ಮೋದಿ ಅಧಿಕಾರ ಅಧಿಯಲ್ಲಿ ಶ್ರೀಮಂತರಿಗೆ ಹಂಚಿದ ದೇಶದ ಸಂಪತ್ತು.
ವಿಜಯಪುರ ಏಪ್ರಿಲ್.27





ವಿಜಯಪುರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆಯ ಬೃಹತ್ ಯಾರ್ಲಿ ನಡೆಯಿತು, ಮೋದಿ ಅಧಕಾರಕ್ಕೆ ಬಂದ ಮೇಲೆ ಶ್ರೀಮಂತರಿಗೆ ದೇಶದ ಸಂಪತ್ತು ಹಂಚಿದ್ದಾರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆ ಎಲ್ಲ ಶ್ರೀಮಂತರ ಸಂಪತ್ತು ಬದಲಾವಣೆ ಮಾಡಿ ರೈತರಿಗೆ ಮಹಿಳೆಯರಿಗೆ ಹಂಚಿಕೆ ಮಾಡುವ ಮೂಲಕ ಎಲ್ಲರ ಆರ್ಥಿಕ ಬದುಕು ಸುಧಾರಿಸಲಾಗುವುದು ಎಂದು ರಾಷ್ಟ್ರೀಯ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಹೇಳಿದರು, ಅವರು ದೇಶದ ಶೇಕಡಾ ೭೦ ರಷ್ಟು ಜನರು ಬಳಿ ಇತಬೇಕಾದ ಸಂಪತ್ತು ಕೇವಲ ಶೇಕಡಾ ೧ ರಷ್ಟು ಜನರು ಬಳಿಯಿದೆ, ಮೋದಿ ಆಡಳಿತದ ಅವಧಿಯಲ್ಲಿ ಮತ್ತಷ್ಟು ಶ್ರೀಮಂತರನ್ನಾಗಿ ಮಾಡಿದೆ ವಿಮಾನ ನಿಲ್ದಾಣ ರೈಲು ನಿಲ್ದಾಣ ಬಂದರು ಸೇರಿದಂತೆ ಅನೇಕ ರಾಷ್ಟ್ರೀಯ ಸಂಪತ್ತುಗಳನ್ನು ಉದ್ಯಮಿಗಳ ಪಾಲಾಗಿದೆ,ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ದೇಶದ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಮೈತ್ರಿಕೂಟ ಶ್ರಮಿಸಿಲಿದೆ ದೇಶದ ಪ್ರತಿಯೊಬ್ಬ ಪ್ರಜೆಗಳ ಬದುಕು ಸುಧಾರಿಸಲಿದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ, ಯುವಕರಿಗೆ ಉದ್ಯೋಗ ರೈತರ ಸಾಲ ಮನ್ನಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತದೆ ಈ ಬಾರಿಯ ಚುನಾವಣೆಯ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಾಶ ಪಡಿಸಲು ಹೊರಟವರು ಹಾಗೂ ಅದನ್ನು ಉಳಿಸಲು ಹೊರಟವರ ನಡುವಿನ ಹೋರಾಟ, ಸಂವಿಧಾನ ಉಳಿಸುವವರನ್ನು ಆರಿಸಿ ತರಬೇಕು,ಹಾಗೂ ಕರ್ನಾಟಕ ಸರ್ಕಾರ ಬಡ ಮಹಿಳೆಯರಿಗೆ ಈಗಾಗಲೇ ಗೃಹ ಲಕ್ಷ್ಮಿ ಯೋಜನೆ ಅಡ್ಡಿಯಲ್ಲ ವರ್ಷಕ್ಕೆ ೨೪ ಸಾವಿರ ರೂಪಾಯಿ ನೀಡುತ್ತದೆ ಕೇಂದ್ರ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ರಾಜ್ಯದ ಮಹಿಳೆಯರಿಗೆ ೧,೨೪ ಸಾವಿರ ದೊರೆಯಲ್ಲಿದೆ ಎಂದು ವಿವರಿಸಿದ್ದರು.

ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸಚಿವರಾದ ಎಂ ಬಿ ಪಾಟೀಲ,ಶಿವಾನಂದ ಪಾಟೀಲ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ರಣದೀಪ್ ಸಿಂಗ್ ಸುಜೇವಾಲ ಹಾಗೂ ಇನ್ನೂ ಅನೇಕ ಮಾತನಾಡಿದರು, ಈ ಕಾರ್ಯಕ್ರಮದಲ್ಲಿ ಶಾಸಕರಾದ ಅಪ್ಪಾಜೀ ನಾಡಗೌಡ ಯಶವಂತರಾಯಗೌಡ ಪಾಟೀಲ ವಿಠ್ಠಲ ಕಟಕಗೊಂಡ ಅಶೋಕ ಮನಗೊಳಿ ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ ಪ್ರಕಾಶ ರಾಠೋಡ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ಹಾಗೂ ಡಿಸಿಸಿ ಅಧ್ಯಕ್ಷರು ,ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.