ಜೆ.ಜೆ.ಎಂ ಕಾಮಗಾರಿ ಯಿಂದ ಮನೆಯ ಸಂಪನಲ್ಲಿ ಕೊಳಚೆ ನೀರು ಮಿಶ್ರಣ – ಮುಖಂಡ ಸೈಯದ್ ನೌಶಾದ್ ಆಕ್ರೋಶ.
ಗುಡೇಕೋಟೆ ಮೇ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಗುಡೇಕೋಟೆ ಹೋಬಳಿಯ ಗುಡೇಕೋಟೆ ಗ್ರಾಮದ 3 ನೇ ವಾರ್ಡಿನಲ್ಲಿ ಜೆ.ಜೆ.ಎಂ ನ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯೂ ಪ್ರತಿ ಓಣಿ ಓಣಿಗಳಲ್ಲಿ ಸರ್ಕಾರ ದಿಂದ ಕಾಂಕ್ರೀಟ್ ರಸ್ತೆ ಮಾಡಿರುವ ಎಲ್ಲಾ ರೋಡ್ ಗಳನ್ನು ಜೆ.ಜೆ.ಎಂ ಇಲಾಖೆಯವರು ಹಾಗೂ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕೆಲಸ ಮಾಡಿರುವುದು ಕಂಡು ಸ್ಥಳೀಯ ಮುಖಂಡರುಗಳು ಆಕ್ರೋಶಕ್ಕೆ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಜೆ.ಜೆ.ಎಂ ಗುತ್ತಿಗೆದಾರರು ಪ್ರತಿ ಮನೆ ಮನೆಗೂನಲ್ಲಿ ಎಂಬ ಯೋಚನೆಯಲ್ಲಿ ಮಾಡಿರುವಂತಹ ಕಾಮಗಾರಿಯ ಕೆಲಸ ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ಕಾಂಕ್ರೆಟ್ ರೋಡನ್ನು ಹೊಡೆದಾಕಿ ಹೊಡೆದಂತ ಕಾಂಕ್ರೀಟ್ ಕಲ್ಲುಗಳು ಸ್ವಚ್ಛ ಮಾಡಿ ತೆಗೆಯದೆ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಬಿಟ್ಟು ಜನರು ಓಡಾಡುವ ಸ್ಥಳದಲ್ಲಿ ಎಷ್ಟೋ ಜನ ಸೈಕಲ್ ಮೋಟಾರ್ ನಲ್ಲಿ ಹೋಗುತ್ತಿರುವಾಗ ಪುಡಿ ಕಲ್ಲುಗಳನ್ನು ರಸ್ತೆಯಲ್ಲಿ ಚಲ್ಲಾ ಪಿಲ್ಲಿ ಬಿದ್ದಿದ್ದು ಸೈಕಲ್ ಮೋಟಾರ್ ಸ್ಕಿಡ್ ಆಗಿ ಬಿದ್ದಿರುವ ಘಟನೆಯು ಸಹ ಉಂಟು ಇದನ್ನು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತಿಳಿಸಿದರು.

ಸಹ ಪ್ರಯೋಜನವಾಗಿಲ್ಲ ಮತ್ತು ತಮ್ಮ ತಮ್ಮ ಮನೆಯ ಮುಂದೆ ಕುಡಿಯುವ ನೀರಿನ ಸಂಪ್ ನಲ್ಲಿ ಜೆ.ಜೆ.ಎಂ ನವರು ಹೊಡೆದಾಕಿರುವ ಕಾಂಕ್ರೆಟ್ ರಸ್ತೆಯನ್ನು ಪಕ್ಕದಲ್ಲಿರುವ ಚರಂಡಿಯ ಕೊಳಚೆ ನೀರು ಸಂಪನ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಕ್ಸ್ ಆಗಿ ಅನಾರೋಗ್ಯಕ್ಕೆ ತುತ್ತಾಗುವಂತ ಪರಿಸ್ಥಿತಿ ಉಂಟಾಗಿದೆ ಸ್ಥಳಿಯ ಕಾಂಗ್ರೆಸ್ ಮುಖಂಡರಾದ ಸೈಯದ್ ನೌಶಾದ್ ರವರು ಆಕ್ರೋಶ ಹೋರಾಕಿ ಅಧಿಕಾರಿಗಳು ಗುಡೆಕೋಟೆಯ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಮ್ಮ ಸುದ್ದಿ ವಾಹಿನಿಯ ಮೂಲಕ ತಿಳಿಸಿದ್ದಾರೆ.ಶೀಘ್ರದಲ್ಲಿಯೇ ಈ ಕಾಮಗಾರಿ ಮಾಡಿದಂತ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟಂತ ಅಧಿಕಾರಿಗಳು ಜನಗಳಿಗೆ ತೊಂದರೆ ಆಗದಂತೆ ಆದಷ್ಟು ಬೇಗನೆ ಕಾಮಗಾರಿಯನ್ನು ಮುಂದುವರಿಕೆಗೆ ಎಚ್ಚರಿಕೆ ನೀಡಿದ್ದಾರೆ. ಗುಡೆಕೋಟಿಯ ಜನಗಳಿಗೆ ಅನಾರೋಗ್ಯಕ್ಕೆ ತೊಂದರೆ ಯಾದರೆ ನೇರವಾಗಿ ಸಂಬಂಧಪಟ್ಟಂತ ಅಧಿಕಾರಿಗಳೇ ಹೊಣೆ ಹೊರ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.