“ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ”

ಉಜ್ಜಯಿನಿ ಮೇ.12

ಪಂಚ ಪೀಠಗಳಲ್ಲಿ ಒಂದಾಗಿರವ ನಾಡಿನ ಪ್ರಸಿದ್ಧ ಉಜ್ಜಯಿನಿ ಶ್ರೀ ಜಗದ್ಗುರು ಮರುಳ ಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ   ಅದ್ದೂರಿಯಾಗಿ ನಡೆಯಿತು.ಸ್ವಾಮಿಯ ಪಟಾಕ್ಷಿಯನ್ನು 2.01 ಲಕ್ಷ ರೂ.ಗೆ  ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ಪ್ರವೀಣ್ ಸವಾಲಿನಲ್ಲಿ ಪಡೆದು ಕೊಂಡರು. ಪಟಾಕ್ಷಿ ಸವಾಲು ಮುಗಿಯುತ್ತಿದ್ದಂತೆ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಳೆ ಬೆಳೆ ಸಮೃದ್ಧವಾಗಿ ಆಗಿ ರೈತರು ಬದುಕು ಹಸನಾಗಲಿ. ನಾಡಿನ ಭಕ್ತರಿಗೆ ಮರುಳ ಸಿದ್ದೇಶ್ವರ ಸ್ವಾಮಿ ಸರ್ವವನ್ನು ಕಲ್ಪಿಸಿ ಸನ್ಮಂಗಲ ನಿರ್ಮಾಣ ಮಾಡಲಿ ಎಂದು ಆಶೀರ್ವಚನ ನೀಡಿ ವೈಭವದ ರಥೋತ್ಸವಕ್ಕೆ ಸಂಜೆ 6 ಗಂಟೆಗೆ ಚಾಲನೆ ನೀಡಿದರು. ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಹರ್ಷೋದ್ದಾದಿಂದ ಜಯಘೋಷ ಕೂಗುತ್ತ ರಥವನ್ನು ಎಳೆದೊಯ್ದರು.

ರಥವನ್ನು ಪಾದ ಗಟ್ಟಿಯವರೆಗೆ ಎಳೆದೊಯ್ದರು. ಮತ್ತೆ ಮರಳಿ ಮೂಲಸ್ಥಾನಕ್ಕೆ ಎಳೆತಂದು ಉತ್ಸವ ಮೂರ್ತಿಯನ್ನುಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಶ್ರೀಮಠಕ್ಕೆ ತಂದು ಮಠದಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ಮಂಗಳಾರತಿ ಬೆಳಗಿ ಉತ್ಸವದ ಸಂಭ್ರಮಕ್ಕೆ ವಿರಾಮ ನೀಡಲಾಯಿತು. ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯತೆ ಪಡೆದರು. ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವದ ಕಾರ್ಯಕ್ರಮದಲ್ಲಿ ಮೊದಲುಕೊಟ್ಟೂರಿನಲ್ಲಿ ಜರುಗಿದ ನಾಡಿನ ಪ್ರಸಿದ್ಧ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾನ ಮಾಡಲಾಯಿತು.

ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತ ರಥವನ್ನು ಮುಂದೆ ಎಳೆದು ಕೊಂಡು ಹೋದರು. ನಂತರ ಪಾದಗಟ್ಟೆ ಮುಟ್ಟಿ ಸ್ವಾಮಿಯ ಪೂಜೆ ಸಲ್ಲಿಸಿ ಮತ್ತೆ ಮರಳಿ ಬಂದು ನೆಲೆ ನಿಲ್ಲಿಸಲಾಯಿತು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button