ಸೆನ್ಸಾರಗೆ ಸಿದ್ದವಾಗುತ್ತಿದೆ ಶಶಿಕಾಂತರ “ತಂತ್ರ”.
ಬೆಂಗಳೂರು ಏಪ್ರಿಲ್.21

ಸಿಲ್ವರ್‌ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ಬೆಂಗಳೂರ ನಿರ್ಮಿಸುತ್ತಿರುವ ಕುತೂಹಲ ಭರಿತ ಹಾರರ್ ಕಥಾ ಹಂದರ ಹೊಂದಿರುವ ‘ತಂತ್ರ’ ಎಂಬ ಹೆಸರಿನ ಚನಲ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಇದೀಗ ತೆರೆಯತ್ತ ಬರಲು ಸಿದ್ಧವಾಗಿದೆ. ಬೆಂಗಳೂರು ಜೊತೆಗೆ ಕಿತ್ತೂರ ಕರ್ನಾಟಕದ ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಚಿತ್ರದ ಸಂಪೂರ್ಣ ಪೋಸ್ಟ್ ಪ್ರೋಡಕ್ಷನ್ ಕಾರ್ಯ ಮುಗಿಸಿದ್ದು ಸೆನ್ಸಾರಗೆ ಕಳಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಕಲಾವಿದ ಮಾಳು ನಿಪನಾಳ ಹಾಡಿದ “ಜಾತ್ರೆ ಹೊಂಟೈತಿ” ಹಾಡು ಗೋಕಾಕ ತಾಲೂಕಿನ ಉದಗಟ್ಟಿ ಶ್ರೀ ಉದ್ದಮ್ಮದೇವಿ ಜಾತ್ರೆಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಗೊಂಡು ಯೂಟ್ಯೂಬಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ನಾಯಕರಾಗಿ, ನಿರ್ಮಾಪಕರಾಗಿರುವ ವಿಜಯಪುರದ ಶಶಿಕಾಂತ್ ಈಗಾಗಲೇ ಹಲವಾರು ಕಿರುಚಿತ್ರಗಳು, ಆಲ್ಬಂಗಳನ್ನು ನಿರ್ಮಿಸಿದ್ದಲ್ಲದೆ ೨. ಸಾವಿರಕ್ಕೂ ಹೆಚ್ಚು ನೃತ್ಯ ಪಟುಗಳಿಗೆ ನೃತ್ಯವನ್ನು ಕಲಿಸಿದ ನೃತ್ಯ ನಿರ್ದೇಶಕರು ಮತ್ತು ಎಂ.ಬಿ.ಎ ಪದವೀಧರರು.

ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಹಾಗೂ ಎರಡನೇ ನಾಯಕನಾಗಿ ನಟ ವಿಕ್ರಾಂತ್ , ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸುತ್ತಿದ್ದಾರೆ . ಪಾರು ದಾವಣಗೆರೆ ಒಂದು ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ . ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ನಟಿಸಿ ಗಮನ ಸೆಳೆದಿದ್ದಾರೆ . ಅಲ್ಲದೆ ಸಂತೋಷ್ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ . ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ,ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ನಿರ್ದೇಶನ-ರಮೇಶ್ ಕೃಷ್ಣ , ರೋಹನ್ ದೇಸಾಯಿ , ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಖ್ಯಾತ ಗಾಯಕರಾದ ರಾಜೇಶಕೃಷ್ಣ ‘ಓಂ ನಮೋ’ ಎಂಬ ಹಾಡನ್ನು ಹಾಡಿದ್ದಾರೆ. ಮೂರು ಹಾಡುಗಳಿಗೆ ಮಾಳು ನಿಪನಾಳ, ಪ್ರಣತಿ ರಾವ್, ಆರಿಫ್ ಅಸ್ಲಾಂ , ಮೇಘನಾ ಕುಲಕರ್ಣಿ ಧ್ವನಿ ನೀಡಿದ್ದಾರೆ, ಸಂಕಲನ ಮತ್ತು ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ವಿಜಯಪುರದ ನಟರಾಜ ಎಂದೆ ಖ್ಯಾತರಾದ ಶಶಿಕಾಂತ್ ಪಿ ನಾಟಿಕರ್ ನಟಿಸಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಸಹ ನಿರ್ದೇಶನ ಸಾಮ್ರಾಟ ಶ್ರೀನಿವಾಸ.ಎಸ್.ಸಿ, ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ(ರಾಯದುರ್ಗ),ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ,ಈ ಮೊದಲೇ ಶಂಖನಾದ ಚಲನ ಚಿತ್ರ ನಿರ್ದೇಶಿಸಿದ್ದ ಗುಳೇದಗುಡ್ಡದ ವಿಶ್ವನಾಥ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ.
*****
ವರದಿ
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