ಗುಡುಗು ಸಹಿತ ಭಾರಿ ಮಳೆ ಗಾಳಿಗೆ ಕುಸಿದ ಕೊಟ್ಟಿಗೆ ಮನೆ ಮತ್ತು ಗೋಡೆಗಳು, – ಎಂಟು ಮೇಕೆಗಳು ಸಾವು.
ಕಾನಾ ಹೊಸಹಳ್ಳಿ ಮೇ.21

ಗುಡುಗು ಸಹಿತ ಭಾರಿ ಮಳೆ ಗಾಳಿಗೆ ಕೊಟ್ಟಿಗೆ ಕುಸಿದು ಬಿದ್ದ ಪರಿಣಾಮ 4 ಮೇಕೆ ಮತ್ತು 4 ಮೇಕೆ ಮರಿ ಸೇರಿ ಒಟ್ಟು 8 ಮೇಕೆಗಳು ಮೃತಪಟ್ಟ ಘಟನೆ ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಗಡಿಭಾಗ ಟಿ ಕಲ್ಲಹಳ್ಳಿ ಗೊಲ್ಲರ ಹಟ್ಟಿಯಲ್ಲಿ ನಡೆದಿದೆ. ಪೂಜಾರಿ ನಾಗಣ್ಣ ಎಂಬುವರಿಗೆ ಸೇರಿದ ಮೇಕೆಗಳು ಮೃತಪಟ್ಟಿವೆ. ದಿನ ನಿತ್ಯದಂತೆ ಕೊಟ್ಟಿಗೆ ಮನೆಯಲ್ಲಿ ಮೇಕೆಗಳನ್ನ ಕಟ್ಟಿ ಹಾಕಲಾಗಿತ್ತು. ಮಳೆ ಗಾಳಿ ರಭಸಕ್ಕೆ ಕೊಟ್ಟಿಗೆ ಮನೆ ಕುಸಿದು ಬಿದ್ದ ಕಾರಣ ಮೇಕೆ ಮತ್ತು ಮರಿಗಳು ಮೃತಪಟ್ಟಿವೆ.ಅಲ್ಲದೆ ಹೊಸಹಳ್ಳಿ ಗ್ರಾಮದ ಸುಶೀಲಮ್ಮ ಗಂಡ ಹೆಚ್ ಮೂಗಣ್ಣ, ಇವರ ಮಣ್ಣಿನ ಮನೆ ಭಾಗಶಃ ಬಿದ್ದಿರುತ್ತದೆ.

ಸದರಿ ಹೊಸಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಎಸ್ ಇಮುಡಾಪುರ ಗ್ರಾಮದಲ್ಲಿ ಕಾಟಮ್ಮ ಗಂಡ ಬಾಲಪ್ಪ ಎಸ್ ಇಮುಡಾಪುರ ಇವರ ವಾಸದ ಮಣ್ಣಿನ ಮನೆ ಭಾಗಶಃ ಬಿದ್ದಿರುತ್ತದೆ. ಹಾಗೂ ಅಮಲಾಪುರ ಗ್ರಾಮದಲ್ಲಿ ತಿರುಮಲೇಶ ಇವರ ವಾಸದ ಮನೆ ಮೆಲ್ಚಾಣಿಯ ಸಜ್ಜಾ ಕುಸಿದು ಬಿದ್ದಿದೆ. ಮೃತಪಟ್ಟ ಸ್ಥಳಕ್ಕೆ ಹಾಗೂ ಮನೆಗಳ ಮೆಲ್ಚಾಣಿ ಕುಸಿದಿರುವ ಸ್ಥಳಕ್ಕೆ ಆರ್.ಐ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೇಕೆಗಳ ಮೃತಪಟ್ಟಿರುವ ಬಗ್ಗೆ ಕೂಡ್ಲಿಗಿ ತಹಸೀಲ್ದಾರ್ ಗೆ ಮಳೆಯಿಂದಾದ ಹಾನಿಯ ಬಗ್ಗೆ ವರದಿ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.