ಬಸವಣ್ಣನವರ ಆದರ್ಶಗಳನ್ನು ನಾವುಗಳೆಲ್ಲಾ ರೂಢಿಸಿ ಕೊಳ್ಳಬೇಕು – ಶಿವರಾಮಗೌಡ ಬಿರಾದಾರ.
ಇಂಡಿ ಮೇ.10

ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ಬಸವಣ್ಣ ಕೊಟ್ಟ ಕೊಡುಗೆ ಅಪಾರವಾದದ್ದು. ಅವರ ತತ್ವ ಸಿದ್ಧಾಂತಗಳು ಇಡೀ ವಿಶ್ವ ಒಪ್ಪಿಕೊಳ್ಳುವ ಕಾಲ ಇಂದು ಸನ್ನಿಹಿತವಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷ ಶಿವರಾಯಗೌಡ ಬಿರಾದಾರ ಹೇಳಿದರು.ಶುಕ್ರವಾರ ತಾಲೂಕಿನ ಆಳೂರ ಗ್ರಾಮದ ಕಾರ್ಕಲ್ ವಸತಿ ಹತ್ತಿರ ಬಸವೇಶ್ವರ ಸರ್ಕಲದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಹಾಗೂ ತತ್ವ ಸಿದ್ಧಾಂತಗಳು ಸಾರ್ವಕಾಲಕ್ಕೂ ಸತ್ಯವಾಗಿವೆ, ಅದನ್ನು ಬಹುತೇಕ ಎಲ್ಲಾ ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಎಂದ ಅವರು, ಬಸವಣ್ಣನವರ ಆದರ್ಶಗಳನ್ನು ನಾವುಗಳೆಲ್ಲಾ ರೂಢಿಸಿ ಕೊಳ್ಳಬೇಕೆಂದರು.ಸಮಿತಿಯ ಉಪಾಧ್ಯಕ್ಷ ಜಗದೇವಪ್ಪ ಬಬಲಾದ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ‍್ಯ ನೀಡಿದ ಮೊಟ್ಟಮೊದಲ ದಾರ್ಶನಿಕ ಬಸವಣ್ಣನವರು ಎಂದ ಅವರು, ಹಿಂದಿನ ಕಾಲದಲ್ಲಿ ಹೆಣ್ಣಿನ ಎಲ್ಲಾ ಸ್ವಾತಂತ್ರವನ್ನು ಕಸಿದುಕೊಂಡು ಆಕೆಯನ್ನು ಅಡುಗೆ ಮನೆಗೆ ಸೀಮಿತ ಗೊಳಿಸಲಾಗಿತ್ತು. ಆದರೆ, ೧೨.ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣು ಮಕ್ಕಳಿಗೆ ಸಮಾನತೆ ಮತ್ತು ಸ್ವಾತಂತ್ರ‍್ಯವನ್ನು ನೀಡುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದರು ಎಂದರು.ನಿರಂಜನ ಬಡಿಗೇರ ಮಾತನಾಡಿ, ಬಸವಣ್ಣನವರು ೧೨.ನೇ ಶತಮಾನದಲ್ಲಿಯೇ ಜಾತಿ, ಲಿಂಗಭೇದ, ಮೇಲು ಕೀಳು ಎಂಬ ಭೇದವನ್ನು ತಡೆಯಲು ಹೋರಾಡಿದರು. ಬಸವಣ್ಣನವರ ಆದರ್ಶಗಳನ್ನು ನಾವುಗಳು ಅಳವಡಿಸಿ ಕೊಳ್ಳಬೇಕೆಂದರು.ಸಲೀಂ ಚಪರಬಂದ, ಬಸವರಾಜ ಕಾರ್ಕಲ್, ಧರ್ಮಣ್ಣ ನಾಟೀಕಾರ, ಬಸು ಖೇಡ, ಅಂಬಣ್ಣ ತೆಲಿ, ಪರಮೇಶ್ವರ ನಾಟೀಕಾರ, ಕಲ್ಯಾಣಿ ಕುಮಸಗಿ, ಸಂಗು ಬಗಲಿ, ರೇವಣಸಿದ್ದ ಬೇವನೂರ ಸೇರಿದಂತೆ ಅನೇಕ ಸಮಿತಿಯ ಸದಸ್ಯರುಗಳು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ.