ಕಾಂಗ್ರೇಸ್ ಪಕ್ಷ ನುಡಿದಂತೆ ನಡೆಯುವ ಕಾಂಗ್ರೇಸ್ ಪಕ್ಷ ಎಂದ – ಮಣಿಯಾರ್.
ಕಲಕೇರಿ ಮೇ.03

ಕಲಕೇರಿ ಗ್ರಾಮದಲ್ಲಿ ವಾರ್ಡ್ ನಂಬರ್ ಒಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಸೇರಿ ಪ್ರತಿ ಮನೆ ಮನೆಗೆ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಮೈನುದ್ದೀನ್ ಮಣಿಯಾರ್ ಇವರು ಕಾಂಗ್ರೆಸ್ನವರು ನುಡಿದಂತೆ ನಡೆಯುವರು ಈಗಾಗಲೇ ಐದು ಗ್ಯಾರಂಟಿಗಳನ್ನು ಕಾಂಗ್ರೇಸ್ ದವರು ಮಾಡಿದರು ಮತ್ತೆ ಮುಂದಿನ ದಿನಮಾನದಲ್ಲಿ ನಮ್ಮ ಕಾಂಗ್ರೇಸ್ ವತಿಯಿಂದ ಮಹಿಳೆಯರಿಗೆ ಒಂದು ವರ್ಷಕ್ಕೆ ರೂ. 1,24,000 ಗ್ಯಾರಂಟಿ ಕಾರ್ಡುಗಳನ್ನು ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ದಾವಲ್ ನಾಯ್ಕೋಡಿ. ಶಿವಪ್ಪ ಪೂಜಾರಿ. ಮಡಿವಾಳಪ್ಪ ಚಳಿಗಿ. ಹಲವಾರು ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಂಡು ಪ್ರಚಾರ ನಡೆಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