ಶಿವಶರಣೆ ಅಕ್ಕಮಹಾದೇವಿಯವರ ಜೀವನಾದರ್ಶಗಳು ಇಂದಿನ ಮಹಿಳೆಯರಿಗೆ ದಾರಿ ದೀಪ – ಕಡಪಟ್ಟಿ.

ಹುನಗುಂದ ಏಪ್ರಿಲ್.23

ಸಮಾಜದಲ್ಲಿ ಮಹಿಳೆಯರಿಗೂ ಪುರುಷ ರಷ್ಟೇ ಸರಿ ಸಮಾನ ಸ್ಥಾನಮಾನ ಕಲ್ಪಿಸಬೇಕೆಂದು 12 ನೇ ಶತಮಾನದಲ್ಲಿಯೇ ಹೋರಾಟ ಮಾಡಿದ ವಚನಗಾರ್ತಿ ಅಕ್ಕಮಹಾದೇವಿಯು ಇಂದಿನ ಮಹಿಳೆಯರ ಬದುಕಿಗೆ ಆದರ್ಶಪ್ರಾಯ ಎಂದು ವಿ.ಮ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಹೇಳಿದರು. ಪಟ್ಟಣದ ಶ್ರೀ ವಿಜಯ ಮಹಾಂತೇಶ ಉಚಿತ ಪ್ರಸಾದ ನಿಲಯದಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ಸಹಯೋಗದಲ್ಲಿ ಅಕ್ಕ ಮಹಾದೇವಿಯ 73 ನೇ ಜಯಂತಿಯನ್ನು ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಾಮರಸ್ಯ ಮೂಡಿಸಲು, ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ ಅಕ್ಕ ಮಹಾ ದೇವಿಯವರ ಹೆಸರು ಇತಿಹಾಸದ ಪುಟದಲ್ಲಿ ಉಳಿದು ಕೊಂಡಿದ್ದು, ಅವರ ಆದರ್ಶಗಳು ಇಂದಿನ ಮಹಿಳೆಯರಿಗೆ ದಾರಿ ದೀಪವಾಗಿದೆ ಜೀವನದ ಸತ್ಯಗಳನ್ನು ಆಧ್ಯಾತ್ಮಿಕ ನಿಧಿಯ ರತ್ನಗಳನ್ನು ನಿರೂಪಿಸಿ, ಅದನ್ನು ಪಡೆಯುವ ವಿಧಾನವನ್ನು ತಿಳಿ ಸಿಕೊಡುವ ಧರ್ಮವು ಯಾರೊಬ್ಬರ ಆಸ್ತಿಯೂ ಅಲ್ಲ ಎಂದು ಸಾರಿದ ಅಕ್ಕಮಹಾದೇವಿ ಮಹಿಳಾ ಸಮಾಜದ ಮೇರು ಪರ್ವತವಾಗಿ ಬೆಳಗಿದರು.ಶಿವಶರಣೆ ಅಕ್ಕ ಮಹಾದೇವಿಯಂತೆ ಮಹಿಳೆಯರು ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳ ಬೇಕು ಎಂದರು.ಅಕ್ಕನ ಬಳಗದ ಅಧ್ಯಕ್ಷೆ ದೊಡ್ಡಮ್ಮ ಹವಾಲ್ದಾರ ಮಾತನಾಡಿ, ಮುಖಂಡರಾದ ಸಂಗಣ್ಣ ಚಿನಿವಾಲ, ಬಸವರಾಜ ಕೆಂದೂರ, ಎಂ.ಎಸ್.ಮಠ. ಅರುಣೋದಯ ದುದ್ಗಿ, ರಾಮನಗೌಡ ಬೆಳ್ಳಿಹಾಳ,ಶಿವಪ್ಪ ನಾಗೂರ, ಡಾ,ಶಿವಶಂಕರ ಮುದಗಲ್, ರವಿ ಹುಚನೂರ, ಬಸವರಾಜ ರಕ್ಕಸಗಿ,ರಾಚಪ್ಪ ರಾಜಮನಿ, ಸಂಗಣ್ಣ ಎಮ್ಮಿ, ವಿ.ಎಸ್.ಕಠಾಣಿ,ಪಿ.ಆಯ್.ಪೂಜಾರಿ,ಬಣಜಿಗ ಸಮಾಜದ ಮಹಿಳಾ ಅಧ್ಯಕ್ಷೆ ರಾಣಿ ತೋಪಲಕಟ್ಟಿ, ಅಕ್ಕಮಹಾದೇವಿ ಮಹಿಳಾ ಸಂಘದ ಸದಸ್ಯರಾದ ದೀಪಾ ಸುಂಕದ,ಮೀನಾಕ್ಷಿ ಕುಂಟೋಜಿ,ಜ್ಯೋತಿ ವಡವಡಗಿ,ಶೋಭಾ ಲೆಕ್ಕಿಹಾಳ,ಮಂಜುಳಾ ಕಾಶಿನದಡ್ಡಿ,ಶೋಭಾ ಗೊಣ್ಣಾಗಾರ,ಮಹಾಂತಮ್ಮ ಹೊಸೂರ, ಅನ್ನಪೂರ್ಣ ಹೊಸೂರ, ವಿಜಯಲಕ್ಷ್ಮಿ ಚಿನಿವಾಲರ,ವಂದನಾ ಅಂಕದ,ಅನ್ನಪೂರ್ಣ ದೇವರಡ್ಡಿ, ಶೀವಲೀಲಾ ಅಂಟರತಾನಿ, ಅಮರಮ್ಮ ತೋಟಗೇರ, ವಿಜಯಲಕ್ಷ್ಮಿ ನೇರೆಗಲ್ಲ ಮೀನಾಕ್ಷಿ ಪಟ್ಟಣಶೆಟ್ಟಿ ಸೇರಿದ್ದಂತೆ ಅನೇಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button