ರಾಷ್ಟ್ರೀಯ ಬಸವ ಪ್ರಶಸ್ತಿಗೆ ಭಾಜನ ಎಂ.ಬಸವರಾಜ್. ಕಕ್ಕುಪ್ಪೆ.
ಕೂಡ್ಲಿಗಿ ಮೇ.18

ಚೇತನ ಫೌಂಡೇಶನ್ ಕರ್ನಾಟಕ ಇವರು ಆಯೋಜಿಸಿರುವ ವಚನ ವೈಭವ ಬಸವ ಜಯಂತಿಯ ಅಂಗವಾಗಿ ಕವಿಗೋಷ್ಠಿ, ಉಪನ್ಯಾಸ, ವಚನ ಗಾಯನ ಹಾಗೂ ಬಸವ ಚೇತನ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ 19 ಮೇ 2024 ರಂದು ಬೆಳಿಗ್ಗೆ 10:00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ಧಾರವಾಡದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎಂ ಬಸವರಾಜ್ ಕಕ್ಕುಪ್ಪಿ ಯವರಿಗೆ ರಾಷ್ಟ್ರೀಯ ಬಸವ ಪ್ರಶಸ್ತಿ ನೀಡಿ ರೈತ ಸಂಘದ ವಿಜಯನಗರ ಜಿಲ್ಲಾ ಕಾರ್ಯಧ್ಯಕ್ಷ ರಾಗಿ ಮತ್ತು ಸುಮಾರು 8 ರಿಂದ 10 ವರ್ಷಗಳು ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಹೋರಾಟ ಮಾಡುತ್ತಾ ಮತ್ತು ವಿಶೇಷವಾಗಿ ಕೂಡ್ಲಿಗಿ ತಾಲ್ಲೂಕಿನ ನಿರಾವರಿ ಹೋರಾಟದಲ್ಲಿ ನಿರಂತರ ಹೋರಾಟ ಮಾಡುತ್ತಾ ನೀರಾವರಿ ಯೋಜನೆ ಜಾರಿಗೆ ಬರುವವರೆಗೂ ನಿರಂತರ ಹೋರಾಟ ಮಾಡಿದವರಲ್ಲಿ ಇವರು ಕೂಡ ಒಬ್ಬರಾಗಿದ್ದರು ಇದನ್ನು ಗುರುತಿಸಿ ರಾಷ್ಟ್ರೀಯ ಬಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಶ್ರೀ ವೇ. ಕಾ. ಬ್ರ. ಚರಂತಯ್ಯ ಹಿರೇಮಠ್ ಕೊಣ್ಣೂರು ಮಠದ ಸ್ವಾಮೀಜಿಗಳು ಪುಣ್ಯಕ್ಷೇತ್ರ ಹುಬ್ಬಳ್ಳಿ ಧಾರವಾಡ ಹಾಗೂ ಉದ್ಘಾಟಿಸುವರು ಸುರೇಶ ಎಸ್ ಸಮಗಿ, ಪ್ರಾಧ್ಯಾಪಕರು ಶಿಕ್ಷಣ ವಿಶ್ವವಿದ್ಯಾನಿಲಯ ಧಾರವಾಡ ಬಿಎ ಓಂಕಾರ್ ಸ್ವಾಮಿ, ವೀರ ಸಾಬ್ ನದಾಫ್ ನಿವೃತ್ತ ನೌಕರರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ, ಗೌರವಾಧ್ಯಕ್ಷರು ಚೇತನ ಫೌಂಡೇಶನ್ ಧಾರವಾಡ, ಎಲ್ ಐ ಲಕ್ಕಮ್ಮನವರ್ ರಾಜ್ಯ ಸಮಿತಿ ಸದಸ್ಯರು ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಡಾ ಜಿ ಶಿವಣ್ಣ ರಾಜ್ಯಾಧ್ಯಕ್ಷರು ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರು,

ಚಂದ್ರಶೇಖರ ಮಡಲಗೇರಿ ಆಯೋಜಕರು ಚೇತನ ಫೌಂಡೇಶನ್ ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಅಶ್ವಿನಿ ಪ್ರಕಾಶನ ಗದಗ, ನವಿಲುಗರಿ ಸಾಹಿತ್ಯ ವೇದಿಕೆ ಧಾರವಾಡ, ಸುವರ್ಣ ಮಹಿಳೆಯರ ಕನಸಿನ ಧಾರವಾಡ, ಕುಮಾರೇಶ್ವರ ನಗರ ಮಹಿಳಾ ಮಂಡಳಿ ಧಾರವಾಡ ಇವರ ಸಹಯೋಗದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ತಿಳಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.