ಹಾನಗಲ್ ಗ್ರಾಮ ಪಂಚಾಯಿತಿ ಶ್ರೀ ನುಂಕೆ ಮಲೆ ಸಿದ್ದೇಶ್ವರ ಜಾತ್ರಾ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸ್ವಾಗತ.
ಹಾನಗಲ್ ಮೇ.18

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಾ ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಹಾನಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೂರಣ್ಣ ಹಾನಗಲ್ ಶ್ರೀ ಕಾಲಭೈರವೇಶ್ವರ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದ್ದು ಹಿಂದು ಸಾಯಂಕಾಲ 6:30 ಸಮಯಕ್ಕೆ ನುಂಕಪ್ಪನ ಬೆಟ್ಟದಲ್ಲಿ ವಾದ್ಯ ಮೇಳ ಮತ್ತು ಕುದುರೆ ಓಡಿಸುವುದು ರಥದಲ್ಲಿ ಸಿದ್ದೇಶ್ವರ ಸ್ವಾಮಿಯು ಕುಳಿತು ಮಂಗಳಾರತಿ ಪೂಜ್ಯ ನೈವೇದ್ಯಗಳೊಂದಿಗೆ ಮತ್ತು ತೇರಿನ ಚಕ್ರಕ್ಕೆ ತೆಂಗಿನ ಕಾಯಿ ಹೊಡೆಯುವುದು ಬಾಳೆಹಣ್ಣು ಎಸೆಯುವುದು ಇವೆಲ್ಲವೂ ಆದಮೇಲೆ ದವನ ಎಸೆಯುತ್ತಾರೆ ಇದಾದ ನಂತರ ರಥವು ಮುಂದೆ ಶ್ರೀಶೈಲ ಮಲ್ಲಿಕಾರ್ಜುನ ಪಾದಗಟ್ಟೆವರೆಗೂ ರಥವನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಎಳೆಯುತ್ತಾರೆ.

ಮೊಳಕಾಲ್ಮೂರು ವೃತ್ತ ನಿರೀಕ್ಷಕರಾದ ವಸಂತ ಹಸುದೇ ಸಿಪಿಐ ಮತ್ತು ಪಿಎಸ್ಐ ಪಾಂಡುರಂಗಪ್ಪ ಪೊಲೀಸ್ ಇಲಾಖೆ ಗದ್ದಲ ಗಲಾಟೆ ಜುಜು ಇವೆಲ್ಲವಕ್ಕೂ ಆಸ್ಪದ ಕೊಡದ ಪೊಲೀಸ್ ಇಲಾಖೆ ಜವಾಬ್ದಾರಿಯಾಗುತ್ತದೆ ಸುಭದ್ರತೆ ಸಹ ಇರುತ್ತದೆ ಮತ್ತೆ ಇದಾದ ಮರುದಿನವೇ ತುಪ್ಪದಮ್ಮ ಸಿಡಿ ಆಡುತ್ತಾರೆ ಈ ಸಿಡಿ ಆಡುವಾಗ ಬೆಟ್ಟದ ಮೇಲೆ ಒಂದು ಗಲ್ಗಂಬ ಇರುತ್ತದೆ ಈ ಗಲ್ಡಗಂಬಕ್ಕೆ ದೀಪ ಹಚ್ಚಿದರೆ ಈ ದೀಪವನ್ನು ನೋಡಿ ಚಿತ್ರದುರ್ಗದ ಊರು ಬಾಗಿಲಿಗೆ ಈ ಈ ದೀಪವು ಕಾಣುತ್ತದೆ.

ಈ ದೀಪವನ್ನು ನೋಡಿ ಉಪವಾಸ ಇರುವ ಭಕ್ತಾದಿಗಳಲ್ಲ ಈ ದೀಪವನ್ನು ನೋಡಿ ಸಂತೃಪ್ತರ ಆಗುತ್ತಾರೆ ಭಕ್ತಾದಿಗಳು ಸಿಡಿ ಆಡುವ ಕೋಮನ ಪಟ್ಟಿ ಮಾರಣ್ಣ ವಂಶಸ್ಥರು ವರ್ಷಾಲು ಅವರ ಗುಂಪಿನಲ್ಲಿ ಸಿಡಿ ಹಾಡುತ್ತಾರೆ ಇವರು ಒಂಬತ್ತು ದಿನ ಉಪವಾಸವಿದ್ದು ಬರಿ ಹಾಲು ಹಣ್ಣು ಮಾತ್ರ ಸೇವಿಸುತ್ತಾರೆ ತುಪ್ಪದಮ್ಮ ದೇವಿಯು ಈತನಿಗೆ ಒಲಿದು ಹಿಂದೆ ಬೆನ್ನಿನ ಹಿಂದೆ ಕಬ್ಬಿಣದ ರಾಡನ್ನು ಹಾಕಿ ಕೊಂಡಿಯನ್ನು ಹಾಕುತ್ತಾರೆ ಹಗ್ಗದಿಂದ ಕಟ್ಟಿ ಸಿಡಿ ಮರಕ್ಕೆ ತೊಗಲು ಹಾಕಿ ಹೂವಿನ ಅಲಂಕಾರದಿಂದ ಸಿಡಿಮರ ಹಗ್ಗದಿಂದ ಎಳೆಯುತ್ತಾರೆ.

