ಅಡವಿ ನರಿ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ ತಿಳಿದಾಕ್ಷಣ ಅಗ್ನಿಶಾಮಕ ಸಿಬ್ಬಂದಿಯಿಂದ ಯಶಸ್ವಿ ಕಾರ್ಯಾಚರಣೆ.

ಬುರ್ಲಟ್ಟಿ ಏಪ್ರಿಲ್.21

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಅಡವಿ ನರಿಯು ಕಾಲು ಜಾರಿ ಸುಭಾಸ.ನಿಂಗಪ್ಪ.ಹನಗoಡಿ ಎಂಬುವರ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 19/04/2024 ರಂದು ಬೆಳಗಿನ ಜಾವ ಸಮಯ 09:00ಕ್ಕೆ ಶುಕ್ರವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಧಾಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ಮಲ್ಲಿಕಾರ್ಜುನ .ಎಂ.ಬಂದಾಳ ಪ್ರಭಾರ ಪ್ರಮುಖ ಅಗ್ನಿಶಾಮಕ ರವರ ನೇತೃತ್ವದಲ್ಲಿ.

ಸಿಬ್ಬಂದಿಯವರು ಹಾಗೂ ಅರಣ್ಯ ಅಧಿಕಾರಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ಬಾವಿಯ ನೀರಿರುವ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ಅಡವಿ ನರಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 45 ನಿಮಿಷಗಳ ಕಾಲ ಕಷ್ಟಕರ ಜoಟಿ ಕಾರ್ಯಚರಣೆಯನ್ನು ಮಾಡಿ ಅಡವಿ ನರಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು 1) ಮಲ್ಲಿಕಾರ್ಜುನ .ಎಂ.ಬಂದಾಳ 2)ಪ್ರಶಾಂತ ಚವಾಣ 3)ಶಿವಾನಂದ.ಪೂಜಾರಿ 4) ರವೀಂದ್ರ.ಸಂಗಮ 5) ಸಂತೋಷ್ ಚೌಗುಲಾ 6) ಸಚಿನ ಹಲ್ಯಾಳ ಅರಣ್ಯ ಇಲಾಖೆ ಸಿಬ್ಬಂದಿಯವರಾದ 1)ಅಶೋಕ.ದನವಡೆ. 02)ದತ್ತಾ.ಜಾಧವ. 03)ಮುರಗೇಶ.ಠಕ್ಕಣ್ಣವರ್ 4)ಅನಿಲ ಅವಳೆ 5)ಶ್ಯಾಮ.ಕಾಂಬಳೆ ಊರಿನ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಕ್ರಮ ಕೈಗೊಂಡರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button