ಕುಡಿಯುವ ನೀರಿನ ಹಾಹಾಕಾರ ನೀಗಿಸಿ, ಇಲ್ಲವಾದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ – ರಾವುಗೌಡ ದ್ಯಾಮಗೊಂಡ.
ನಾದ ಬಿಕೆ ಏಪ್ರಿಲ್.30

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದಲ್ಲಿ ಹಲವು ದಿನಗಳಿಂದ ದಿನೆ-ದಿನೆ ನೀರಿನ ಹಾಹಾಕಾರ ಹೆಚ್ಚಾಗಿದೆ. ಒಂದು ಕಡೆ ಬಿಸಿಲಿನ ತಾಪಮಾನ ಇನ್ನೊಂದು ಕಡೆ ನೀರಿನ ಆಹಾಕಾರ ಹೆಚ್ಚಾಗಿದೆ. ಗ್ರಾಮಕ್ಕೆ ನೀರಿನ ಸಮಸ್ಯೆ ಕುರಿತು ಸಂಬಂಧಿಸಿದ ಪಂಚಾಯತ ಪಿ.ಡಿ.ಒ ಅವರಿಗೆ ಫೋನ್ ಕರೆ ಮಾಡಿದರೂ ಸ್ಪಂದನೆಗೆ ಸಿಗುತ್ತಿಲ್ಲ. ಇದರಿಂದ ನೀರಿಗಾಗಿ ಗ್ರಾಮಸ್ಥರು ಕಂಗಾಲಾಗಿದ್ದು ಸಮಸ್ಯೆ ಎರಡು ದಿನದಲ್ಲಿ ಸರಿಪಡಿಸದಿದ್ದರೆ ಗ್ರಾಮಸ್ಥರು ಸೇರಿ ಪಂಚಾಯಿತಿಗೆ ಬೀಗ ಹಾಕಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಈ ಮೂಲಕ ಎಚ್ಚರಿಸಲಾಗಿದೆ ಎಂದು ಮಾಜಿ ಗ್ರಾಮಪಂಚಾಯತ ಸದಸ್ಯರಾದ ರಾವುಗೌಡ ದ್ಯಾಮಗೊಂಡ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.