ಸಿಡಿ ಆಡುವ ವ್ಯಕ್ತಿ ಭಕ್ತಾದಿಗಳಿಗೆ ಭಂಡಾರ ಮೂರು ಸುತ್ತು ಕೈಯಲ್ಲಿ ತಟ್ಟಿ ಹಿಡಿದು ಭಂಡಾರ ಎಸೆಯುತ್ತಾರೆ ಮತ್ತು ಮೂರು ಸುತ್ತು ಕತ್ತಿ ಹಿಡಿದು ಆಲದ ಕೊಂಬೆಗಳನ್ನು ಕತ್ತರಿಸುತ್ತಾರೆ ಸಿಡಿ ನೋಡಲು ಲಕ್ಷಾನು ಗಟ್ಟಲೆ ಭಕ್ತಾದಿಗಳು ಬರುತ್ತಾರೆ ಮತ್ತು ಇದರ ವಿಶೇಷಯೇನೆಂದರೆ ಹೊಸದಾಗಿ ವಿವಾಹ ಆದವರು ಜೋಡಿ ಬಂದು ಈ ತುಪ್ಪದಮ್ಮನ ಸಿಡಿ ನೋಡಿ ಸಂತೃಪ್ತರಾಗುತ್ತಾರೆ ತುಪ್ಪದಮ್ಮಗೆ ಬೇವಿನ ಸೀರೆ ಮತ್ತು ಬಾಯಿ ಬೀಗ ಹಾಕಿ ಅರಿಕೆ ಆ ದೇವಿಗೆ ಹರಿಸುತ್ತಾರೆ ಇಲ್ಲಿ ಬಂದಂತ ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಶೌಚಾಲಯದ ವ್ಯವಸ್ಥೆ ಸ್ಥಾನದ ಗೃಹಗಳು ಈ ಬೆಟ್ಟದಲ್ಲಿ ಇರುತ್ತವೆ ಮತ್ತು ಇಲ್ಲಿ ಒಬ್ಬ ಗುರುಗಳಾದ ಮಂಗಲ್ ನಾಥ್ ಸ್ವಾಮೀಜಿ ಇವರು ಈ ಮಠವನ್ನು ಉಸ್ತುವಾರಿಯಾಗಿ ನೋಡಿ ಕೊಳ್ಳುತ್ತಾರೆ ಮತ್ತು ಈ ನುಂಕಪ್ಪನ ಬೆಟ್ಟ ಇದು ಸುಮಾರು 33 ಹಳ್ಳಿಗಳಿಗೆ ಒಂದು ಟ್ರಸ್ಟ್ ಕಮಿಟಿ ಇರುತ್ತದೆ ಇಲ್ಲಿ ವಿವಾಹವಾಗಲು ಕಲ್ಯಾಣ ಮಂಟಪ ವ್ಯವಸ್ಥೆ ಇರುತ್ತದೆ ಮತ್ತು ಈ ಬೆಟ್ಟದಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ ಪೂಜಾರಟ್ಟಿ ಗ್ರಾಮದ ಗುಡ್ಡದ ಸಿದ್ದಣ್ಣ ಮತ್ತು ಬಡ್ಸಿದ್ದಣ್ಣ ನಿಂಗಣ್ಣ ಈ ದೇವಸ್ಥಾನದ ಪೂಜಾರಿಗಳು ನೂರಾರು ವರ್ಷಗಳಿಂದಲೂ ಇಲ್ಲೇ ವಾಸವಿದ್ದು ಈ ಸ್ವಾಮಿಯ ಕೆಲಸ ಕಾರ್ಯಗಳಿಗೆ ಸೀಮಿತರಾಗಿರುತ್ತಾರೆ ಪೂಜಾರಿಗಳು ವಾರಕ್ಕೊಮ್ಮೆ ಪ್ರಸಾದ ಸಹ ಭಕ್ತಾದಿಗಳಿಗೆ ಹಾಕುತ್ತಾರೆ ಕಾಲ ಭೈರವೇಶ್ವರನ ತುಪ್ಪದಮ್ಮ ಶ್ರೀಶೈಲ ಮಲ್ಲಿಕಾರ್ಜುನ ಸಿದ್ದರ ದೇವರು ತ್ರಿಶೂಲ ಇರುವ ಈ ಜಾಗದಲ್ಲಿ ಸಾವಿರಾರು ವರ್ಷಗಳಿಂದಲೂ 24 ಗಂಟೆ ಅಗ್ನಿ ಉರಿಯುತ್ತಿರುತ್ತದೆ ಇದು ಒಂದು ಮಹಿಮೆ ಅಂತ ತಿಳಿಯಬೇಕು