ಬಸವ ಜಯಂತಿ ಆಚರಿಸಿದ ಸಿದ್ದಯ್ಯನಕೋಟೆ ಬಸವಲಿಂಗ ಮಹಾ ಸ್ವಾಮಿಗಳು.
ಬಿಜಿಕೆರೆ ಮೇ.10

ಇಂದು ಬಿಜಿಕೆರೆ ಗ್ರಾಮದಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠ ಸಿದ್ದಯ್ಯನಕೋಟೆ, ಬಿಜಿಕೆರೆ ಇವರ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಿಜಯ ಮಹಾಂತೇಶ್ವರ ಶಾಖಾ ಮಠ ಸಿದ್ದಯ್ಯನಕೋಟೆ ಪರಮಪೂಜ್ಯರು ಆಶೀರ್ವಚನ ನೀಡುತ್ತಾ 12.ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲಾ ಜನಾಂಗದವರನ್ನು ಮೇಲೆತ್ತುವ ಕಾರ್ಯವನ್ನು ಮಾಡಿದರು ಇವನಾರವ ಇವನಾರವ ಇವ ನಾರವ ನೆಂದೆಣಿಸದೆ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂಬ ವಚನದ ಮೂಲಕ ಮಡಿವಾಳ ಮಾಚಯ್ಯ ಅಂಬಿಗರ ಚೌಡಯ್ಯ ಮಾದಾರ ಚೆನ್ನಯ್ಯ ಮೋಳಿಗೆ ಮಾರಯ್ಯ ಸತ್ಯಕ್ಕ ಲಿಂಗಮ್ಮ ಇನ್ನೂ ಅನೇಕ ಶರಣರಿಗೆ ಅನುಭವ ಮಂಟಪ ನಿರ್ಮಿಸುವ ಮೂಲಕ ಪ್ರತಿಯೊಬ್ಬರು ಸಮಾನರೆಂದು ಸಮಪಾಲು ಸಮಬಾಳು ಕಲ್ಪಿಸಿದ ವಿಶ್ವಗುರು ಧರ್ಮಗುರು ಬಸವಣ್ಣನವರು ಗುಣವಿದ್ದವ ಗುಣವಂತ ಲಿಂಗ ಇದ್ದವ ಲಿಂಗವಂತ ಎನ್ನುವ ತತ್ವವನ್ನು ಸಾರಿರುವ ಭಕ್ತಿ ಭಂಡಾರಿ ಜಗಜ್ಯೋತಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ವವನ್ನು ಮೈಗೂಡಿಸಿಕೊಂಡು ಜೀವನವನ್ನು ಸಾಗಿಸೋಣ ಎಂದು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಷಟಸ್ಥಲ ಧ್ವಜೋರೋಣವನ್ನು ನೆರವೇರಿಸಿದ ಕರ್ನಾಟಕ ದ್ರಾಕ್ಷಿ ಮಂಡಳಿ ರಾಜ್ಯಾಧ್ಯಕ್ಷರಾದ ಡಾ. ಬಿ ಯೋಗೇಶ್ ಬಾಬು ಅವರು ಮಾತನಾಡುತ್ತಾ ಬಸವಾದಿ ಶಿವಶರಣರ ತತ್ವವನ್ನು ಈ ಗಡಿ ಭಾಗದಲ್ಲಿ ಪರಮಪೂಜ್ಯ ಕಾಯಕಯೋಗಿ ಬಸವಲಿಂಗ ಮಹಾಸ್ವಾಮಿಗಳವರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಮೂಢನಂಬಿಕೆ ಕಂಧಾಚಾರಗಳನ್ನು ದುಶ್ಚಟಗಳನ್ನು ಬಿಟ್ಟು ಬಸವಾದಿ ಶಿವಶರಣರ ತತ್ವವನ್ನು ಮೈಗೂಡಿಸಿಕೊಂಡು ಜಾಗೃತಿಯಾಗಿ ರೆಂದು ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿ ಸುತ್ತ ಬಂದಿರುವ ಶ್ರೀಗಳು ನಮ್ಮ ಗ್ರಾಮದಲ್ಲಿ ಪ್ರಗತಿಪರ ರೈತರಾದ ಶ್ರೀಮತಿ ಸುಮಂಗಲಮ್ಮ ವೀರಭದ್ರಪ್ಪ ಇವರ ಸಹಕಾರದಿಂದ ಶ್ರೀಮಠದ ಶಾಖಾಮಠವನ್ನು ಪ್ರಾರಂಭಿಸಿ ಪ್ರತಿ ಪ್ರತಿ ವರ್ಷ ಬಸವ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ, ಪಿಆರ್ ಕಾಂತರಾಜ್ ಸಿದ್ದಯ್ಯನ ಕೋಟೆ ಕೆ ಬಸಣ್ಣ ವೀರಶೈವ ಸಮಾಜ ತಾಲೂಕು ಕಾರ್ಯದರ್ಶಿಯಾದ ನಾಗೇಂದ್ರಪ್ಪ ಶಿವಾನಂದ್ ಗೌಡ ದಿನೇಶ್ ಮಹೇಶ್ ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಜೀ ಕನ್ನಡ ಟಿವಿಯ ಮಹಾ ನಟಿಯಾಗಿ ಆಯ್ಕೆಯಾಗಿರುವ ಬಿಜಿಕೆರೆ ಗ್ರಾಮದ ಮಹಾನಟಿ ಕುಮಾರಿ ಗಗನ ಇವರನ್ನು ಪರಮ ಪೂಜ್ಯರು ಸನ್ಮಾನಿಸಿದರು. ಮೆರವಣಿಗೆಯಲ್ಲಿ ತಿಪ್ಪೇಸ್ವಾಮಿ ಗೊಂಬೆ ಮತ್ತು ಡೋಲ್ ಕಲಾ ಮೇಳದೊಂದಿಗೆ 20 ಜೋಡಿ ಎತ್ತಿನ ಗಾಡಿಯಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ ಮೊಳಕಾಲ್ಮುರು.