ವಿಶ್ವಗುರು ಬಸವಣ್ಣನವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ದಾರಿ ದೀಪ – ಗೊಣ್ಣಾಗರ.
ಹುನಗುಂದ ಮೇ.11

ಸಮ ಸಮಾಜವನ್ನು ಕಟ್ಟಲು ಕಲ್ಯಾಣದಲ್ಲಿ ಕ್ರಾಂತಿಯನ್ನು ಮಾಡಿ,ಸರ್ವ ಸಮಾಜದ ಶರಣರನ್ನು ಒಂದೆಡೆಯಲ್ಲಿ ಕೂಡಿಸಲು ೧೨ ನೆಯ ಶತಮಾನದಲ್ಲಿ ಅನುಭವ ಮಂಟಪವನ್ನು ನಿರ್ಮಿಸಿದ ವಿಶ್ವಗುರು ಬಸವಣ್ಣನವರ ಆದರ್ಶಮಯ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ ಪರಿಷತ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಬಸವರಾಜ ಗೊಣ್ಣಾಗರ ಹೇಳಿದರು.ಶುಕ್ರವಾರ ಪಟ್ಟಣದ ಅಖಿಲ ಕರ್ನಾಟಕ ವೀರಶೈವ ಪರಿಷತ್ ವತಿಯಿಂದ ವಿಶ್ವಗುರು ಬಸವೇಶ್ವರರ ೮೯೧ ನೆಯ ಜಯಂತೋತ್ಸವ ನಿಮಿತ್ಯ ಬಸವ ಮಂಟಪದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಬಸವಣ್ಣನವರ ಭಾವಚಿತ್ರ ಮೆರವಣೆಗೆ ವೇಳೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜ ಶುದ್ದೀಕರಣ ಮಾಡುವುದ್ದಲ್ಲದೇ ಇತರೇ ಶರಣರನ್ನು ಸಮಾನ ವೇದಿಕೆಯಲ್ಲಿ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಮಹಾನ ಮಾನವತಾವಾದಿ ಬಸವಣ್ಣನವರು.ಇವರ ವಚನ ಸಾಹಿತ್ಯ ಹಿಂದೆ, ಇಂದು, ಮುಂದೆಯು ಕೂಡಾ ಪ್ರಸ್ತುತವಾಗಿದೆ. ಪ್ರತಿಯೊಬ್ಬರು ಮನೆಗಳಲ್ಲಿ ತಮ್ಮ ಮಕ್ಕಳಿಗೆ ಬಸವಣ್ಣನವರ ವಚನಗಳನ್ನು ಕಲಿಸುವ ಕಾರ್ಯವಾಗಬೇಕು ಎಂದರು.ಈ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರ ಮೆರವಣೆಗೆಯು ಅನೇಕ ವಾಧ್ಯ ವೈಭವದೊಂದಿಗೆ ಪಟ್ಟಣದ ಬಸವ ಮಂಟಪದಿಂದ ಪ್ರಾರಂಭವಾಗಿ ಲಿಂಗದಕಟ್ಟಿ, ಮೇನ್‌ಬಜಾರ್, ಸಮಗಮೇಶ್ವರ ದೇವಸ್ಥಾನ ಮೂಲಕ ಮರಳಿ ಬಸವ ಮಂಟಪವನ್ನು ತಲುಪಿತು.ಶಿವಾನಂದ ಕಂಠಿ,ಶೇಖರಪ್ಪ ಬಾದವಾಡಗಿ,ಉಪಾಧ್ಯಕ್ಷ ಈರಣ್ಣ ಅಂಗಡಿ,ಮಹಾಂತಪ್ಪ ಪಲ್ಲೇದ,ಬಸವರಾಜ ಗೊಣ್ಣಾಗರ, ಬಸವರಾಜ ಕಂಬಾಳಿಮಠ, ಮುತ್ತು ಲೋಕಾಪೂರ, ಮುತ್ತಣ್ಣ ಕಲಗೋಡಿ,ಮಲ್ಲಿಕಾರ್ಜುನ ಲೆಕ್ಕಿಹಾಳ, ಸುರೇಶ ಹಳಪೇಟಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