ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪ್ರತಿಭಾವಂತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ.

ಕಂದಗಲ್ಲ ಮೇ.13

ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಗ್ರಾಮದ ಯುವ ಮುಖಂಡ ಪ್ರಶಾಂತ್. ಶ.ಬನ್ನಿಗೋಳ ಹೇಳಿದರು.ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕಂದಗಲ್ಲದ ಶ್ರೀ ಬಸವೇಶ್ವರ ಸಹಕಾರಿ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ.ಅತಿಥಿಗಳಾಗಿ ಭಾಗವಹಿಸಿ ಈ ಸಲದ ಪರೀಕ್ಷೆಯಲ್ಲಿ ನಮ್ಮ ಕಂದಗಲ್ಲ ಗ್ರಾಮವು ಇಲಕಲ್ಲ- ಹುನಗುಂದ ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಮ್ಮ ಗ್ರಾಮದ ವಿದ್ಯಾರ್ಥಿ. ನಮ್ಮ ಗ್ರಾಮಕ್ಕೆ ಹಾಗೂ ನಮಗೆ ಕೀರ್ತಿ ತಂದ ವಿದ್ಯಾರ್ಥಿಯಾಗಿದ್ದಾನೆ. ಅದೇ ರೀತಿ ಇಲ್ಲಿಯ ವಿದ್ಯಾರ್ಥಿಳು ರಾಜ್ಯದ ವಿವಿಧಡೆಗಳಲ್ಲಿ ಕಲಿತು ಉತ್ತಮ ಅಂಕ ಪಡೆದು ಗ್ರಾಮದ ಕಳೆ ಹೆಚ್ಚಿಸಿದ್ದಾರೆ. ಇವನ್ನೆಲ್ಲ ಗುರುತಿಸಿ ಪ್ರೋತ್ಸಾಹಿಸಿ ಇನ್ನುಳಿದ ವಿದ್ಯಾರ್ಥಿಗಳಲ್ಲಿಯೂ ನವ ಚೈತನ್ಯ ತುಂಬಿ ಪ್ರೋತ್ಸಾಹಿಸುತ್ತಿರುವ ನಿಹಾರಿಕಾ ಗ್ರಾಮೀಣಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಲಿ ಎಂಬ ಆಶಾಭಾವನೆ ನಾವು ಹೊಂದಿದ್ದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಮೊಬೈಲ್ ಎಂಬ ಮಹಾ ಮಾರಿಯನ್ನು ಬಿಟ್ಟು ಓದು ಬರಹದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಶ್ರಮಪಟ್ಟು ಪ್ರತಿಯೊಂದು ಆಟ ಪಾಠ ನೃತ್ಯ ಸಾಂಸ್ಕೃತಿಕ ಸೇರಿದಂತೆ ಪ್ರತಿಯೊಂದು ರಂಗಗಳಲ್ಲಿಯೂ ವಿದ್ಯಾರ್ಥಿಗಳು ಮುಂದೆ ಬಂದು ನಮ್ಮ ಕಂದಗಲ್ಲ ಗ್ರಾಮದ ಕೀರ್ತಿ ಹೆಚ್ಚಿಸಬೇಕೆಂದರು.ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪತ್ರಕರ್ತರಾದ ವೀರೇಶ್, ಚ,ಶಿಂಪಿ ಅವರು ವಹಿಸಿಕೊಂಡಿದ್ದರು. ಬಸವೇಶ್ವರ ಸಹಕಾರಿ ಬ್ಯಾಂಕಿನ ಮು ವ್ಯವಸ್ಥಾಪಕರಾದ ಲಕ್ಷ್ಮಣ ಗಂಗಾಮತ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಇಲಕಲ್ಲ -ಹುನಗುಂದ ಅವಳಿ ತಾಲೂಕಿಗೆ 617 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ ಕಂದಗಲ್ಲ ಗ್ರಾಮದ ಕಾರ್ತಿಕ್, ರು. ಬಡಗೌಡ್ರು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತು 600 ಅಂಕ ಗಳಿಸಿ ಕಂದಗಲ್ ಗ್ರಾಮಕ್ಕೆ ಪ್ರಥಮ ಸ್ಥಾನ ಪಡೆದ ಐಶ್ವರ್ಯ. ಮಾ. ಮಠ , ಹಾಗೂ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 597 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ ಶರಣಬಸವ ಧರ್ಮಂತಿ. 554 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ ಶಾಲಿನಿ ಹಿರೇಮಠ. 507 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ ಮರಟಗೇರಿಯ ಸುನಿಲ್ ಕೇಲೂರ, ರವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಮಹಾಂತೇಶ. ಸಿ. ಮಠ, ಗುರುಪಾದಯ್ಯ. ಹಿರೇಮಠ, ಉಸ್ಮಾನ್ ಜನಾಬ್. ಬಾಗವಾನ್, ಗುರು.ಸಜ್ಜನ್, ಅರ್ಜುನ್, ಇಚಲಕರಂಜಿ. ಲಿಂಗರಾಜ್, ಶಿರಗುಂಪಿ. ಮುಬಾರಕ,ನಾಯಕ್. ವೆಂಕಟರೆಡ್ಡಿ, ಕೆಲ್ಲೂರ. ಸಂತೋಷ್, ಕಲ್ಗೋಡಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಯಂಕಣ್ಣ, ಮಳ್ಳಿ ಸ್ವಾಗತಿಸಿದರು, ರಾಜು,ಪರಾಸರ್. ವಂದಿಸಿದರು, ಸಂಸ್ಥಾಪಕರಾದ ಡಾ. ಸಂತೋಷ್ ಪೂಜಾರ. ಕಾರ್ಯಕ್ರಮ ನಿರೂಪಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button