ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಸೇವೆ ಆರಂಭ.
ಇಂಡಿ ಮೇ.02

ಕಳೆದ 15 ವರ್ಷಗಳಿಂದ ಇಂಡಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಹಾಗೂ ಅರಿವಳಿಕೆ ತಜ್ಞರು ಇರದ ಕಾರಣ ಒಂದೇ ಒಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಇತ್ತೀಚೆಗೆ ಪ್ರಸೂತಿ ತಜ್ಞರನ್ನು ಸರಕಾರ ನೇಮಕ ಮಾಡಿದ್ದು ಮಂಗಳವಾರ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ. ಇಬ್ಬರು ತೊಡಕಿನ ಗರ್ಭಿಣಿಯರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಮಾಡುವ ಮೂಲಕ ಸ್ತ್ರೀ ರೋಗ ತಜ್ಞೆ ಡಾ. ಸುಚೆತಾ ಆಕಾಶ, ಅರಿವಳಿಕೆ ತಜ್ಞ ಡಾ.ಸತೀಶ ಮದುಬಾವಿ,ಚಿಕ್ಕ ಮಕ್ಕಳ ತಜ್ಞ ಡಾ.ವಿಪುಲ್ ಕೊಳೆಕರ ಸಿಸೇರಿಯನ್ ಮಾಡಿದರು. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಉಪಸ್ಥಿತರಿದ್ದು ಸಹೊದ್ಯೊಗಿ ಸಿಬ್ಬಂದಿಗಳಿಗೆ ಬೆಂಬಲ ನೀಡಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈರಣ್ಣ ಧಾರವಾಡಕರ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಅಭಿನಂದಿಸಿ. ಇನ್ನೂ ಮುಂದೆ ಸತತವಾಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಡಾ. ಪ್ರವೀಣ ಗಜಾಕೋಶ, ಡಾ.ಪ್ರೀತಿ ಕೋಳೆಕರ, ಡಾ.ಅಮೀತ್ ಕೋಳಕರ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.