ಕ್ರಿಕೆಟ್ ಪಂದ್ಯಾವಳಿಯಲ್ಲಿ 21,001 ₹. ಸಾವಿರ ಬಹುಮಾನ ಪಡೆದ ಶೈನಿಂಗ್ ಸ್ಟಾರ್ ತಂಡ.
ಇಂಡಿ ಮೇ.02
ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಶ್ರೀ ಗೈಬಿಪೀರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಎಪಿಎಲ್ ಅರ್ಜುಣಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯವನ್ನು ಅರ್ಜುಣಗಿ ಕೆಡಿ ಗ್ರಾಮದಲ್ಲಿ ಆಯೊಜಿಸಲಾಗಿತ್ತು ಲೀಗ್ ಪಂದ್ಯದಲ್ಲಿ ಒಟ್ಟು ತಂಡಗಳು, 1)ಯಂಗ್ ಸ್ಟಾರ್ ಸಿಸಿ, 2) ಎಮ್ ಬಿ ಬಾಯ್ಸ್,3) ಎಜೆ ರೈಡರ್ಸ್ 4) ಎಮ್ ಸಿ ಬಾಯ್ಸ್ ,5) ಶೈನಿಂಗ್ ಸ್ಟಾರ್,6)PARTHA WARRIORS ಹೀಗೆ ಆರು ತಂಡಗಳು ಭಾಗವಹಿಸಿದ್ದವು ಫೈನಲ್ ಪಂದ್ಯವನ್ನು ಶೈನಿಂಗ್ ಸ್ಟಾರ್ V/S ಎಜೆ ರೈಡರ್ಸ್ ತಂಡಗಳು ಆಟ ಆಡಿದವು ಫೈನಲಿನಲ್ಲಿ 25 ರನ್ ಹೊಡೆದು ಶೈನಿಂಗ್ ಸ್ಟಾರ್ ತಂಡ ಗೆಲುವು ಸಾಧಿಸಿತು. ಗೆಲುವು ಸಾಧಿಸಿದ ತಂಡಕ್ಕೆ ಭಾಗೇಶ ಮೊಟಗಿ 21 ,001 ಸಾವಿರ ರೂಪಾಯಿ ಪ್ರಥಮ ಬಹುಮಾನ.ಪ್ರಭು ಅಂಗಡಿ 11,001 ಸಾವಿರ ರೂಪಾಯಿ ದ್ವಿತೀಯ ಬಹುಮಾನ.ಅಂಬರಿಷ ಸಾಲಕ್ಕಿ 5,001 ಸಾವಿರ ರೂಪಾಯಿ ತೃತೀಯ ಬಹುಮಾನ ವಿತರಣೆ ಮಾಡಿದರು.ಈ ಪಂದ್ಯಾವಳಿಗೆ ಇನ್ನೂ ಅನೇಕರು ತಮ್ಮ ಸಹಾಯ ಹಸ್ತ ನೀಡಿ ಈ ಪಂದ್ಯಾವಳಿ ಯಶಸ್ವಿಯಾಗಿ ನಡೆಸಿ ಕೊಟ್ಟರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.