ಮಲಪ್ರಭೆ ನದಿಗೆ ನೀರು ಹರಿಸುವಂತೆ ಆಗ್ರಹಿಸಿ 10 ಕ್ಕೂ ಹೆಚ್ಚು ಗ್ರಾಮಗಳ ರೈತರು – ತಹಶೀಲ್ದಾರ್ ಕಚೇರಿಗೆ ಮುತ್ತಿಗೆ.
ಹುನಗುಂದ ಏಪ್ರಿಲ್.30

ಮಲಪ್ರಭಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಚಿತ್ತರಗಿ ಗ್ರಾಮ ಸೇರಿದಂತೆ ೧೦ ಕ್ಕೂ ಹೆಚ್ಚು ಗ್ರಾಮಗಳ ರೈತರು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಮಂಗಳವಾರ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಮಲ್ಲಪ್ಪ ಬಿಸರಡ್ಡಿ ಮಾತನಾಡಿ ಇದೇ ಏ. 5 ರಿಂದ 17.ರ ವರಗೆ ಬೆಳಗಾವಿಯ ರೇಣುಕಾ ಜಲಾಶಯದಿಂದ ೧.೮ ಟಿಎಂಸಿ ನೀರು ಹರಿಸಲಾಗಿದ್ದರೂ ಆ ನೀರು ಕೇವಲ ಬದಾಮಿ ಮತ ಕ್ಷೇತ್ರಕ್ಕೆ ಮಾತ್ರ ನೀರು ತಲುಪಿದ್ದು.ಹುನಗುಂದ ಮತಕ್ಷೇತ್ರದ ಚಿಕ್ಕಮಾಗಿ, ಖೈರವಾಡಗಿ,ಗಂಗೂರ,ಪಾಪಥನಾಳ,ಚಿತ್ತರಗಿ,ಕಿರಸೂರ, ಹಡಗಲಿ,ಚಿಕ್ಕಮಳಗಾವಿ,ಹಿರೇಮಳಗಾವಿ,ಗಂಜೀಹಾಳ,ಮೇದಿನಾಪೂರ, ಬೆಳಗಲ್ಲ, ಸಂಗಮದವರಗೆ ಇಲ್ಲಿವರೆಗೂ ನೀರು ಬಂದಿಲ್ಲ. ಇದರಿಂದ ಬಾರಿ ಬಿಸಿಲಿನಿಂದ ಕಂಗಾಲಾಗಿರುವ ಮಲಪ್ರಭೆ ನದಿಯ ಎಡ ಮತ್ತು ಬಲ ದಂಡೆಯಲ್ಲಿರುವ ಜನ ಜಾನುವಾರಗಳು, ಪಶು ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ನೀರು ಹರಿಸುವಂತೆ ಏ.16 ಮತ್ತು ಏ.25 ರಂದು ಎರಡು ಬಾರಿ ಬಾಗಲಕೋಟಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಅಧಿಕಾರಿಗಳ ವಿರುದ್ದ ಬೇಸರ ವ್ಯಕ್ತಪಡಿಸಿದರು. ನಾವು ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ದೂಷಿಸುವುದಿಲ್ಲ ಇಂತಹ ಭಯಂಕರ ಬಿಸಿಲಿಗೆ ಜನ ಜಾನುವಾರಗಳು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿಯನ್ನಾದರೂ ನೋಡಿ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದರು.ರೈತ ಬಸವರಾಜ ಬೇವೂರ ಮಾತನಾಡಿ ಈ ಹಿಂದೆ ಆಲಮಟ್ಟಿ ಜಲಾಶಯದಿಂದ ಬಾಗಲಕೋಟಿ ವ್ಯಾಪ್ತಿಯ ಎಡ ಮತ್ತು ಬಲ ದಂಡೆಗಳ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಆದರೆ ಮರೋಳ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸದೇ ಇರೋದು ಇದು ಮಲತಾಯಿ ಧೋರಣೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಎರಡು ಮತ್ತು ಮೂರು ದಿನಗಳಲ್ಲಿ ಮಲಪ್ರಭೆ ನದಿಗೆ ಕೂಡಲ ಸಂಗಮದವರಗೆ ನೀರು ಹರಿಸದಿದ್ದರೇ ಮಲಪ್ರಭೆ ನದಿ ಪಾತ್ರದ ಜನರು ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಈರಪ್ಪ ವಗ್ಗರ,ಬಸವರಾಜ ಪರೂತಿ,ಬಸವರಾಜ ಪಾಟೀಲ,ಶಿವಪ್ಪ ಚಲವಾದಿ,ಪರಶು ಮೇಟಿ,ಬಾಲಪ್ಪ ಕುಂದರಗಿ,ಅಶೋಕ ಪಾಟೀಲ,ವೀರಯ್ಯ ಶಿರೂರ, ಗಂಗಪ್ಪ ಶಿರೂರ,ವೀರಯ್ಯ ಲಾಯದಗುಂದಿ,ಅಯ್ಯನಗೌಡ ಪಾಟೀಲ,ಅಶೋಕ ಮಾಗಿ,ಮಲ್ಲು ಚಲವಾದಿ,ನಜೀರಸಾಬ ತೆಗ್ಗಿನಮನಿ,ಗಿರಿಯಪ್ಪ ಪೂಜಾರ ಮತ್ತು ಮಹಾಂತೇಶ ಕಠಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.