ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಾಲ್ಕು ಬಾರಿ ಆಯ್ಕೆಯಾಗಿರುವ ಸಂಸದ ಗದ್ದಿಗೌಡರ ಕೊಡುಗೆ ಶೂನ್ಯ – ಮುತ್ತಣ್ಣ ಮೇತ್ರಿ.
ಜಮಖಂಡಿ ಏಪ್ರಿಲ್.18
ಕಳೆದ ನಾಲ್ಕು ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರ ದಿಂದ ಆಯ್ಕೆಯಾಗಿರುವ ಸಂಸದ ಪಿ.ಸಿ.ಗದ್ದಿಗೌಡರ ಇವರು 20 ವರ್ಷಗಳ ಕಾಲ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಿಲ್ಲ. ಸಂಸದರ ಕೊಡುಗೆ ಶೂನ್ಯ ಎಂದು ಜಿಲ್ಲಾ ದಲಿತ ಮುಖಂಡ ಮುತ್ತಣ್ಣ ಮೇತ್ರಿ ಆರೋಪಿಸಿದರು. ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸಂಸದ ಗದ್ದಿಗೌಡರ 20 ವರ್ಷಗಳಿಂದ ಯಾವುದೇ ಕೆಲಸ ಮಾಡಿಲ್ಲ. ಕ್ಷೇತ್ರದ ಪರ ಸದನದಲ್ಲಿ ಒಂದು ಬಾರಿವು ಧ್ವನಿ ಎತ್ತಿ ಮಾತನಾಡಿಲ್ಲ. ದಲಿತ ಹಿಂದುಳಿದ ವರ್ಗ, ಕಾರ್ಮಿಕರ, ರೈತರ ಬಳಿ ಹೋಗಿ ಸಮಸ್ಯೆ ಕೇಳಿಲ್ಲ. ಜನರ ಪರಿಸ್ಥಿತಿ ಆಲಿಸಿಲ್ಲ. ದಲಿತ, ಎಸ್.ಸಿ. ಗಳಿಗೆ ಸೌಲಭ್ಯಗಳನ್ನು ಬಂದ್ ಮಾಡಿರಿ ಎಂದು ಅನ್ನಾಸಾಹೇಬ ಜೊಲ್ಲೆ, ಸಿ.ಪಿ. ಯೋಗಿಶ್ವರ ಪತ್ರ ಬರೆದರು. ಬಿಜೆಪಿ ಸರಕಾರ ಎಸ್.ಸಿ / ಎಸ್.ಟಿ.ವಿದ್ಯಾರ್ಥಿ ವೇತನ,ಹಾಗೂ ಸಬ್ಸಿಡಿ ಬಂದ್ ಮಾಡಿದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಕೇಂದ್ರ ಸರಕಾರದ ಯೋಜನೆಗಳನ್ನು ಜಮಖಂಡಿ ತಾಲೂಕು ಮತ್ತು ಬಾಗಲಕೋಟೆ ಜಿಲ್ಲೆಗೆ ತರಬಹುದಾಗಿತ್ತು. ಆದರೂ ಏನೂ ತಂದಿಲ್ಲ. ಸಂಸತ್ತಿನಲ್ಲಿ ಒಂದು ದಿನವೂ ಬಾಗಲಕೋಟ ಜಿಲ್ಲೆಯ ಪರ ಧ್ವನಿ ಎತ್ತಲಿಲ್ಲ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಶೇ 75 ರಷ್ಟು ಸುಳ್ಳು ಇವೆ. ಬಾಗಲಕೋಟೆ ಜಿಲ್ಲೆಯ ಜನತೆ ಪ್ರಜ್ಞಾವಂತರಿದ್ದು ಈ ಬಾರಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಸಂಯುಕ್ತಾ ಪಾಟೀಲ್ ಅವರು 1 ಲಕ್ಷ ಮತಗಳ ಅಂತರದಿಂದ ಜಯಗಳಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರಾದ ಮುತ್ತಣ್ಣ ಮೇತ್ರಿ ದಾನೇಶ ಘಾಟಗೆ ಸಿದ್ದು ಮಾದರ ವಿಲಾಸ ನಡುವಿನಮನಿ ಗೋವಿಂದ ಗಸ್ತಿ ಮಾರುತಿ ಮರೆಗುದ್ದಿ ಸಂಜು ಪೂಜಾರಿ ಸೇರಿ ಸಂಯುಕ್ತಾ ಪಾಟೀಲ ಅವರ ಗೆಲುವು ನಿಶ್ಚಿತ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.