ಕೂಡ್ಲಿಗಿ ಪ ಪಂ 2020-21ರ ವಸತಿ ಯೋಜನೆ ಮಂಜೂರಾತಿಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ – ಸಿ.ಐ.ಟಿ.ಯು ಸ್ಪಷ್ಟನೆ.
ಕೂಡ್ಲಿಗಿ ಮೇ.10





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಯಿಂದ, 2020-21 ನೇ ಸಾಲಿನ ವಸತಿ ಯೋಜನೆಯ ಪ್ರಕ್ರಿಯೆಯನ್ನು ಧಾರವಾಡ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಆಯ್ಕೆಯಾದ ಫಲಾನುಭವಿಗಳ ಪಟ್ಟಿಯಲ್ಲಿ, ವಸತಿ ಸೌಕರ್ಯ ಉಳ್ಳವರಿಗೇ ಮಣೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಹಾಲಿ ಅನುಮೋದನೆ ಗೊಂಡಿರುವ ಫಲಾನುಭವಿಗಳ ಪಟ್ಟಿಯನ್ನು, ಪರಿಷ್ಕರಿಸಬೇಕಿದೆ ಹಾಗೂ ಅನರ್ಹರನ್ನು ಕೂಡಲೇ ಕೈಬಿಡಬೇಕೆಂದು ಸಿ.ಐ.ಟಿ.ಯು ಒತ್ತಾಯಿಸಿದೆ. ಈ ಸಂಬಂಧಿಸಿದಂತೆ ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ವಸತಿ ಹಂಚಿಕೆಯಲ್ಲಾಗಿರುವ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅವರು ಸ್ಪಷ್ಟಪಡಿಸಿದರು. ಸಂಬಂಧಿಸಿದಂತೆ ಇಲಾಖೆಗಳು ಕೈಗೊಂಡಿರುವ ಮನೆ ಮಂಜೂರಾತಿ ಪ್ರಕ್ರಿಯೆಗೆ, ಧಾರವಾಡ ಉಚ್ಛ ನ್ಯಾಯಾಲಯ ಎ.25 ರಂದು ತಡೆಯಾಜ್ಞೆ ಹೊರಡಿಸಿ ಸಂಬಂಧಿಸಿದ ಇಲಾಖೆಗೆ ಆದೇಶಿಸಿದೆ ಎಂದು. ಕೂಡ್ಲಿಗಿ ಪಟ್ಟಣದಲ್ಲಿ ಸಿ.ಐ.ಟಿ.ಯು ಹಾಗೂ ಸಿ.ಡ್ಬ್ಲ್ಯು.ಎಫ್.ಐ ನೈತೃದಲ್ಲಿ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು ಮೇ.9 ರಂದು ಪಟ್ಟಣದಲ್ಲಿ, ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ, ವಸತಿ ಹಂಚಿಕೆ ಪ್ರಕ್ರಿಯೆ ರದ್ದುಮಾಡುವಂತೆ ಕೋರಿ, ತಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಅವರು ತಿಳಿಸಿದರು. ವಸತಿ ಹಂಚಿಕೆಯಲ್ಲಾಗಿರುವ ಭಾರೀ ಪ್ರಮಾಣದ ವ್ಯಾತ್ಯಾಸವನ್ನು ಹಾಗೂ ಲೋಪ ದೋಷಗಳನ್ನು ಸರಿಪಡಿಸುವಂತೆ ಅವರು ಒತ್ತಾಯಿಸಿದ್ದಾರೆ. ಸಂಘಟನೆಯ ನೇತೃತ್ವದಲ್ಲಿ ತಾವು ನಿರ್ಗತಿಕರ ಪಟ್ಟಿ ತಯಾರಿಸಿ, ಅರ್ಹರಿಗೆ ಮನೆ ಕಲ್ಪಿಸುವಂತೆ ಮನವಿ ಮಾಡಿದ್ದು. ಅದನ್ನು ಈ ಹಿಂದಿನ ಶಾಸಕರಾದ ಎನ್.ವೈ. ಗೋಪಾಲಕೃಷ್ಣರವರ ಮುಖೇನ, ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ನೀಡಲಾಗಿತ್ತು. ಈಗ ಆ ಪಟ್ಟಿಯನ್ನು ತಿರಸ್ಕರಿಸಲಾಗಿದ್ದು, ಪ.ಪಂ ಜನ ಪ್ರತಿನಿಧಿಗಳೇ ಪಲಾನುಭವಿಗಳ ಪಟ್ಟಿಯನ್ನು ಇಲಾಖೆಗೆ ನೀಡಿದ್ದು. ಜನಪರ ಕಾಳಜಿಯುಳ್ಳ ಹಾಲಿ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಅನರ್ಹರೇ ಹೆಚ್ಚಿರುವ ಪಟ್ಟಿಯನ್ನು ಫೆ. 