ಏ. 26 ಮತ್ತು 27 ರಂದು ಹುನಗುಂದ ಮತಕ್ಷೇತ್ರದಲ್ಲಿ ಮನೆ ಮನೆಯ ಮತದಾನಕ್ಕೆ ಸಕಲ ಸಿದ್ಧತೆ – ಶ್ರೀ ಧರ ಗೊಟೂರ.

ಹುನಗುಂದ ಏಪ್ರಿಲ್.23

ರಾಜ್ಯದಲ್ಲಿ 2 ನೇ ಹಂತದಲ್ಲಿ ನಡೆಯಲಿರುವ ಬಾಗಲಕೋಟ ಲೋಕಸಭೆ ಚುನಾವಣೆಯ ಮತದಾನಕ್ಕೆ ಕೇವಲ 13 ದಿನ ಬಾಕಿ ಇರುವ ಹಿನ್ನಲೆಯಲ್ಲಿ 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಕಲ ಚೇತನರಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಿದ್ದರಿಂದ ಇದೇ ಏ. 26 ಮತ್ತು 27 ಎರಡು ದಿನ ಮತದಾನ ನಡೆಯಲಿದೆ. ಹುನಗುಂದ ಮತ ಕ್ಷೇತ್ರದಲ್ಲಿ ಮನೆ ಮನೆಯ ಮತದಾನಕ್ಕೆ ಸಕಲ ಸಿದ್ದತೆಯನ್ನು ಮಾಡಿ ಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೊಟೂರ ತಿಳಿಸಿದ್ದಾರೆ.85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲ ಚೇತನರು ಮನೆಯಲ್ಲಿ ಮತದಾನ ಮಾಡಲು ಬಯಸಿ 12 ಡಿ ಫಾರ್ಮದಲ್ಲಿ ಒಟ್ಟು 219 ಜನರು ಅರ್ಜಿ ಸಲ್ಲಿಸಿದ್ದು.ಹುನಗುಂದ ಮತಕ್ಷೇತ್ರದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ 43 ಜನ ಪುರುಷರು,102 ಜನ ಮಹಿಳೆಯರು ಸೇರಿ 146 ಜನ ಹಿರಿಯ ನಾಗರಿಕರು ಮನೆಯಲ್ಲಿ ಮತದಾನ ಮಾಡಲಿದ್ದಾರೆ.ಇನ್ನು ವಿಕಲ ಚೇತನರು 34 ಜನ ಪುರುಷರು, 39 ಜನ ಮಹಿಳೆಯರು ಸೇರಿದ್ದಂತೆ ಒಟ್ಟು 73 ಜನ ವಿಕಲಚೇತನರು ಸೇರಿದ್ದಂತೆ ಒಟ್ಟು 219 ಜನರು ಮನೆಯಲ್ಲಿ ಮತದಾನ ಮಾಡಲು ಬಯಸಿ ಅರ್ಜಿ ಸಲ್ಲಿಸಿ ಮತದಾನ ಮಾಡಲಿದ್ದಾರೆ.ಮನೆ ಮನೆಯ ಮತದಾನದ ವೇಳೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆಯವರಗೆ ಮತದಾನ ಮಾಡಲು ಅವಕಾಶ ಇರುತ್ತದೆ. ಇವರಿಗೆ ಎರಡು ದಿನ ಮತದಾನಕ್ಕೆ ಅವಕಾಶ ನಿಡಿದ್ದರಿಂದ ಏ. 26 ರ ಮೊದಲು ದಿನ ಮತದಾರರು ಮತದಾನ ಮಾಡಲು ಆಗದಿದ್ದವರು ಮತ್ತು ಅಧಿಕಾರಿಗಳಿಗೆ ಸಿಗದಿದ್ದರೇ ಅಂತವರು ಎರಡನೆಯ ದಿನವಾದ 27 ರಂದು ಮತದಾನ ಮಾಡಬಹುದು.ಇನ್ನು ಮೊದಲ ದಿನ ಮತದಾನವಾದ ಬಳಿಕ ಆ ಡಬ್ಬಿಯನ್ನು ತಹಶೀಲ್ದಾರ ಕಾರ್ಯಾಲಯದಲ್ಲಿ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಏಣಿಕೆ ಮಾಡಿ ಮೊತ್ತೊಂದು ಡಬ್ಬಿಗೆ ಹಾಕಿ ಸೀಲ್ ಮಾಡಲಾಗುವುದು.ಅದೇ ಡಬ್ಬಿಯನ್ನು ಎರಡನೆಯ ದಿನವೂ ಬಳಿಸಲಾಗುವುದು. 85 ಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು,ವಿಕಲ ಚೇತನರ ಮನೆಯಲ್ಲಿ ಮತದಾನ ಮಾಡುವ ವೇಳೆಯಲ್ಲಿ ಇಬ್ಬರು ಪೋಲಿಂಗ್ ಅಧಿಕಾರಿಗಳು, ಓರ್ವ ಮೈಕ್ರೋ ಅಬ್ಸರ್ವರ್, ಓರ್ವ ಪೊಲೀಸ್ ಸೇರಿ 4 ಜನ ಅಧಿಕಾರಿಗಳು ಅದರ ಜೊತೆಗೆ ಒಬ್ಬರು ವಿಡಿಯೋ ಗ್ರಾಪರ್ ಮತ್ತು ಮೇಲ್ವಾಚಾರಕರಾಗಿ ಗ್ರಾಮಾಡಳಿತ ಅಧಿಕಾರಿ,ಬಿ.ಎಲ್.ಓ.ಗ್ರಾಮ ಸಹಾಯಕ ಮನೆಗಳನ್ನು ತೋರಿಸಲು ಅಧಿಕಾರಿಗಳಿಗೆ ಸಹಾಯ ಮಾಡಲಿದ್ದಾರೆ.ಮನೆ ಮನೆಯ ಮತದಾನದಲ್ಲಿ ವೇಳೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಏಜೆಂಟರ್ ಸಹ ಇರಲಿದ್ದಾರೆ.ಇನ್ನು ಹಿರಿಯ ನಾಗರಿಕರು ಮತ್ತು ವಿಕಲ ಚೇತನರ ಮತದಾನ ಮಾಡುವಲ್ಲಿ ತೊಂದರೆಯಾದರೇ ಅವರ ಕುಟುಂಬದ ಓರ್ವ ಸದಸ್ಯರ ಸಹಾಯವನ್ನು ಸಹ ಪಡೆಯ ಬಹುದಾಗಿದೆ ಎಂದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

One Comment

Leave a Reply

Your email address will not be published. Required fields are marked *

Back to top button