ಶ್ರೀ ಜಗಜ್ಯೋತಿ ಬಸವೇಶ್ವರರ ಹಾಗೂ ಮಹಾ ಶರಣೆ ಮಲ್ಲಮ್ಮನವರ ಜಯಂತೋತ್ಸವ ಆಚರಣೆ.
ಕಂಪ್ಲಿ ಮೇ.11

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಾ ಕಛೇರಿಯಲ್ಲಿ , ವೇಮನ ರೆಡ್ಡಿ ಜನ ಸಂಘ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರಿಂದ ಕಂಪ್ಲಿ ಜನತೆಯಿಂದ ಆಚರಣೆ.ಹಾಗೂ “ಸಾಂಗತ್ರಯ ಸಂಸ್ಕೃತ” ಪಾಠಶಾಲೆಯಲ್ಲಿ ,ಅಕ್ಕನ ಬಳಗ ಮಹಿಳಾ ಮಂಡಳಿ. ವೀರಶೈವ ಹಾಗೂ ಜಂಗಮ ಸಮಾಜದ ವತಿಯಿಂದ ಕಂಪ್ಲಿ ಪಟ್ಟಣದ ಶ್ರೀ ಶಾರದಾ ಶಾಲೆ ಯಿಂದ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯವರೆಗೆ ಪ್ರಮುಖ ಬೀದಿಗಳಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಹಾಗೂ ಮಹಾ ಶರಣೆ ಮಲ್ಲಮ್ಮರವರ ವೇಷ ಭೂಷಣ ಧರಿಸಿದ ಮಕ್ಕಳು ಸಾರ್ವಜನಿಕರಿಗೆ ಸಂತೋಷ ಪಟ್ಟರು ಮತ್ತು ಭಾವಚಿತ್ರವನ್ನು ಎತ್ತಿನ ಬಂಡಿಯಲ್ಲಿ ಅಳವಡಿಸಿ ಕಂಪ್ಲಿಯ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಸಾಗಿತು ಈ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಶ್ರೀ ಜಗಜ್ಯೋತಿ ಬಸವಣ್ಣ ಹಾಗೂ ಮಹಾಶರಣಿ ಹೇಮರೆಡ್ಡಿ ಮಲ್ಲಮ್ಮ ಅನೇಕ ಮಹಿಳೆಯರು ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ ನೀಡಿದ ತಹಶೀಲ್ದಾರರಾದ ಶಿವರಾಜ್ ಕಂಪ್ಲಿ, ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯ ಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಘನ ಮಠದಯ್ಯ, ಅರವಿ ಬಸವನಗೌಡ, ಎಸ್ ಎಂ ನಾಗರಾಜ್ ಸ್ವಾಮಿ, ಬಸವರಾಜ್, ಬಂಡಯ್ಯ ಸ್ವಾಮಿ, ಟಿ ಹೆಚ್ ಎಂ ರಾಜಕುಮಾರ, ಶ್ರೀಮತಿ ಶಿವಗಂಗಮ್ಮ, ಅಕ್ಕನ ಬಳಗದವರು ಹಾಗೂ ಅಧ್ಯಕ್ಷರು, ಪತ್ರಯ್ಯ ಸ್ವಾಮಿಜಂಗಮ ಸಮಾಜದ ಸದಸ್ಯರು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಮೆರವಣಿಗೆ ಆರಂಭವಾಯಿತು. ಈ ಸಂದರ್ಭದಲ್ಲಿ ಕಂಪ್ಲಿ ಜನತೆ ಅಲ್ಲದೆ ಇಟಗಿ, ಸಣಾಪುರ, ನೆಲ್ಲುಡಿ, ಮುದ್ದಾಪುರ, ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಂಪ್ಲಿಯ ಕೆ ಗವಿಸಿದ್ದಪ್ಪ ಹೆಚ್.ನಾಗರಾಜ್, ಎಸ್.ಡಿ.ಬಸವರಾಜ್, ಜಡಯ್ಯ ಸ್ವಾಮಿ, ಕೊಟ್ರಪ್ಪ ಡಿ.ರವಿ , ಜಿ.ಎಂ.ಸುರೇಶ್ ಸ್ವಾಮಿ, ವಾಗೀಶ್ ಪಂಡಿತಾರಾದ್ಯ, ಗಣಾಚಾರಿ ಕೊಟ್ರಪ್ಪ ,ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು ಶಾರದಾ ಶಾಲೆಯ ಸಿಬ್ಬಂದಿ ವರ್ಗದವರು, ಶಿಕ್ಷಕರು, ಸೇರಿ ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು. ಶ್ರೀ ಕ್ಷೇತ್ರ ಕಲ್ಮಠದ ಶಾಲಾ ಸಿಬ್ಬಂದಿ ವರ್ಗದವರಾಗಲಿ ಶಿಕ್ಷಕರಾಗಲಿ ಇಂತಹ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸದರು, ಪ್ರಸಾದದ ವ್ಯವಸ್ಥೆಯನ್ನು “ಶಂಕರ್ ಕ್ಯಾಟರಿಂಗ್” ಇವರಿಂದ ಉತ್ತಮ ರೀತಿಯಲ್ಲಿ ಭಕ್ತರಿಗೆ ಉಣ ಬಡಿಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಮ್.ರಾಜಕುಮಾರ್.ಕಂಪ್ಲಿ. ಬಳ್ಳಾರಿ.