2024ರಲ್ಲಿ ಅನುಮೋದಿಸಿದ್ದಾರೆ. ಆ ಪಟ್ಟಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ಸಕಲ ಸೌಕರ್ಯಯುಳ್ಳವರಿಗೆ ಮಣೆ ಹಾಕಲಾಗಿದೆ ಎಂದು, ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ಆರೋಪಿಸಿದರು. ಜನಾನುರಾಗಿ ಎಂದೇ ಹೆಸರಾಗಿರುವ, ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ರಿಗೆ ಸತ್ಯಾಂಶ ತಿಳಿದಿದೆಯೋ ತಿಳಿದಿಲ್ಲವೋ ನಮಗೆ ಗೊತ್ತಿಲ್ಲ. ಪರಿಶೀಲಿಸಲಾಗಿ ಆ ಪಟ್ಟಿಯಲ್ಲಿ, ಶೇಕಡ 50 ಕ್ಕೂ ಹೆಚ್ಚು ಅನರ್ಹರು ಪತ್ತೆಯಾಗಿದ್ದಾರೆ. ಮನೆ ಹಂಚಿಕೆಯಲ್ಲಿ ಅನರ್ಹರಿಗೆ ಮಣೇ ಹಾಕಲಾಗಿರುವುದು ಸ್ಪಷ್ಟವಾಗಿದ್ದು, ಭಾರೀ ಬ್ರಹ್ಮಾಂಡ ಭ್ರಷ್ಟಾಚಾರ ಜರುಗಿರುವ ಗುಮಾನಿ ಹರಡಿದೆ. ಚೂರು ಸೂರಿಲ್ಲದ ನೂರಾರು ನಿರಾಶ್ರಿತರು ನಿರಾಶ್ರಿತರಾಗೇ ಇದ್ದಾರೆ, ಮಾಜಿ ದೇವದಾಸಿಯರ ಮಕ್ಕಳು, ವಿಧವೆಯರು, ಹತ್ತಾರು ವಿಕಲ ಚೇತನರು ಹತ್ತಾರು ನಿರಾಶ್ರಿತರು, ಗೇಣು ಸೂರಿಲ್ಲದೇ ಮಳೆ ಬಿಸಿಲಿಗೆ ಮೈ ವಡ್ಡಿ ಬಯಲಲ್ಲಿ ಬದುಕುತ್ತಿದ್ದಾರೆ. ಹಲವು ಕುಟುಂಬಗಳು ಜೀವನ ಪೂರ್ತಿ ಬಾಡಿಗೆ ಮನೆ , ಅಥವಾ ಬಯಲೇ ತಮ್ಮ ಆಶ್ರಯ ತಾಣವನ್ನಾಗಿಸಿಕೊಂಡಿವೆ. ಜೋಪಡಿಯಲ್ಲಿ ಗರಿ ಮನೆಗಳಲ್ಲಿ ತಗಡಿನ ಗೂಡಲ್ಲಿ ವಾಸಿಸುತ್ತಿದ್ದಾರೆ, ಅಂತಹ ಅರ್ಹರಿಗೆ ಈ ವಸತಿ ಸೌಕರ್ಯ ದೊರೆಯಬೇಕಿದೆ. ಅನರ್ಹರಿಗೆ ಯಾವುದೇ ಕಾರಣಕ್ಕೆ ವಸತಿ ಸೌಲಭ್ಯ ದೊರಕಬಾರದು, ನಿಜವಾದ ನಿರ್ಗತಿಕರಿಗೆ ಬಡವರಿಗೆ, ದೀನ ದಲಿತರಿಗೆ ಕಾರ್ಮಿಕರಿಗೆ ರೈತರಿಗೆ ನೊಂದ ಬಡ ದುರ್ಬಲರಿಗೆ ನಿರಾಶ್ರಿತರಿಗೆ ಮಹಿಳೆಯರಿಗೆ ವಸತಿ ಸೌಕರ್ಯ ದೊರಕಬೇಕಿದೆ. ಅದಕ್ಕಾಗಿ ಸಂಘಟನೆಯಿಂದ ಕಾನೂನಿನ ಮೂಲಕ ಹೋರಾಟ ನಿರಂತರ ಸಾಗಲಿದೆ, ಅನ್ಯಾಯ ಜರುಗುವುದಕ್ಕೆ ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ನ್ಯಾಯಯುತ ಹೋರಾಟದಲ್ಲಿ ತಾವು ಹಾಗೂ ಸಂಘಟನೆ, ಎಂದೆಂದಿಗೂ ರಾಜಿಯಾಗುವುದಿಲ್ಲ. ಅನ್ಯಾಯ ಅಕ್ರಮ ಅವ್ಯವಸ್ಥೆ ಸರಿಪಡಿಸುವವರೆಗೆ ಮತ್ತು ಅರ್ಹರಿಗೆ ವಸತಿ ಸೌಕರ್ಯ ದೊರಕುವರೆಗೂ, ಸಂಘಟನೆಯಿಂದ ಹೋರಾಟ ನಿಲ್ಲದು ಎಂದು ಹೋರಾಟಗಾರ ಗುನ್ನಳ್ಳಿ ರಾಘವೇಂದ್ರ ತಿಳಿಸಿದರು. ಕಾರ್ಮಿಕ ಮುಖಂಡರಾದ ಬಿ.ಟಿ.ಗುದ್ದಿ ಚಂದ್ರು, ಬೊಮ್ಮಘಟ್ಟ ಪಂಪಾಪತಿ ಮಾತನಾಡಿದರು. ಸಮಾಜವಾದಿ ಮಹಿಳಾ ಸಂಘಟನೆಯ ಭಾಗ್ಯಮ್ಮ, ಸಿ.ಐ.ಟಿ.ಯು ಮುಖಂಡರಾದ ಕರಿಯಣ್ಣ, ನಭಿಸಾಹೇಬ್ ಸೇರಿದಂತೆ ಮತ್ತಿತ್ತರರು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.