ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಈ. ತುಕಾರಾಮ ಗೆಲ್ಲಿಸಿಕೊಳ್ಳಿ ಎಂದು – ಮತದಾರರಿಗೆ ಸಿ.ಎಂ ಹಾಗೂ ಡಿ.ಸಿ.ಎಂ ಕರೆ.

ಕೂಡ್ಲಿಗಿ ಏಪ್ರಿಲ್.29

ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಈ ತುಕಾರಾಮ್ ಅವರ ಪರ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ. ಮೋದಿಯವರು ಹತ್ತತ್ತು ವರ್ಷ ಪ್ರಧಾನಿಯಾಗಿ ಬಡ ಭಾರತೀಯರ, ಮಧ್ಯಮ ವರ್ಗದ ಭಾರತೀಯರ ಪ್ರಗತಿಗಾಗಿ, ಏಳಿಗೆಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿ ಮಾಡಿದ ಉದಾಹರಣೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು. ಮೋದಿ ಜನರಿಗೆ ₹15 ಲಕ್ಷ ಕೊಟ್ರಾ? 100 ದಿನಗಳಲ್ಲಿ ವಿದೇಶದಿಂದ ಕಪ್ಪು ಹಣ ತೆಗೆದುಕೊಂಡು ಬಂದು ಎಲ್ಲರ ಖಾತೆಗೂ ಹಾಕುತ್ತೇವೆ ಎಂದು ಹೇಳಿದ್ರಲ್ಲಾ, ಹಾಕಿದರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದರಾ? ರೈತರ ಆದಾಯ ದ್ವಿಗುಣ ಮಾಡಿದರಾ? ಅಚ್ಛೇ ದಿನ್ ಬಂದ್ವಾ? ಈ ಕಾರಣದಿಂದಲೇ ಖಾಲಿ ಚೊಂಬು ಕೊಟ್ಟಿದ್ದಾರೆ. ಎಂದು ನಾವು ಹೇಳುತ್ತಿರುವುದು ಎಂದು ಸಮರ್ಥಿಸಿಕೊಂಡರು. ಒಂದು ಆಶ್ವಾಸನೆಯನ್ನೂ ಮೋದಿ ಈಡೇರಿಸಿಲ್ಲ. ಎಚ್.ಡಿ. ಕುಮಾರಸ್ವಾಮಿ ಈಗ ಏನಾದರೂ ಹೇಳಿಕೊಳ್ಳಲಿ. ಆದರೆ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅಭಿವೃದ್ಧಿ ಕೆಲಸಗಳನ್ನೂ ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು. ತುಕಾರಾಮ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಅವರು ಶಾಸಕರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಕರ್ನಾಟಕದ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವುದಕ್ಕೆ ಬಳ್ಳಾರಿ ಲೋಕಸಭಾ ದಿಂದ. ಈ. ತುಕಾರಾಮ್ ಅವರು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಕಾರ್ಯಕ್ರಮ ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ. ಈ ಭಾಗದ ಜನ ದೇಶಕ್ಕೆ ಶಕ್ತಿ ತುಂಬಿದ್ದಾರೆ. ಇದೇ ಭೂಮಿಯಲ್ಲಿ ಸೋನಿಯಾ ಗಾಂಧೀಜಿ ಯವರಿಗೆ ರಾಜಕೀಯ ಶಕ್ತಿಯನ್ನು ತುಂಬಿರ ತಕ್ಕಂತಹ ಕ್ಷೇತ್ರ. ಸೋನಿಯಾ ಗಾಂಧೀಜಿಯವರು ಕೂಡ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ನಮ್ಮ ಸರ್ಕಾರ ಬಂದ ನಂತರ ಜಾರಿಗೆ ಬಂದ ಮೊದಲ ಗ್ಯಾರಂಟಿ ಯೋಜನೆ ಇದಾಗಿದೆ. ಇದರಿಂದ ಕೋಟ್ಯಂತರ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸರಳ ಸಜ್ಜನಿಕೆ ವ್ಯಕ್ತಿ. ಇಂಥ ವ್ಯಕ್ತಿ ನಿಮಗೆ ಅಭ್ಯರ್ಥಿಯಾಗಿರುವುದು ನಿಮ್ಮ ಪುಣ್ಯ. ಈ ಬಾರಿ ಒಳ್ಳೆಯದೇ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ಕೊಟ್ಟರು‌. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎನ್. ಟಿ. ಶ್ರೀನಿವಾಸ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮ್ಮ ಕ್ಷೇತ್ರಕ್ಕೆ ಆಗಮಿಸಿದ್ದರಿಂದ ದೊಡ್ಡ ಶಕ್ತಿ ಬಂದಂತಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕೂಡ ಇದೇ ಕ್ರೀಡಾಂಗಣಕ್ಕೆ ಆಗಮಿಸಿ ಪ್ರಚಾರ ಪಡಿಸಿದ್ದರಿಂದ ಇಂದು ಇದೇ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದೆ ನಾನು ಶಾಸಕನಾಗಿ ನಿಂತಿರುವುದು ನನ್ನ ಪುಣ್ಯ ಎಂದರು‌.

ಈ ಕ್ಷೇತ್ರದ ಕಾರ್ಯಕರ್ತರು ಕೂಡ ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ಕಳಿಸಿದ್ದರಿಂದ ಕ್ಷೇತ್ರದ ಜನರು ಋಣ ನಾನು ಯಾವತ್ತೂ ಮರೆಯುವುದಿಲ್ಲ. ನಮ್ಮ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ. ತುಕಾರಾಮ್ ಅವರನ್ನು ನಾವೆಲ್ಲರೂ ಸೇರಿ ಅತಿ ಹೆಚ್ಚು ಮತಗಳ ಅಂತರ ದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಈ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲ್ ಕೃಷ್ಣ ಮಾತನಾಡಿ ಕೂಡ್ಲಿಗಿ ಕ್ಷೇತ್ರದ ಜನರು ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತಾರೆ. ಒಳ್ಳೆಯ ವ್ಯಕ್ತಿಗೆ ಯಾವಾಗಲೂ ಕೂಡ್ಲಿಗಿ ಕ್ಷೇತ್ರದ ಜನರು ಕೈಹಿಡಿಯುತ್ತಾರೆ. ಕೂಡ್ಲಿಗಿ ಕ್ಷೇತ್ರದಲ್ಲಿ ಮುಖ್ಯವಾದ ಕೆಲಸ ಅಂದರೆ 74 ಕೆರೆಗಳಿಗೆ ತುಂಬಿಸುವ ಯೋಜನೆ ಈಗಾಗಲೇ ಕಾಮಗಾರಿ ಪೂರ್ಣ ಗೊಂಡರೆ ಕೂಡ್ಲಿಗಿ ಕ್ಷೇತ್ರದ ಜನರು ನೆಮ್ಮದಿಯಿಂದ ಜೀವನ ಮಾಡುತ್ತಾರೆ. ತಾವುಗಳು ಮುಖ್ಯಮಂತ್ರಿಯವರು ಕೂಡ್ಲಿಗಿ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನವನ್ನು ನೀಡಬೇಕೆಂದು. ಮುಖ್ಯ ಮಂತ್ರಿಯವರಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಗೋಪಾಲ್ ಕೃಷ್ಣ ರವರು ಮನವಿ ಮಾಡಿದರು.ಈ ವೇಳೆ ಅಖಂಡ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಈ ತುಕಾರಾಮ್ ಅವರು ಮಾತನಾಡಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತು ಇನ್ನು ಅನೇಕ ಸಚಿವರು ಶಾಸಕರು. ಈ ಕ್ಷೇತ್ರದಲ್ಲಿ ನೀನೆ ಸೂಕ್ತವಾದ ವ್ಯಕ್ತಿ ಅಂತ ಲೋಕಸಭೆಗೆ ನನ್ನ ಹೆಸರನ್ನು ಘೋಷಣೆ ಮಾಡಿದ್ದಾರೆ. ನಾನು ಈ ಕ್ಷೇತ್ರದ ಜನರಿಗೆ ಪ್ರಾಮಾಣಿಕ ನಿಷ್ಠೆಯಿಂದ ಸೇವೆ ಮಾಡುತ್ತೇನೆ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಸಚಿವ ಜಮೀರ್ ಅಹಮದ್ ಖಾನ್. ಸಚಿವ ರಾಮಲಿಂಗ ರೆಡ್ಡಿ. ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್. ಶಾಸಕ ಗವಿಯಪ್ಪ. ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್. ಕಂಪ್ಲಿ ಶಾಸಕ ಜಿ ಎಂ ಗಣೇಶ್. ಮಾಜಿ ಶಾಸಕರಾದ ಪಿ ಟಿ ಪರಮೇಶ್ವರ್ ನಾಯಕ್. ಮಾಜಿ ಶಾಸಕರಾದ ಭೀಮ ನಾಯ್ಕ್.. ಕೆಎಂಎಫ್ ಅಧ್ಯಕ್ಷರು. ಶಿರಾಶೇಕ್ ಮಾಜಿ ಶಾಸಕರು ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು. ಅಲ್ಲಂ ವೀರಭದ್ರಪ್ಪ. ಮಾಜಿ ಸಚಿವರು ನಬಿ ಸಾಬ್. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಗುಂಡುಮುಣಗು ತಿಪ್ಪೇಸ್ವಾಮಿ . ಟಿ ಜಿ. ಮಲ್ಲಿಕಾರ್ಜುನಗೌಡ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ಶಶಿಧರ ಸ್ವಾಮಿ ಕಾನಮಡಗು.. ಎಸ್ ವೆಂಕಟೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ನಾಗಮಣಿ ಜಿಂಕಲ್ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷ. ಎನ್. ಟಿ.ತಮ್ಮಣ್ಣ ಕಾಂಗ್ರೆಸ್ ಮುಖಂಡರು.ಹೊಸಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಮಾರ್ ಗೌಡ. ಮುಖಂಡರಾದ ಕಾವಲಿ ಶಿವಪ್ಪ ನಾಯಕ. ಎರಿಸ್ವಾಮಿ ಬಣವಿಕಲ್.ಹಾಗೂ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button