ಉಸ್ತುವಾರಿಯಾಗಿ ಪ್ರಭುಗೌಡ ನೇಮಕ.
ದೇವರ ಹಿಪ್ಪರಗಿ ಆ.30

ದೇವರ ಹಿಪ್ಪರಗಿ ಮತ ಕ್ಷೇತ್ರದ ವಾಪ್ತಿಯಲ್ಲಿ ಬರುವಂತ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ಒಳ್ಳೆಯ ಕೆಲಸ ಮಾಡುತ್ತಿರುವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ. ಡಾ, ಪ್ರಭುಗೌಡ ಲಿಂಗದಳ್ಳಿ ಸಾಕೀನ ಚಬನೂರ, ಇವರನ್ನು ಕಾಂಗ್ರೆಸ್ ಪಕ್ಷದ ದೇವರ ಹಿಪ್ಪರಗಿ ಮತ ಕ್ಷೇತ್ರದ ಹಾಗೂ ಕಿತ್ತೂರ ಮತಕ್ಷೇತ್ರ ಉಸ್ತುವಾರಿಯಾಗಿ ನೇಮಿಸಿದ ಕೆಪಿಸಿಸಿ ಅಧ್ಯಕ್ಷರಾದ, ಡಿ.ಕೆ ಶಿವಕುಮಾರ ಅವರು ಆದೇಶ ಮಾಡಿದ್ದಾರೆ, ಮುಂಬರುವ ದಿನಗಳಲ್ಲಿ ಮತ ಕ್ಷೇತ್ರದ ವಾಪ್ತಿಯಲ್ಲಿ ಬರುತ್ತವೆ ಎಲ್ಲಾ ಹಳ್ಳಿಗಳಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಮಟ್ಟದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರ ದೊಂದಿಗೆ ಪಕ್ಷವನ್ನು ಬೆಳೆಸುತ್ತಾರೆ. ಇವರು ಉಸ್ತುವಾರಿಯಾಗಿ ನೇಮಕಾಗಿದಕ್ಕೆ ಯಲಗೋಡ ಕಾಂಗ್ರೆಸ್ ಮುಖಂಡರಾದ, ಅಣ್ಣಪ್ಪಗೌಡ ಪಾಟೀಲ, ಮಹಮ್ಮದ್ ರಪೀಕ ಕಣಮೇಶ್ವರ, ರಾಜ ಪಟೇಲ ಕಣಮೇಶ್ವರ ಹುಸೇನ ತಳ್ಳೋಳ್ಳಿ ಮಾಂತೇಶ ಕೂಟನೂರ, ಅವರು, ಅಭಿನಂದನೆಗಳು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ.