ಕೂಡ್ಲಿಗಿ ಕ್ಷೇತ್ರಕ್ಕೆ 18 ರ ಚುನಾವಣೆಯಲ್ಲಿ ಗೆದ್ದು ತಾಲೂಕಿನ ಅಭಿವೃದ್ಧಿಯ ಸುರಿಮಳೆ ಹರಿಸಿದಂತ – ಎನ್ ವೈ ಗೋಪಾಲಕೃಷ್ಣ ಶಾಸಕರು.
ಕೂಡ್ಲಿಗಿ ಏಪ್ರಿಲ್.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರಜಾಧ್ವನಿ -2 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡು ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ನಾಡಿನ ಜನರಿಗೆ ಗ್ಯಾರಂಟಿಗಳನ್ನು ನೀಡಿದೆ ಮತ್ತು. ಈ ಕ್ಷೇತ್ರದಿಂದ ನಾನು ಹಿಂದೆ ಶಾಸಕನಾಗಿದ್ದಾಗ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನು ಕೇವಲ 10% ಮಾತ್ರ ಉಳಿಸಿದ್ದು ಓಡಾಡುವಂತ ರಸ್ತೆಗಳು ಮಿನಿ ವಿಧಾನ ಸೌಧ ಪಟ್ಟಣ ಪಂಚಾಯತ್ ಬಿಲ್ಡಿಂಗ್ ಪಿ ಎಲ್ ಡಿ ಬ್ಯಾಂಕ್ ಎಪಿಎಂಸಿ ಮಾರ್ಕೆಟ್ ಕೃಷಿ ಇಲಾಖೆ ಬಿಲ್ಡಿಂಗ್ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಂಬೇಡ್ಕರ್ ವಸತಿ ಶಾಲೆ ಮುರಾರ್ಜಿ ವಸತಿ ಶಾಲೆಗಳು ಡಿಪ್ಲೋಮಾ ಇಂಜಿನಿಯರಿಂಗ್ ಕಾಲೇಜ್ ಮತ್ತು ಕೆಇಬಿ ಸಬ್ ಸ್ಟೇಷನ್ ಗಳು ಹಾಸ್ಟೆಲ್ ಗಳು 100 ಕೋಟಿಗೆ ಹೆಚ್ಚು ಚೆಕ್ ಡ್ಯಾಮ್ ಗಳು 450 ಕ್ಕೂ ಶಾಲೆ ಬಿಲ್ಡಿಂಗ್ ಗಳು ಪಿಎಂಜಿವೈ ರಸ್ತೆಗಳು ಮತ್ತು ತಾಲೂಕಿನ ಕರಡಿ ಧಾಮ ಒಳಗಾಗಿದವರ ರೈತರಿಗೆ ಸುಮಾರು 230 ಸೋಲಾರ್ ಹೈ ಮಾಸ್ ಲೈಟ್ ಗಳು 180 ಹಳ್ಳಿಗಳಿಗೆ ಸೋಲಾರ್ ಲೈಟ್ ಗಳು ಗಾಂಧೀಜಿ ಚಿತಾಬಸ್ಮ ಮಹದೇವ ಮೈಲಾರ ಮಹದೇವ ರಂಗ ಮಂದಿರ ಮತ್ತು ಕ್ರಿಕೆಟ್ ಗ್ರೌಂಡ್ ಅಂದಾಜು ವೆಚ್ಚ ನಾಲ್ಕು ಕೋಟಿ 50 ಲಕ್ಷ ಮತ್ತು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಮತ್ತು ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಅಂಬೇಡ್ಕರ್ ಭವನ ಅಂದಾಜು ವೆಚ್ಚ ಒಂದು ಕೋಟಿ ಮತ್ತು ಬಾಬಾ ಜಗಜೀವನ್ ಭವನ ಅಂದಾಜು ವೆಚ್ಚ ಒಂದು ಕೋಟಿ ಜಿಲ್ಲಾ ಪಂಚಾಯತಿ ಇಲಾಖೆ ಬಿಲ್ಡಿಂಗ್ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಬಿಲ್ಡಿಂಗ್ ಮತ್ತು ತಾಲೂಕಿನ ಐದು ಶಾಲೆಗಳನ್ನು ಕಾಲೇಜು ಮೇಲ್ದರ್ಜೆ ಶಾಲೆಗಳನ್ನಾಗಿ ಮಾಡ್ಸಿದ್ದಾರೆ.

ಮತ್ತು ಇನ್ನು ಅನೇಕ ಅನುದಾನಗಳನ್ನು ತಂದು ಚರಂಡಿ ವ್ಯವಸ್ಥೆಗಳು ಗ್ರಾಮೀಣ ಕುಡಿಯುವ ನೀರಿನ ಫಿಲ್ಟರ್ ಶೆಡ್ಡುಗಳು ಮತ್ತು ಕೊರೊನದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಕೊರೋನಾದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ ಇಪ್ಪತ್ತು ಸಾವಿರದಂತೆ ಸುಮಾರು 180 ವ್ಯಕ್ತಿಗಳಿಗೆ ತನ್ನ ಸ್ವಂತ ಹಣವನ್ನು ಶಾಸಕರು ವಿತರಿಸಿದರು ಮತ್ತು ದನ ಕರು ಮೇಕೆ ಇವು ಸಹ ಪ್ರವಾಹ ವಿಕೋಪದಲ್ಲಿ ಸಿಡಿಲು ಬಡೆದ ಪ್ರಾಣಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮತಪಟ್ಟ ಪ್ರಾಣಿಗಳಿಗೆ ಸರ್ಕಾರ ದಿಂದ ಹಣವನ್ನು ಮಂಜೂರು ಮಾಡಿಸಿದಂತ ಶಾಸಕರು ಮತ್ತು ಅಬೆಲೆಯರಿಗೆ ಮಾಶಾಸನ ಅಂಗವಿಕಲರಿಗೆ ಮಾಶಾಸನ ಮತ್ತು 10 ಎಕರೆ ಜಮೀನು ಸರ್ಕಾರ ದಿಂದ ಮಂಜೂರು ಮಾಡಿಸಿ ಜಾಗ ಇಲ್ಲದಂತ ಬಡವರಿಗೆ ಜಾಗ ಕಲ್ಪಿಸಿ ಮತ್ತು ತಾಲೂಕಿನ 800 ಮನೆಗಳನ್ನು ಮಂಜೂರು ಮಾಡಿಸಿ ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ ಮನೆಗಳನ್ನು ಒದಗಿಸಿ ಕೊಟ್ಟಂತ ಶಾಸಕರು ಮತ್ತು ರೈತರಿಗೆ ಕೃಷಿ ಇಲಾಖೆಯಲ್ಲಿ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಗಂಗಾ ಕಲ್ಯಾಣ ನೇರ ಸಾಲುಗಳು ವಾಹನ ಸಾಲಗಳು ಮತ್ತು ಸೈಕಲ್ ಮೋಟಾರ್ ಗಳು ವೆಹಿಕಲ್ ಸಾಲಗಳು ಇವೆಲ್ಲವನ್ನೂ ಸರ್ಕಾರ ದಿಂದ ಮಂಜೂರು ಮಾಡಿಸಿ ಒದಗಿಸಿ ಕೊಟ್ಟಂತ ಶಾಸಕರು ಮತ್ತು ಪ್ರವಾಹ ವಿಕೋಪದಲ್ಲಿ ಸಿಡಿಲು ಬಡಿದ ಸುಮಾರು 130 ಫಲಾನುಭವಿಗಳಿಗೆ ನೇರವಾಗಿ 24 ಗಂಟೆ ಒಳಗೆ ಐದು ಲಕ್ಷದ ಇಪ್ಪತ್ತು ಸಾವಿರಗಳನ್ನು ಫಲಾನುಭವಿ ವ್ಯಕ್ತಿಗಳಿಗೆ ಮಂಜೂರು ಮಾಡಿಸಿದಂತ ಶಾಸಕರು ಎನ್ ವೈ ಗೋಪಾಲಕೃಷ್ಣ ಶಾಸಕರು ಇವರಿಗೆ ಸಿಕ್ಕಂತ ಕಾಲಾವಕಾಶ ಕೇವಲ 20 ತಿಂಗಳಲ್ಲಿ 200800 ಕೋಟಿಗೂ ಹೆಚ್ಚು ಅನುದಾನವನ್ನು ತಂದು ತಾಲೂಕಿಗೆ ಬೆಳಕಾಗಿ ಮಾಡಿದಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಆದರೆ 23 ಚುನಾವಣೆ ಬಂದಾಗ ನನ್ನ ಆತ್ಮೀಯ ಎನ್ ಟಿ ಬೊಮ್ಮಣ್ಣನವರ ಮಗ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಇವರಿಗೆ ಟಿಕೆಟ್ ಕೊಡಿ ಎಂದು ಮಾನ್ಯ ಸಿದ್ದರಾಮಯ್ಯನವರಿಗೆ ಡಿಕೆ ಶಿವಕುಮಾರ್ ಅವರಿಗೆ ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿದರು.

