ಹದಗೆಟ್ಟ ರಸ್ತೆ ಕಣ್ಣು ಮುಚ್ಚಿ ಕುಳಿತ ಗ್ರಾ.ಪಂ ಅಧಿಕಾರಿ.
ಯಲಗೋಡ ಮೇ.16

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿನ ಹಣೆಬರಹ ಎರಡು ದಿನ ಮಳೆ ಆಗಿದಕ್ಕೆ ಗ್ರಾಮದಲ್ಲಿನ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ ಇದಕ್ಕೆ ಸಂಬಂದ ಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ ಅವರು ಇದರ ಬಗ್ಗೆ ಗಮನ ವಹಿಸುವಬೇಕು ಅವರು ಪಂಚಾಯತಿಗೆ ಬರುವುದು ಅಪರೂಪ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಗ್ರಾಮದ ಸಮಸ್ಯೆ ಸಲುವಾಗಿ ಇರಬೇಕು ಆದರೆ ತಮ್ಮ ಗೋಳು ನೆಪ ಹೇಳಿ ಜನರಿಗೆ ಮೋಸ ಮಾಡುತ್ತಿದ್ದರು, ಈ ಪಂಚಾಯತಿಯಲ್ಲಿ ಯಾವುದೇ ಒಂದಾದರೂ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ, ಈ ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ವಂದಾಲ, ಕದರಾಪೂರ, ಯಲಗೋಡ ಗ್ರಾಮದಲ್ಲಿ ನೀರು ರಸ್ತೆ ಚರಂಡಿಗಳು ಸಮಸ್ಯೆಗಳು ಇವೆ. ಆದರೆ ಇದರ ಬಗ್ಗೆ ಗಮನ ಹರಿಸದ ಅಭಿವೃದ್ಧಿ ಅಧಿಕಾರ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ, ಗ್ರಾಮ ಪಂಚಾಯಿತಿಗೆ ಹೋದ ಸಾರ್ವಜನಿಕರಿಗೆ ಕುಡಿಯಲು ನೀರು ಇಲ್ಲ, ಕುಡಲು ಕುರ್ಚಿ ಇಲ್ಲ ಈ ಪಂಚಾಯತಿಯ ಹಣೆಬರಹ,ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಈ ಪಂಚಾಯತಿಯ ಬಗ್ಗೆ ಗಮನ ಹರಿಸಬೇಕು, ಇಲ್ಲದಿದ್ದರೆ ಗ್ರಾಮ ಪಂಚಾಯತಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮದ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.