ಕಾಶಿ ಹರಿದ್ವಾರ ಇರುವಂತ ದೇವಸ್ಥಾನ ಇಲ್ಲಿ ಉದ್ಭವಿಸುತ್ತಾರೆ ಮತ್ತು ಸಿಡಿ ಆದ ಮೇಲೆ ಸಿದ್ಬುಕ್ತಿ ಅಂತ ಕಾರ್ಯಗಳು ನಡೆಯುತ್ತವೆ ಈ ಕಾರ್ಯವು ಬೇಟೆ ಹರಿಕೆ ಆಗಿರುತ್ತದೆ ಇಲ್ಲಿ ಬೇಟೆ ಕಡೆದು ಯಲಬು ತುಂಡುಗಳು ಬೇರೆ ಕಡೆ ಎಸೆದಿದ್ದರೂ ಕೂಡ ಒಂದು ಕಾಗೆ ಸಹ ಬರುವುದಿಲ್ಲ ಅಂತಹ ಒಂದು ಸತ್ಯ ಈ ಬೆಟ್ಟದಲ್ಲಿ ಇರುತ್ತದೆ ಇಲ್ಲಿ ಶನೇಶ್ವರ ಒಂದು ಕಟ್ಟೆ ಇರುತ್ತದೆ ಶನಿ ದೋಷವು ಇಲ್ಲಿ ಬಂದು ಪೂಜೆ ಮಾಡಿದರೆ ಶನಿ ದೋಷವು ಹೋಗಲಾಡುತ್ತದೆ ಎಂದು ವಾಡಿಕೆ ಸಹ ಇಲ್ಲಿ ಇರುತ್ತದೆ ಮತ್ತು ಅರಳಯ್ಯ ಕಾಲ್ನಡಿಗೆಯಲ್ಲಿ ಭಕ್ತಾದಿಗಳು ಬೆಟ್ಟದಲ್ಲಿ ಮೆಟ್ಟಲು ಹತ್ತುವಾಗ ಹರಳಯ್ಯ ಎಂಬ ದೇವಸ್ಥಾನ ಬರುತ್ತದೆ ಹರಳಯ್ಯನಿಗೆ ನಮಸ್ಕಾರ ಮಾಡಿ ಮೆಟ್ಟಿಲುಗಳನ್ನು ಹತ್ತುತ್ತಾರೆ ಭಕ್ತಾದಿಗಳು ಮತ್ತು ಕೊಂಡಿ ದುಡ್ಡು ಅಂತ ಈ ಜಾತ್ರೆಯಲ್ಲಿ ಭಕ್ತಾದಿಗಳು ಪೂಜಾರಿಗಳಿಗೆ ಕೊಡುತ್ತಾರೆ ಏಕೆಂದರೆ ಮನೆಗಳಲ್ಲಿ ಚೇಳು ಮಂಡರುಗುಪ್ಪೆ ಬಂದರೆ ಇದು ಒಂದು ದೋಷ ಅಂತ ಹರಕೆ ಕಟ್ಟಿ ಕೊಳ್ಳುತ್ತಾರೆ ಈ ಕೊಂಡಿ ದುಡ್ಡು ಅಂತ ರೂ. ಕೈಲಾದಷ್ಟು ರೂ. ಕೊಂಡಿ ದುಡ್ಡು ಹಾಕುತ್ತಾರೆ ಪೂಜಾರಿಗಳಿಗೆ ಈ ಬೆಟ್ಟದಲ್ಲಿ ಮೊದಲಿನ ಪೂಜೆ ಹರಳಯ್ಯನಿಗೆ ಪೂಜೆ ನೈವೇದ್ಯಗಳೊಂದಿಗೆ ಮಾಡುತ್ತಾರೆ ಇಂದಿನಿಂದಲೂ ಈ ಸಂಪ್ರದಾಯ ನಡೆದು ಕೊಂಡು ಬಂದಿರುತ್ತದೆ ಈ ಜಾತ್ರೆಗೆ ಶುಭ ಕೋರಲು ಪೂಜಾರ್ ಹಟ್ಟಿ ಬಂಡೆ ಮಲ್ಲಣ್ಣ ಇವರು ಹಿಂದೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆಗಿದ್ದರು ಸುಮಾರು 15, 20 ಹಳ್ಳಿಗಳಿಗೆ ಪಂಚಾಯಿತಿಗಳು ಸಹ ಮಾಡುತ್ತಿದ್ದರು ಬಂಡೆ ಮಲ್ಲಣ್ಣ ಹೊಂಬಾಳೆ ವಂಶಸ್ಥರು ಮಹಾಂತೇಶ್ ಪೂಜಾರಹಟ್ಟಿ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು.