡಾಕ್ಟರ್ ಆಗಲು ಶ್ರಮ ಪಡುತ್ತಿರುವ ವಿದ್ಯಾರ್ಥಿಗಳು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸಮರ್ಥವಾಗಿ ಪರೀಕ್ಷೆ ಬರೆಯುವಂತೆವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಭೀಮಣ್ಣ ಗಜಾಪುರ ಅವರು ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸಿಕೊಳ್ಳಲು ನಿರಂತರ ಪರಿಶ್ರಮ ಎಷ್ಟು ಅಗತ್ಯವೋ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಕೌಶಲ್ಯತೆ ಅಷ್ಟೇ ಉಪಯೋಗವಾಗಲಿದೆ. ಕೌಶಲ್ಯದ ಜೊತೆ ಮಾನವೀಯತೆ ಹಾಗೂ ಸಂಸ್ಕಾರ ಬೆಳೆಸಿಕೊಂಡಲ್ಲಿ ದೇಶದ ಒಬ್ಬ ಸತ್ ಪ್ರಜೆಯಾಗಬಲ್ಲರು ಎಂದು ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯತೆ ಪಡೆದುಕೊಳ್ಳಲು ತರಬೇತಿ ಪಡದು ಬರೀ ಪುಸ್ತಕದ ಹುಳುಗಳಾಗದೆ ಅದರ ಜೊತೆ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಈ ವೇಳೇ ರೋಷನ್ ರವರು ಮಾತನಾಡಿ ಪಟ್ಟಣದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಸಿಇಟಿ ನೀಟ್ ತರಬೇತಿಯನ್ನು ಬೆಂಗಳೂರು ನಿಂದ ನಮ್ಮನ್ನು ಕರೆಸಿ, ಸರ್ಕಾರಿ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅನುಕೂಲ ಆಗುವಂತೆ ಆಧುನಿಕ ಸೌಲಭ್ಯ ಗಳಿಂದ ತರಗತಿಯನ್ನು ವಿನ್ಯಾಸ ಗೊಳಿಸಿ ಗುಣಮಟ್ಟದ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಜ್ಞಾನಮಂಟಪ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಉಮೇಶ್ ಮಾತನಾಡಿ ದೊಡ್ಡ ದೊಡ್ಡ ನಗರಗಳಲ್ಲಿ ಸಿಇಟಿ, ನೀಟ್ ತರಬೇತಿಗಳು ನಡೆಯುತ್ತವೆ. ಆದರೆ ಗ್ರಾಮೀಣ ಭಾಗಗಳಲ್ಲಿ ನಡೆದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ ಎನ್ನುವ ಉದ್ದೇಶದಿಂದ ಕಡಿಮೆ ಶುಲ್ಕ ದಲ್ಲಿ ನಮ್ಮ ಸಂಸ್ಥೆಯಿಂದ ನುರಿತ ಅನುಭವಿ ಪ್ರೊಫೆಸರ್ ಗಳಿಂದ ಇಲ್ಲಿಯ ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಪರೀಕ್ಷೆ ಎದುರಿಸಲು ಉತ್ತಮ ತರಬೇತಿ ನೀಡಿದ್ದು ಸಾರ್ಥಕತೆಯಾಗಿದೆ ಎಂದರು. ಹಲವು ದಿನಗಳ ಕಾಲ ವಿದ್ಯಾರ್ಥಿಗಳು ತರಬೇತಿ ಪಡೆದು ಸಂತೖಪ್ತಿಭಾವವನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತರಬೇತಿಗಳನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಲಾಗುವುದು.ಈ ಬಾರಿ 60 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು ಜ್ಞಾನಮಂಪಟ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಶ್ರೀಧರ್ ಮಾತನಾಡಿದರು.ಸಿಇಟಿ, ನೀಟ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಹಾಜರಿದ್ದು, ಪೃಥ್ವಿರಾಜ್, ಸಂಪತ್, ವೀರೇಂದ್ರ, ಕುಸುಮ,ಸಕ್ಕುಬಾಯಿ, ಟಿ. ಜ್ಯೋತಿ, ಪ್ರಣತಿ, ಗಂಗಮ್ಮ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಪಿಯು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.