ಎರ್ರಿತಾತಾ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಮಾಡಿದ – ಕೂಡ್ಲಿಗಿ ಪ್ರಶಾಂತ ಸಾಗರ ಶ್ರೀಗಳು.
ಗುಡೇಕೋಟೆ ಮೇ.10

ಕೂಡ್ಲಿಗಿ ತಾಲೂಕಿನ ನಾಗರಹುಣಿಸೆ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಎರ್ರಿತಾತಾ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಪ್ರಾರಂಭೋತ್ಸವದ ಸಂಭ್ರಮ ಶುಕ್ರವಾರ ಮನೆ ಮಾಡಿದೆ.ಗ್ರಾಮದ ಎರ್ರಿತಾತಾ ದೇವಸ್ಥಾನ ಪ್ರಾರಂಭೋತ್ಸವ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ,ಗೋಪುರ ಕಳಸಾ ರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಬೆಳಿಗ್ಗೆಯಿಂದಲೇ ಪ್ರಾರಂಭವಾದವು.ಗೆದ್ದಲಗಟ್ಟೆ ಗ್ರಾಮದ ನಾಗಲಿಂಗಸ್ವಾಮಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಗಿನ ಜಾವ 5:20 ರಿಂದ 7:30 ರವರೆಗೆ ಗ್ರಾಮದ ಮಹಿಳೆಯರು ಆರತಿ ಕುಂಭದೊಂದಿಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಹಲವು ಹೋಮಗಳು ನೆರವೇರಿದವು.ಬಳಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತ್ರಿವಿಧ ದಾಸೋಹಿ ಶ್ರೀ ಷ ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಸಂಸ್ಥಾನ ಕೂಡ್ಲಿಗಿ ಇವರು ಆಶೀರ್ವಚನ ನೀಡಿದರು.ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳುಸುಂದರವಾದ ದೇವಸ್ಥಾನ ಕಟ್ಟಿರುವಂತೆ ಬದುಕನ್ನು ಸುಂದರವಾಗಿರಿಸಿ ಕೊಳ್ಳಿ ಎಂದು ತ್ರಿವಿಧ ದಾಸೋಹಿ ಶ್ರೀ ಷ ಬ್ರ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಸಂಸ್ಥಾನ ಕೂಡ್ಲಿಗಿ ಇವರು ತಿಳಿಸಿದರು.ಕೂಡ್ಲಿಗಿ ತಾಲ್ಲೂಕಿನ ನಾಗರಹುಣಿಸೆ ಗ್ರಾಮದಲ್ಲಿ ಶ್ರೀ ಎರ್ರಿತಾತಾ ದೇವಸ್ಥಾನ ಪ್ರಾರಂಭೋತ್ಸವ, ನೂತನ ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಪ್ರತಿಷ್ಠಾಪನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಚಳ್ಳುಗುರ್ಕಿಯಲ್ಲಿ ನೆಲೆಸಿರುವ ಎರ್ರಿತಾತಾನಿಗೂ ನಾಗರಹುಣಿಸೆ ಗ್ರಾಮಕ್ಕೆ ಅವಿನಾಭಾವ ಸಂಬಂಧವಿದೆ.ತಾತಾನ ಭಕ್ತರು ಎಲ್ಲಿ ಸಿಗುತ್ತಾರೆಂದರೆ ಅದು ನಾಗರ ಹುಣಿಸೆಯಲ್ಲಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ತಾತನ ಭಕ್ತರು ಈ ಗ್ರಾಮದಲ್ಲಿದ್ದಾರೆ. ಭಕ್ತಿಯ ಸಾಮ್ರಾಜ್ಯವಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಎಲ್ಲಾ ಜನಾಂಗದವರು ಇಲ್ಲಿ ಪ್ರೀತಿ, ಸಹಭಾಳ್ವೆ, ಸಹೋದರತೆ, ಸಮಾನತೆಯಿಂದ ಬದುಕುತ್ತಿದ್ದಾರೆ.ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ನಾಗರ ಹುಣಿಸೆ ಗ್ರಾಮ ಕೂಡ ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀ ಎರ್ರಿತಾತ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮಸ್ಥರು, ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು, ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.