ಪ್ರಭಾವಿಗಳ ಕೈ ಸೇರಿದ್ದ ದಲಿತರ ಹಾಸ್ಟೇಲ್ ಜಾಗದ ಒಗ್ಗಟ್ಟಿನಿಂದ ಸುದೀರ್ಘ ಹೋರಾಟಕ್ಕೆ ಕೊನೆಗೂ ಸಿಕ್ತು ಮುಕ್ತಿ.

ಚಿತ್ರದುರ್ಗ ಮೇ.24

ಆದಿ ಕರ್ನಾಟಕ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ 1955 ರಲ್ಲಿ ಪುರಸಭೆ ನೀಡಿದ್ದ ಹಾಸ್ಟೇಲ್ ಜಾಗವನ್ನು ಕಸ್ತೂರಭಾ ವಿದ್ಯಾಭಿವೃದ್ದಿ ಸಂಘ ಎಂದು ಬದಲಾವಣೆ ಮಾಡಿಕೊಂಡು ಕೆಲವು ಪ್ರಭಾವಿಗಳ ಕುಟುಂಬದ ಪಾಲಾಗಿದ್ದ ಜಾಗವನ್ನು ಮರಳಿ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ರಾಜ್ಯ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದರು.ಒಕ್ಕಲಿಗರ ಹಾಸ್ಟೇಲ್ ಪಕ್ಕದಲ್ಲಿರುವ ಆದಿ ಕರ್ನಾಟಕ ಹಾಸ್ಟೇಲ್ ಜಾಗದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಾವಣಗೆರೆಯ ದುಗ್ಗಪ್ಪ ಕುಟುಂಬದವರು ಸುಳ್ಳು ದಾಖಲೆಗಳನ್ನು ನೀಡಿ 2010 ರಲ್ಲಿ ಈ ಜಾಗ ಕಬಳಿಸಿದ್ದರು. ನಂತರ ನಾವುಗಳು ಕಳೆದ ಡಿಸೆಂಬರ್‍ನಲ್ಲಿ ಇದನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ ಫಲವಾಗಿ ಹಾಸ್ಟೆಲ್ ಜಾಗ ನಮ್ಮ ಕೈ ಸೇರಿದೆ. ದಾವಣಗೆರೆಯ ಡಾ. ಜಿ.ಡಿ.ರಾಘವನ್ ತನ್ನ ಹೆಸರಿಗೆ ಮಾಡಿಸಿ ಕೊಂಡಿದ್ದನ್ನು ಪತ್ತೆ ಹಚ್ಚಿದ್ದರಿಂದ ಮೂರು ದಿನದ ಹಿಂದೆ ನಗರ ಸಭೆ ಆದಿ ಕರ್ನಾಟಕ ಹಾಸ್ಟೇಲ್ ಎಂದು ವರ್ಗಾವಣೆ ಮಾಡಿ ಕೊಟ್ಟಿದೆ. ಮಾದಿಗ ಜನಾಂಗಕ್ಕೆ ಸೇರಿದ ಈ ಆಸ್ತಿ ಉಳಿಯ ಬೇಕಾದರೆ ಜನಾಂಗದ ಎಲ್ಲರೂ ಕೈ ಜೋಡಿಸ ಬೇಕೆಂದು ಹಿರೇಹಳ್ಳಿ ಮಲ್ಲಿಕಾರ್ಜುನ್ ವಿನಂತಿಸಿದರು.

ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ ದೊಡ್ಡ ಜನಾಂಗ ಮಾದಿಗರಿಗೆ ಇದೊಂದು ದೊಡ್ಡ ರೀತಿಯ ವಂಚನೆಯಾಗಿತ್ತು. ನಮಗೆ ಗೊತ್ತಿಲ್ಲದೆ ಮರೆ ಮಾಚಿರುವುದು ಅತ್ಯಂತ ಖಂಡನೀಯ. ಎಪ್ಪತ್ತು ವರ್ಷದ ತನಕ ಮಾದಿಗರಿಗೆ ಹಕ್ಕುದಾರಿಕೆ ಇಲ್ಲದಂತೆ ಕೆಲವು ಪ್ರಭಾವಿಗಳು ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಹಾಸ್ಟೇಲ್ ಆಸ್ತಿಯನ್ನು ಕಬಳಿಸಿದ್ದರು. ರಾಜ್ಯದಲ್ಲಿ ಮಾದಿಗರ ಆಸ್ತಿ ಎಲ್ಲೆಲ್ಲಿ ಪಟ್ಟಭದ್ರರ ವಶದಲ್ಲಿದಿಯೋ ಅಲ್ಲೆಲ್ಲಾ ಹೋರಾಟ ಮಾಡಿ ಉಳಿಸುತ್ತೇವೆ. ಪ್ರತಿ ಮನೆಯಿಂದ ಇಬ್ಬರನ್ನು ಸದಸ್ಯರನ್ನಾಗಿ ಮಾಡಿ ಕೊಳ್ಳಬೇಕೆಂಬ ಆಲೋಚನೆಯಿದೆ, ಹಾಗಾಗಿ ದೊಡ್ಡ ಆಂದೋಲನ ಮಾಡುತ್ತೇವೆ ಎಂದರು.ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಮಲ್ಲಣ್ಣ, ಡಿ.ದುರುಗೇಶ್, ನ್ಯಾಯವಾದಿ ಮಲ್ಲಿಕಾರ್ಜುನ್, ಸಿ.ಎ.ಚಿಕ್ಕಣ್ಣ, ಕೆ.ಕುಮಾರ್, ಹೆಚ್.ಆನಂದ್‍ಕುಮಾರ್, ಜಯಣ್ಣ, ಬ್ಯಾಲಾಳ್ ಜಯಣ್ಣ ಇನ್ನೂ ಅನೇಕರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ, ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೋಡಿಹಳ್ಳಿ ಶಿವಮೂರ್ತಿ.ಟಿ ಚಿತ್ರದುರ್ಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button