ಹಾಸಿಮ್ ಖುರೇಷಿ, ರಹೆಮತ್ ಅಲಿ ಸೇವೆ ಮೆಚ್ಚುವಂತದ್ದು – ಎಂದ ಅರುಣ್ ಚಂದಾ.
ಮಾನ್ವಿ ಅ.06




ಕಲ್ಮಠದಿಂದ ನಡೆದ ಸುವರ್ಣ ದಸರಾ ಮಹೋತ್ಸವ ಹಾಗೂ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ಹಾಸಿಮ್ ಖುರೇಷಿ ಮತ್ತು ರಹೆಮತ್ ಅಲಿ ಬಳಗದವರು ಹಣ್ಣು ಹಂಪಲು ಹಾಗೂ ನೀರಿನ ಬಾಟಲಿ ವಿತರಣೆ ಮಾಡಿ ಸೌಹಾರ್ದತೆ ಸಾರಿದರು.

ರಾಯಚೂರು ಜಿಲ್ಲೆಯ ಮಾನ್ವಿ ಅಂದರೆ ಸಾಕು ಸೌಹಾರ್ದತೆಯ ತವರೂರು ಎಂದು ಭಾವೈಕ್ಯತೆ ಇದೆ. ಮುಸ್ಲಿಂ ಧರ್ಮ ಹಬ್ಬದ ಮೆರವಣಿಗೆಯಲ್ಲಿ ಹಿಂದೀ ಬಾಂಧವರು ಸೌಹಾರ್ದತೆ ಸಾರಿದರೆ ಹಿಂದೂ ಬಾಂಧವರ ಹಬ್ಬದಲ್ಲಿ ಮುಸ್ಲಿಂ ಸಮಾಜದ ಹಾಸಿಮ್ ಖುರೇಷಿ ಹಾಗು ರಹೆಮತ್ ಅವರು ಬಾಳೆಣ್ಣು ವಿತರಿಸಿ ಸೌಹಾರ್ದತೆ ಸಾರಿರುವುದು ಮೆಚ್ವುವಂತದ್ದು ಎಂದು ವೀರಶೈವ ಲಿಂಗಾಯತ ಸಮಾಜದ ಮಾನ್ವಿ ತಾಲೂಕಾಧ್ಯಕ್ಷ ಅರುಣ್ ಚಂದಾ ತಿಳಿಸಿದರು.
ಹಾಸಿಮ್ ಖುರೇಷಿ ಮತ್ತು ರಹೆಮತ್ ಅಲಿ ಅವರು ಸಾಮಾಜಿಕ ಕಾರ್ಯಕ್ರಮ ಮಾಡಿದ್ದರಿಂದಲೇ ಸೌಹಾರ್ದತೆ ಸಾರುವ ಮೂಲಕ ಮಾದರಿಯಾಗಿದ್ದಾರೆಂದು ವಕೀಲ ವೀರನಗೌಡ ಪೋತ್ನಾಳ್ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