ಒಂದು ದೇಶ ಒಂದು ಚುನಾವಣೆ.
ಬಾಗಲಕೋಟೆ ಏಪ್ರಿಲ್.28
ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರ ಅಧಿನದ ಕಾನೂನು ಆಯೋಗವು ಒಂದು ದೇಶ ಒಂದು ಚುನಾವಣೆಯ ಹೊಸ ಅಧ್ಯಾಯವನ್ನು ಸಂವಿಧಾನದಲ್ಲಿ ತಿದ್ದುಪಡಿ ತರಲು ಶಿಫಾರಸು ಮಾಡಿ ಮುಂದಿನ ಐದು ವರ್ಷಗಳಲ್ಲಿ ಶಾಸಕಾಂಗ ನಿಯಮಗಳನ್ನು ಸಮ್ಮಿಳಿತ ಗೊಳಿಸಿ 19ನೆ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಅಂದರೆ 2029 ರ ಮೇ _ಜೂನ್ ನಲ್ಲಿ ಏಕಕಾಲದ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ಸಂವಿಧಾನದ ಹೊಸ ಅಧ್ಯಾಯದಲ್ಲಿ ಲೋಕಸಭೆ, ವಿಧಾನಸಭೆ, ಪಂಚಾಯತ್, ಪುರಸಭೆಗಳಿಗೆ ಏಕಕಾಲಿಕ ಚುನಾವಣೆಗಳ ಅಸ್ತಿರತೆ ಮತ್ತು ಸಾಮಾನ್ಯ ಮತದಾರರ ಪರಿಷ್ಕರಣೆಯ ವಿಷಯಗಳು ಅಡಕವಾಗಿದ್ದು ಒಂದೆ ಸಮಯದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವುದು ಸಂವಿಧಾನದಲ್ಲಿನ ನಿಬಂದನೆಗಳನ್ನು ಅತಿಕ್ರಮಿಸಲು ಅಥವಾ ಅವಿಶ್ವಾಸ ದಿಂದ ಸರ್ಕಾರ ಪತನವಾದರೆ, ಅತಂತ್ರವಾದರೆ ವಿವಿಧ ರಾಜಕೀಯ ಪಕ್ಷಗಳ ಪ್ರತಿ ನಿಧಿಗಳೊಂದಿಗೆ ಏಕತ್ವ ಸರ್ಕಾರ ರಚನೆಗೆ ಶಿಪಾರಸು ಮಾಡಲು ಈ ಆಯೋಗ ಶಿಫಾರಸ್ಸು ತಯಾರಿದೆ. ಏಕೀಕರಣದ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಸದನದ ಕಾನೂನು ಸಮಿತಿ ಉಳಿದ ಅವಧಿಗೆ ಚುನಾವಣೆ ಮೂಲಕ ಮುನ್ನಡೆಸಲು ಕಾನೂನು ಆಯೋಗವು ಸಂವಿಧಾನದಲ್ಲಿ ಹೊಸ ಅಧ್ಯಾಯವು ಸೇರಿಸುವ ಮೂಲಕ 2029 ರ ಅವಧಿಗೆ ಶಿಫಾರಸ್ಸು ಮಾಡಲಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ. ಶಿರೂರು.
ಸುದ್ದಿ ಸಂಗ್ರಹ