ಗಣೇಶ ವಿಸರ್ಜನೆ ಮಾಡುವಾಗ ಶೋಭಾ ಯಾತ್ರೆಯಲ್ಲಿ – ಪಾಲ್ಗೊಂಡ ಶಾಸಕರು.
ಮೊಳಕಾಲ್ಮುರು ಸ.16

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಮೊಳಕಾಲ್ಮೂರು ಪಟ್ಟಣದ 16/9/2024 ರಂದು ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣರವರು ಚಾಲನೆ ನೀಡಿ ಸರ್ವ ಸಿದ್ದಿ ವಿನಾಯಕನ ಬಾವುಟವನ್ನು ಹಿಡಿದು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕ್ಷೇತ್ರದ ಎಲ್ಲಾ ನಾಗರಿಕರಿಗೆ ಮಳೆ ಬೆಳೆ ಸಮೃದ್ಧಿಯಾಗಿ ಅವರ ಬಾಳು ಸುಖಕರ ವಾಗಿರಲೆಂದು ಹಾರೈಸುತ್ತಾ ಗಣೇಶನನ್ನು ಕೈಮುಗಿದು ಬೇಡಿ ಕೊಂಡರು ವಿನಾಯಕ ನಿನಗಿನ್ನ ಮಿಗಿಲಾದ ದೇವರು ಯಾರು ಇಲ್ಲ ಸರ್ವರಲ್ಲೂ ನೀನು ಇರುವೆ ಎಂದು ಮೊಳಕಾಲ್ಮುರು ಪಟ್ಟಣದ ನಾಗರಿಕರು ಅದ್ದೂರಿಯಾಗಿ ಸಂಭ್ರಮ ದಿಂದ ಯುವಕರು ಕುಣಿದು ಡ್ಯಾನ್ಸ್ ಮಾಡುತ್ತಾ ಮತ್ತು ಮಹಿಳೆಯರು ಗಣೇಶನಿಗೆ ಅಕ್ಷತೆ ಕಾಳು ಹಾಕಿ ಕೈ ಮುಗಿದು ನಮಸ್ಕರಿಸಿದರು. ಗಣೇಶನನ್ನು ಶೋಭಾ ಯಾತ್ರೆಯ ಮುಖಾಂತರ ವಿಸರ್ಜನೆ ಮಾಡಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು