ಕಾರ್ಮಿಕರೇ ಜಗತ್ತಿನ ಮಹಾನ್ ಶಕ್ತಿ…..

ಕಾಣದ ಕೈಗಳು ಸಾವಿರಾರು ಕೈಗೂಡಿ ದುಡಿದೊಡೆ ಕಾಂಚಾಣ ಝಣಝಣ ನೆಮ್ಮದಿಯ ಜೀವನದಡೆ ಎಲ್ಲಾ ಶ್ರಮಿಕ ವರ್ಗದ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು
ಕಾರ್ಮಿಕ ಎಂದರೆ ಕರ್ಮಾಚಾರಿ, ಅಂದ್ರೆ ಕೆಲಸಗಾರ ಎಂದು ಅರ್ಥ. ಕಾರ್ಖಾನೆ, ಕೃಷಿ, ಕಾಮಗಾರಿ ಇದೆ ತರ ಎಲ್ಲಾ ವಿಧದ ಕೆಲಸದಲ್ಲಿ ದುಡಿಯುವ ಆಳುಗಳಿಗೆ ಕಾರ್ಮಿಕ ಎಂದು ಕರೆಯಬಹುದು. ಕಾರ್ಮಿಕ ಪದದ ಅರ್ಥವು ಕರ್ಮ ಅಂದರೆ ಕೆಲಸ. ಅದನ್ನು ನಂಬಿಕೆ ಇಟ್ಟು ಕೆಲಸವನ್ನಾಧರಿಸಿ ಬದುಕುವ ಜೀವಿ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ ಅಥವಾ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷ ಮೇ 1 ರಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ.
ಮೇ 1 ಕಾರ್ಮಿಕರ ದಿನ ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟುವ ಛಲಗಾರರಿವರು. ಹೀಗಾಗಿ, ಇವರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಈ ಅಪೂರ್ವ ದಿನದಂದು ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಕೋರುವ ದಿನವಾಗಿದೆ. ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ.
ಕಾರ್ಮಿಕನು ತನ್ನ ಸ್ವಂತ ದುಡಿಮೆಯನ್ನು ಮಾರಾಟ ಮಾಡುವ ಮೂಲಕ ಕನಿಷ್ಠ ವೇತನವನ್ನು ಪಡೆಯುತ್ತಾನೆ ಎಂದು ನಮಗೆ ತಿಳಿದಿದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನ ಅಂತರಾಷ್ಟ್ರೀಯ ಕಾರ್ಮಿಕ ಸಂಘಗಳನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು. ಹೀಗಾಗಿ, ಅವರು ಖಂಡಿತವಾಗಿಯೂ ಅರ್ಹರಾಗಿರುವುದರಿಂದ ಸಮಾಜಕ್ಕೆ ಅವರ ಕೊಡುಗೆಯನ್ನು ಪ್ರಶಂಸಿಸಲು ಮತ್ತು ಗುರುತಿಸಲು ಇದು ವಿಶೇಷ ದಿನವಾಗಿದೆ.
ಕಾರ್ಮಿಕರ ನೋವುಗಳು : ಮೂರು ವರ್ಷಗಳ ಹಿಂದೆ ಕೊರೋನಾ ಸಂಕಷ್ಟದ ದಿನಗಳಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಫಣಕ್ಕಿಟ್ಟು ಶ್ರಮಿಸಿದ ಪೌರಕಾರ್ಮಿಕರಿಗೊಂದು ಸಲಾಂ ಏಕೆಂದರೆ ಅವರು ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಪ್ರತಿದಿನ ಬೆಳಿಗ್ಗೆ ಎದ್ದು ಸಮವಸ್ತ್ರ ಧರಿಸಿ, ಕೈಯಲ್ಲಿ ಪೊರೈಕೆ ಹಿಡಿದು ಪಟ್ಟಣ ಶುಚಿಗೊಳಿಸುವ ಕಾರ್ಮಿಕರಿಗಾಗಿ ಮೇ 1 ದಿನ ಒಂದು ಹೊಸ ಬಟ್ಟೆಯನ್ನು ಧರಿಸಿ ತಮ್ಮ ಕಷ್ಟ, ನೋವು – ನಲಿವುಗಳು ಹಂಚಿಕೊಳ್ಳಲು ಭಾವನಾತ್ಮಕ ಸಮಯ ಕಾಣಲು ಸಿಕ್ಕಿರುವ ಕಾರ್ಮಿಕರ ದಿನವಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರ ಪ್ರಾಣಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಶ್ರಮಿಸಿದ ಜೀವಿಗಳು. ಇಡೀ ಜಗತ್ತಿಗೆ ಆವರಿಸಿರುವ ಕೊರೋನ ಮಹಾಮಾರಿಗೆ ಹಲವು ದೇಶಗಳು ಸ್ತಬ್ಧಗೊಂಡಿದವು. ಅನಿರೀಕ್ಷಿತ ಲಾಕ್ಡೌನ್ ನಿಂದ ಹಲವು ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದವು ಕಳೆದ ಲಾಕ್ಡೌನ್ ದಿನಗಳು ಜಾರಿಯಲ್ಲಿರುವಾಗ ಭಾರತದ ಆರ್ಥಿಕತೆ ಪಾತಾಳ ಸೇರಿದೆ. ಇನ್ನೂ ಸಂಘಟಿತ ಆಗುವ ಅಸಂಘಟಿತ ಕಾರ್ಮಿಕರ ಜೀವನ ಶೋಚನೀಯವಾಗಿದೆ. ಇಂತಹ ದುರಿತ ಕಾಲದಲ್ಲಿ ಬಡ ಕೂಲಿ ಕಾರ್ಮಿಕರ ಜೀವನ ಸಾಗಿಸುವುದು ಕಷ್ಟವಾಗಿತ್ತು. ಹಾಗಾಗಿ ಕೂಲಿಕಾರ್ಮಿಕರ ಬದುಕಿಗೆ ಪೂರಕವಾದ ಪರಿಹಾರ ರೂಪಿಸಲು ಸರ್ಕಾರ ಮುಂದಾಗಬೇಕು. ಕೆಲಸ ಇಲ್ಲದೆ ಗೃಹಬಂಧನದಲ್ಲಿರುವ ಅಸಂಖ್ಯಾತ ಕಾರ್ಮಿಕರ ಜೀವ ಉಳಿಸುವ ಜೊತೆಗೆ ಜೀವನ ನಿರ್ವಹಣೆಗೆ ಪೂರಕವಾದ ಪರಿಹಾರ ಒದಗಿಸುವ ಮೂಲಕ ‘ಕಾರ್ಮಿಕರ ದಿನಾಚರಣೆ’ ಮಹತ್ವ ಹೆಚ್ಚಿಸಬೇಕಾಗಿದೆ.
