ಮಸ್ಕಿ ಜಲಾಶಯಕ್ಕೆ ಪ್ರತಾಪ್ ಗೌಡ ಪಾಟೀಲ್ ರವರಿಂದ – ಬಾಗಿನ ಅರ್ಪಣೆ.
ಮಸ್ಕಿ ಆ.21

ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಪ್ರತಾಪ್ ಗೌಡ ಪಾಟೀಲ ರವರು ಮಸ್ಕಿ ಜಲಾಶಯ ತುಂಬಿರುವುದ ರಿಂದ ರೈತರಿಗೆ ಗಂಗಾಮಾತೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಿರುವುದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಅವರು ಹೇಳಿದ್ದಾರೆ. ತಾಲೂಕಿನ ಮಾರಲದಿನ್ನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಂತರ ಮಾತನಾಡಿದ ಅವರು ಹೆಚ್ಚು ಮಳೆ ಆಗಿದ್ದರಿಂದ ನಮ್ಮ ಜಲಾಶಯ ಭರ್ತಿಯಾಗಿದ್ದು ನಮ್ಮ ಭಾಗದ ರೈತರಿಗೆ ಸಂತಸ ತಂದಿದೆ. ನೀರನ್ನು ವ್ಯರ್ಥ ಮಾಡದೇ ಉತ್ತಮ ಬೆಳೆ ಬೆಳೆಯ ಬೇಕೆಂದು ರೈತರಲ್ಲಿ ಮನವಿ ಮಾಡಿದರು ನಂತರ ತಾವೇ ಸ್ವತಃ ಕಾರ್ಯಕರ್ತರ ಸಮ್ಮುಖದಲ್ಲಿ ಗದ್ದೆಯಲ್ಲಿ ಇಳಿದು ಭತ್ತ ನಾಟಿ ಮಾಡಿ ಗಮನ ಸೆಳೆದರು. ಈ ವೇಳೆ ಅಧಿಕಾರಿಗಳು ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.