ಶ್ರೀ ನಿಮಿಷಾಂಬ ದೇವಿ ಜಯಂತಿ ಆಚರಣೆ.
ಕೊಟ್ಟೂರು ಮೇ.18

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 18 ಮೇ 2024 ರಂದು ಶ್ರೀ ನಿಮಿಷಾಂಬ ದೇವಿ ಜಯಂತಿ ಆಚರಣೆ ಮಾಡಲಾಯಿತು.ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಸರ್ವ ಸದಸ್ಯರು ಮತ್ತು ಮುಖಂಡರು ಸೇರಿ ಶ್ರೀ ನಿಮಿಷಾಂಬ ದೇವಿ ದೇವಸ್ಥಾನ ಸಮುದಾಯ ಭವನ, 6 ನೇ.ವಾರ್ಡ್ , ಸರ್ಕಾರಿ ಆಸ್ಪತ್ರೆ ರಸ್ತೆ, ಜವಳೇರ್ ಖಣದ ಗೇಟ್ ಒಳಗೆ ಶ್ರೀ ನಿಮಿಷಾಂಬ ದೇವಿ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಚಿತ್ತಗಾರ ಅಣ್ಣಪ್ಪ ಮರಿಯಪ್ಪ ಅಧ್ಯಕ್ಷರು ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಕೊಟ್ಟೂರು ಮತ್ತು ಸಿಜಿ ಕೋಟೇಶ್ ಕಾರ್ಯದರ್ಶಿಗಳು ಮತ್ತು ಸಿದ್ದಲಿಂಗಸ್ವಾಮಿ ಕೆ ಅಯ್ಯನಹಳ್ಳಿ ಮತ್ತು ಸಮಾಜದ ಮುಖಂಡರು ಸೇರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.