ಹಗಲು ರಾತ್ರಿ ಎಂದು ನೋಡುವುದಿಲ್ಲ. ಬಿಸಿಲು, ಮಳೆ, ಗಾಳಿಗೂ ಜಗ್ಗುವುದಿಲ್ಲ, ಕಠಿಣ ಶ್ರಮ ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿ. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಈ ಶ್ರಮಜೀವಿಗಳೇ ಇಲ್ಲದ ದೇಶವನ್ನು ಊಹಿಸಲು ಸಾಧ್ಯವಿದೆಯೇ…? ಖಂಡಿತಾ ಇಲ್ಲ. ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನೆಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ.
ಕಾರ್ಮಿಕರ ನಲಿವುಗಳು: ಕಠಿಣ ಪರಿಶ್ರಮ ನಿಮ್ಮನ್ನು ಎಂದು ಸೋಲುವುದಕ್ಕೆ ಬಿಡದು. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ. ಇದು ಪ್ರತೀ ಕಾರ್ಮಿಕರಿಗೂ ಸಂಭ್ರಮಿಸುವ ಮತ್ತು ಪರಸ್ಪರ ಖುಷಿ ಹಂಚಿಕೊಳ್ಳುವ ಕ್ಷಣ. ಒಬ್ಬ ಕಾರ್ಮಿಕ ಅದ್ಭುತಗಳ ನಿರ್ಮಾತೃ ಮತ್ತು ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಎಂದು ಹೆಮ್ಮೆ ಹೇಳುವ ಕ್ಷಣದಲ್ಲಿ ಖುಷಿ ಪಡುವ ಕ್ಷಣ.
ಇಂತಹ ಶ್ರಮಜೀವಿಗಳ ಕೆಲಸವನ್ನು ಗೌರವಿಸುವ, ಇವರ ಶ್ರಮವನ್ನು ಗುರುತಿಸುವ, ಇವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನ ಎಂದು ಆಚರಿಸಲಾಗುತ್ತದೆ. ಇದನ್ನು ವರ್ಕರ್ಸ್ ಡೇ, ಮೇ ಡೇ, ಲೇಬರ್ ಡೇ ಎಂದೂ ಕರೆಯಲಾಗುತ್ತದೆ. ದೇಶದ ಅಭಿವೃದ್ಧಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಮಹಾನ್
ಶಕ್ತಿಯಿವರು.ಕೈ ಕೆಸರಾದರೆ ಬಾಯಿ ಮೊಸರು,ಕೈ ಕೆಸರೆಂದು ನೀ ಅಸಹ್ಯ ಪಡದಿರು,ಅದರಿಂದಲೇ ನಿನ್ನೊಡಲು ತುಂಬುವುದು ಅರಿತಿರು,ಬೆವರಿಳಿಸಿ ದುಡಿದಾಗಲೇ ಶ್ರಮಕ್ಕೆ ಬೆಲೆ ಸಿಗುವುದು,ಕಾಲು ಚಾಚಿ ಮಲಗಿದರೆ ಹಸಿವು ನೀಗದು ನೆನಪಿರು.ಕೀಳರಿಮೆ ಬಿಟ್ಟು ಹೆಮ್ಮೆಯಿಂದ ದುಡಿದರೆ ಫಲ ಸಿಗುವುದು,ಶ್ರದ್ಧೆಯಿಂದ ಶ್ರಮ ವಹಿಸಿದರೆ ಬಾಯಿ ಸಿಹಿಯಾಗುವುದು,ಜೀವನೋಪಾಯಕ್ಕಾಗಿ ಉದ್ಯೋಗ ಅವಶ್ಯವೆಂದು ತಿಳಿದಿರು,ವೃತ್ತಿಯ ಬಗ್ಗೆ ಗೌರವ ಇರಲಿ ಎಂದೂ ಮರೆಯದಿರು,ಕಷ್ಟಪಟ್ಟು ದುಡಿದಾಗಲೇ ಬಾಳು ಬಂಗಾರವಾಗುವುದು.
ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯ ಶ್ರೇಷ್ಠತೆಯನ್ನು ವ್ಯಕ್ತಪಡಿಸುವ ಏಣಿ. ತಮ್ಮ ಸ್ವಂತ ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುವ “ದುಡಿಮೆಯೇ ದೇವರು ” ಎಂದು ತಿಳಿದುಕೊಂಡು ಬೆವರು ಹರಿಸುವ ವರ್ಗಕ್ಕೆ ಗೌರವಪೂರ್ಣ ನಮನಗಳು. ದೇಶದ ಅಭಿವೃದ್ಧಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶ್ರಮಜೀವಿಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಶುಭಾಶಯಗಳು.
ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