ನೇಹಾ ಹೀರೆಮಠರವರ ಅಮಾನವೀಯ ಕೊಲೆ ಆರೋಪಿ ಫಯಾಜ್ ನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು – ಡಿ ಎಸ್ ಎಸ್ ಆಗ್ರಹ.
ಕಲಬುರ್ಗಿ ಏಪ್ರಿಲ್.22
ಕರ್ನಾಟಕ ದಲಿತ ಸಂಘರ್ಷ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಮಿತಿಯು ತಮ್ಮಲ್ಲಿ ಆಗ್ರಹ ಪಡಿಸುವುದೇನೆಂದರೆ, ಹುಬಳಿ-ಧಾರವಾಡ ಅವಳಿ ಜಿಲ್ಲೆಯಲ್ಲಿ ಮಹಾ ನಗರ ಪಾಲಿಕೆಯ ಸದಸ್ಯರಾದ ನಿರಂಜನ್ ಹಿರೇಮಠ ಎಂಬುವರ ಪುತ್ರಿ ನೇಹಾ ಹಿರೇಮಠರವರನ್ನು ಬಿ.ವಿ.ಬಿ. ಕಾಲೇಜ್ ಕ್ಯಾಂಪಿಸ್‌ನಲ್ಲಿ 9 ಬಾರಿ ಚಾಕುವಿನಿಂದ ಇರಿದು ಬರ್ಬರಾಗಿ ಹಾಡು ಹಗಲೆ ಹತ್ಯೆ ಮಾಡಿರುವುದು ಅತ್ಯಂತ ಅಪಾಯಕಾರಿಯಾಗಿದೆ ಹಾಗೂ ಸಮಾಜದಲ್ಲಿ ಸಾಮರಸ್ಯ ಕಡಿಮೆಯಾಗಿದೆ. ಅಲ್ಲದೇ ಈ ಹಿಂದೆಯೂ ಕೂಡ ರಾಜ್ಯದ ಹಲವು ಕಡೆ ಮಹಿಳೆಯರ ಮೇಲೆ ಅನ್ಯಾಯ ಅತ್ಯಚಾರಗಳಾದರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿ ರಾಜ್ಯದ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.
ಅದಕ್ಕಾಗಿ ಸಮಾಜ ಘಾತಕ ಶಕ್ತಿಗಳಿಗೆ ರಾಜಕೀಯವಾಗಿ ಹಾಗೂ ಪೊಲೀಸ್ ಠಾಣೆಗಳಲ್ಲಿ ರಾಜ್ಯ ಮರ್ಯಾದೆ ಸಿಗುವುದರಿಂದ ರಾಜಾರೋಷವಾಗಿ ಕಾನೂನು ಬಾಹಿರವಾಗಿ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯ ಸರಕಾರ ಕೂಡಲೇ ಈ ಪ್ರಕರಣವನ್ನು ಸತ್ಯಾಂಶವನ್ನು ಹೊರಬರಲು ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿಯಿಂದ ಆಗ್ರಹ ಪಡಿಸುತ್ತದೆ. “ರಕ್ಷಿಸಿ, ರಕ್ಷಿಸಿ ರಾಜ್ಯದಲ್ಲಿನ ಅಮಾಯಕರ ವಿದ್ಯಾರ್ಥಿನಿಗಳನ್ನು ರಕ್ಷಿಸಿ ಪುಂಡ ರೌಡಿಗಳಿಂದ ವಿದ್ಯಾರ್ಥಿನಿಯರನ್ನು ರಕ್ಷಣೆ ನೀಡಿ” ಡಿ.ಸಿ ಯವರ ಮುಖಾಂತರ ಮುಖ್ಯಮಂತ್ರಿ ಯವರಿಗೆ ಮನವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿ.ಎಸ್ಎಸ್ ಜಿಲ್ಲಾ ಸಂಚಾಲಕರು ಸಚಿನ್ ಎಂ. ದೊಡ್ಡಮನಿ. ಜಿಲ್ಲಾ ಸಂ. ಸಂಚಾಲಕರು ಭೀಮಾಶಂಕರ್ ಎಂ. ಕದಮ್. ಜಿಲ್ಲಾ ಸಂ ಸಂಚಾಲಕರು ಸತೀಶ ಭಟ್ಟರ್ಕಿ. ಜಿಲ್ಲಾ ಮುಖಂಡರಾದ ಆನಂದ ಎಸ್ ಕೊಳ್ಳೂರು. ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕರು ಶಿವಾನಂದ ಎಸ್ ಸಾವಳಗಿ. ಕಲಬುರ್ಗಿ ತಾಲೂಕ ಸಂಚಾಲಕರು ವಿಘ್ನೇಶ. ಎನ್ ಶ್ರೀಮನಕರ್ ಹಾಗೂ ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ ಎಸ್ ಸಾವಳಗಿ. ಕಲಬುರ್ಗಿ.