ಹಿರೇಕುಂಬಳಗುಂಟೆ ಶ್ರೀ.ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಆನುಷಾ ಶೇ. 89% ಫಲಿತಾಂಶ.
ಹಿರೇಕುಂಬಳಗುಂಟೆ ಮೇ.11

ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಹೀರೆ ಕುಂಬಳಗುಂಟೆ ಶ್ರೀ. ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಅನುಷಾ 625 ಕ್ಕೆ – 554 ಅಂಕ ಪಡೆದು ಶೇ 89% ಫಲಿತಾಂಶ ತಂದುಕೊಟ್ಟು ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಶಾಲೆಯ ಮುಖ್ಯ ಗುರುಗಳಾದ ಸುಜಾತ ಇವರು ತಿಳಿಸಿದ್ದಾರೆ. 2023 24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗೆ ಕುಳಿತ 41 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಡಿಸ್ಟಿಂಕ್ಷನ್ 4 ವಿದ್ಯಾರ್ಥಿಗಳು, ಪ್ರಥಮ 22 ವಿದ್ಯಾರ್ಥಿಗಳು, ದ್ವಿತೀಯ 10 ವಿದ್ಯಾರ್ಥಿಗಳು ಹಾಗೂ ತೃತೀಯ 3 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಮೋನಿಕಾ 551 ಶೇ. 88%, ನಸ್ರಿನ್ 538 ಶೇ 86%, ಅಮೃತ 537 ಶೇ 86% ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರತ್ನಮ್ಮ ಮತ್ತು ಸದಸ್ಯರು, ಗ್ರಾಮದ ಮುಖಂಡರು, ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.