ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಗೆಲುವಿಗೆ ಉರುಳು ಸೇವೆ ಮಾಡಿದ ಅಭಿಮಾನಿಗಳು.
ಕೂಡ್ಲಿಗಿ ಏಪ್ರಿಲ್.30

ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲುವಿಗಾಗಿ ಕೂಡ್ಲಿಗಿ ತಾಲ್ಲೂಕಿನ ಕುರಿಹಟ್ಟಿ ಗ್ರಾಮದಲ್ಲಿ ಶ್ರೀ ಮಾರಿಕಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ದೇವಿಯ ಆವರಣದಲ್ಲಿ ಉರುಳು ಸೇವೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕರ್ತರಾದ ಸಿ.ಎಂ. ನಾಗರಾಜ್, ಜಿ. ಆನಂದ್ ಅವರು ಶ್ರೀ ರಾಮುಲು ಗೆಲುವಿಗಾಗಿ ಉರುಳು ಸೇವೆ ಮಾಡಿದರು ಇದೇ ರೀತಿಯಾಗಿ 2014 ರಲ್ಲಿಯೂ ಸಹ ಉರುಳು ಸೇವೆ ಮಾಡಿದ್ದರು ಆಗ ಶ್ರೀ ರಾಮುಲು ರವರು ಲಕ್ಷಾಂತರ ಮತಗಳಿಂದ ಜಯಗಳಿಸಿದ್ದರು. ಈ ಬಾರಿಯೂ ಸಹ ಶ್ರೀ ರಾಮುಲು ಅವರು ಸುಮಾರು 2 ಲಕ್ಷದ ಮತಗಳ ಅಂತರದಿಂದ ಜಯಗಳಿಸಬೇಕೆಂದು ಊರಿನ ಯುವ ಕಾರ್ಯಕರ್ತರು ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಜೆ.ಎನ್ ಕೋದಂಡರಾಮು, ಜಿ.ಬೋರಯ್ಯ, ಬಿ.ಓಬಣ್ಣ, ಗೌಡ್ರು ಬೊಮ್ಮಲಿಂಗಪ್ಪ, ಮೂಲೆ ಮನೆ ಈರಣ್ಣ, ಎಚ್. ಬಿ. ಶ್ರೀಕಾಂತ್, ಎಚ್.ಬಿ.ನಾಗರಾಜ್, ಎಚ್.ಎಂ. ಬಸಣ್ಣ, ಎಚ್.ಮಹಾಂತೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಶ್ರೀರಾಮುಲು ಅಭಿಮಾನಿಗಳು ಭಾಗವಹಿಸಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.