ಕಾಂಗ್ರೇಸ್ ಪಕ್ಷ ದಿಂದ ಗ್ಯಾರಂಟಿ ಕಾರ್ಡ್ ವಿತರಣೆ.
ದೇವರ ಹಿಪ್ಪರಗಿ ಏಪ್ರಿಲ್.28
ವಿಜಯಪುರ ಜಿಲ್ಲೆಯ ಲೋಕಸಭೆ ಚುನಾವಣೆ ಮೀಸಲ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರು ಚುನಾವಣೆಯ ಪ್ರಚಾರ ಹಾಗೂ ಗ್ಯಾರಂಟಿ ಕಾರ್ಡ ವಿತರಣೆ ಮಾಡಲಾಯಿತು, ದೇವರ ಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಣಶ್ಯಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಯಲಗೋಡ ಪಂಚಾಯತಿ ಕೊಂಡಗೂಳಿ ಪಂಚಾಯತಿ ಹುಣಶ್ಯಾಳ ಪಂಚಾಯತಿ ಕೆರುಟಗಿ ಪಂಚಾಯತಿಗಳು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗೆ ಹೋಗಿ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಗೃಹ ಜ್ಯೋತಿ ಅನ್ನಭಾಗ್ಯ ಶಕ್ತಿ ಯುವನಿಧಿ ಈ ಯೋಜನೆಯನ್ನು ಜಾರಿಗೆ ತಂದು ನುಡಿದಂತೆ ನಡೆದ ನಮ್ಮ ಸರ್ಕಾರ,ಹಾಗೂ ಇನ್ನೂ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರತಿ ಬಡ ಕುಟುಂಬಕ್ಕೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ, ಯುವ ಬೆಳಕು ಪ್ರತಿವರ್ಷ ಒಂದು ಲಕ್ಷ ವೇತನ ಹಾಗೂ ವಿದ್ಯಾವಂತರು ನಿರುದ್ಯೋಗಿ ಯುವತಿಯರಿಗೆ ಯುವಕರಿಗೆ ಮೊದಲ ಉದ್ಯೋಗ, ರೈತರ ಸಾಲ ಮನ್ನಾ ಹಾಗೂ ಶಾಶ್ವತ ಆಯೋಗ ರಚನೆ, ಶ್ರಮಿಕ ನ್ಯಾಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜಾತಿಗಣತಿ ಈ ಎಲ್ಲಾ ಗ್ಯಾರಂಟಿ ಗಳನ್ನು ಪ್ರತಿ ಹಳ್ಳಿಗೆ ಹೋಗಿ ಗ್ಯಾರಂಟಿಗಳ ಬಗ್ಗೆ ವಿವರವಾಗಿ ಹೇಳಿದರು, ಬಿಜೆಪಿ ಸರ್ಕಾರ ಬಂದ ಬಳಿಕ ರೈತರಿಗೆ ಮತ್ತು ಬಡವರಿಗೆ ಬಹಳ ಅನ್ಯಾಯ ಮಾಡಿದೆ ಅದರ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮನ ಮಿಡಿದಿದೆ ಎಂದು ಹೇಳಿದರು.
ಹುಣಶ್ಯಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಕಾರ್ಡ ವಿತರಣೆಯ ಉಸ್ತುವಾರಿಗಳಾದ ದೇವರ ಹಿಪ್ಪರಗಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾದ ಸರೀತಾ ನಾಯಕ ಮೈನದೀನ್ ಬಾಗವಾನ ಅಧ್ಯಕ್ಷರು ಕಾಂಗ್ರೆಸ್ ಸಾಮಾಜಿಕ ಜಾಲತಾಣ ದೇವರ ಹಿಪ್ಪರಗಿ, ಕುಮಾರ ರಾಠೋಡ ಸದಾಶಿವ ಕಡ್ಲೆವಾಡ ಬೈರಡ್ಡಿ ಚಟ್ನಳ್ಳಿ,ಶಪೀಕ ಸಿಪಾಯಿ ಹಾಗೂ ಯಲಗೋಡ ಗ್ರಾಮದ ಕಾಂಗ್ರೆಸ್ ಪಕ್ಷ ಮುಖಂಡರಾದ ಮಹಮ್ಮದ ರಪೀಕ್ ಕಣಮೇಶ್ವರ,ಗ್ರಾಮ ಪಂಚಾಯತಿ ಅಧ್ಯಕ್ಷರು ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಜನಪ್ರತಿ ನಿಧಿಯಾದ ಶಿವಶಂಕರ ಬೂದಿಹಾಳ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಹುಸೇನ್ ತಳ್ಳೋಳ್ಳಿ,ಗ್ರಾಮ ಪಂಚಾಯತಿ ಸದಸ್ಯರಾದ ರಾಜಪಟೇಲ್ ಕಣಮೇಶ್ವರ ಹಾಗೂ ಗ್ರಾಮದ ಮಹಿಳೆಯರು,ಮತ್ತು ಕಾರ್ಯಕರ್ತರು ಈ ಗ್ಯಾರಂಟಿ ಕಾರ್ಡ ವಿತರಣೆಯ ಸಂದರ್ಭದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.