ಅದೇ ರೀತಿಯಾಗಿ ಜಿಲ್ಲೆಯಾದ್ಯಂತ ಹೈಯೆಸ್ಟ್ ಲೀಡಿನಲ್ಲಿ ಅವರನ್ನು ಈ ತಾಲೂಕಿನ ಒಳ್ಳೆಯ ಜನಗಳು ಗೆಲ್ಲಿಸಿರುತ್ತಾರೆ ಮಧ್ಯ ಕರ್ನಾಟಕದಲ್ಲಿ ಕೂಡ್ಲಿಗಿ ತಾಲೂಕಿನ ಇದ್ದಂತ ಒಳ್ಳೆ ಜನ ನಾನು ಎಲ್ಲಿ ನೋಡಿಲ್ಲ ಇಲ್ಲಿರುವುದು ಎರಡೇ ಜಾತಿ ಒಂದು ಹೆಣ್ಣು ಒಂದು ಗಂಡು ಆದರೆ ಎಲ್ಲಾ ಸಮುದಾಯದವರು ಒಂದು ಅಣ್ಣ-ತಮ್ಮರಂತೆ ನಡೆದು ಕೊಂಡು ಹೋಗುವ ಜನಗಳು ಇಲ್ಲಿನ ಜನಗಳ ನೋಡಿದರೆ ನನಗೆ ಬಹಳ ಖುಷಿ ಅನಿಸುತ್ತದೆ ಅದೇ ರೀತಿಯಾಗಿ ನಾನು 18 ರ ಚುನಾವಣೆಯಲ್ಲಿ ಬಂದಾಗ ಕೇವಲ 15 ದಿನದಲ್ಲಿ ನನಗೆ 16,000 ಮತಗಳನ್ನು ಲೀಡ್ ಆಗಿ ಕೊಟ್ಟಿರುತ್ತಾರೆ ನನ್ನ ಶಾಸಕನಾಗಿ ಮಾಡಿದರು ಅದೇ ರೀತಿಯಾಗಿ ಇನ್ನು ಉಳಿದ ಕಾಮಗಾರಿಗಳು ಮಾಡಿಸಿ ಎಂದು ಈಗ ಇರುವ ಡಾಕ್ಟರ್ ಎಂಟಿ ಶ್ರೀನಿವಾಸ್ ಶಾಸಕರಿಗೆ ಹೇಳಿದ್ದೇನೆ ಹಿಂದುಳಿದ ತಾಲೂಕನ್ನು ಮುತುರ್ಜಿ ವಹಿಸಿಕೊಂಡು ಬಡ ಜನಗಳಿಗೆ ಎಲ್ಲಾ ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಮಾತನಾಡಿದರು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ 25 ಗ್ಯಾರಂಟಿಗಳು ಜಾರಿಯಾಗಲಿವೆ. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ, ಯುವಕರಿಗೆ ವರ್ಷಕ್ಕೆ ಉದ್ಯೋಗ ಸಮೇತ ವರ್ಷಕ್ಕೆ ಕನಿಷ್ಠ ಒಂದು ಲಕ್ಷ ರೂ. ಶಿಷ್ಯ ವೇತನ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಸವಲತ್ತುಗಳು ಸಿಗಲಿವೆ ಎಂದು ತಿಳಿಸಿದರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಸಚಿವರಾದ ಜಮೀರ್ ಅಹ್ಮದ್ ಖಾನ್, ರಾಮಲಿಂಗಾ ರೆಡ್ಡಿ, ಅಭ್ಯರ್ಥಿಯಾದ ಈ ತುಕಾರಾಂ ಶಾಸಕ ಹಾಗೂ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ಮಿತ್ರರುಗಳು, ಅಪಾರ ಸಂಖ್ಯೆ ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು.