ಮಕ್ಕಳು ಮರಳಿ ಶಾಲೆಗೆ ಬನ್ನಿ.
ಯಲಗೋಡ ಮೇ.28

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದಆತ್ಮೀಯ ಪಾಲಕರು ಮತ್ತು ಪೋಷಕರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲಗೋಡ, ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಈ ಮೂಲಕ ವಿನಂತಿಸಿ ಕೊಳ್ಳುವುದೇನೆಂದರೆ ನಾಳೆ ದಿನಾಂಕ:29/05/2024 ರಿಂದ 2024-25 ನೇ ಸಾಲಿನ ಶೈಕ್ಷಣಿಕ ವರ್ಷವು ಆರಂಭ ಗೊಳ್ಳುತ್ತಿದ್ದು, ಅಂದೇ ತರಗತಿಗಳು ಪ್ರಾರಂಭವಾಗುತ್ತವೆ ಆದ್ದರಿಂದ ತಾವುಗಳು ದಯಮಾಡಿ ನಾಳೆಯಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡುವುದರ ಜೊತೆಗೆ ನಿಮ್ಮ ಅಕ್ಕ ಪಕ್ಕದ ಮನೆಯ ಸ್ನೇಹಿತರು ಹಾಗೂ ಸಂಬಂಧಿಕರ ಮಕ್ಕಳಿಗೆ ತಿಳಿ ಹೇಳಿ ಮತ್ತು ಅವರ ಪಾಲಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರು ಕೂಡಾ ನಾಳೆಯಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡುವಂತೆ ಪ್ರೇರೇಪಿಸುವ ಮೂಲಕ ಶಾಲೆಯ ಎಲ್ಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸ ಬೇಕೆಂದು ನಮ್ರತೆಯಿಂದ ವಿನಂತಿಸಿಕೊಳ್ಳುತ್ತೇವೆ. ಪ್ರೀಯ ವಿದ್ಯಾರ್ಥಿಗಳೇ ರಜೆಯ ಮಜೆಯಲ್ಲಿ ಕಳೆದ ಸಂತೋಷದ ಕ್ಷಣಗಳನ್ನು ಹಾಗೂ ಕಲಿತ ಹೊಸ ಅನುಭವಗಳನ್ನು ಮೆಲುಕು ಹಾಕುತ್ತಾ ನವ ಚೈತನ್ಯ, ಉತ್ಸಾಹ, ಉಲ್ಲಾಸಗಳನ್ನು ತುಂಬಿಕೊಂಡು ಮತ್ತೆ ಹೊಸ ಹುರುಪಿನೊಂದಿಗೆ ಬರುವ ತಮಗೆಲ್ಲರಿಗೂ ಆತ್ಮೀಯವಾಗಿ ಪ್ರೀತಿಯ ಸ್ವಾಗತವನ್ನು ಕೋರುತ್ತೇವೆ. ನೀವು ಬನ್ನಿರಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಕರೆ ತನ್ನಿರಿ. ಎಲ್ಲರಿಗೂ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳು. ವಂದನೆಗಳೊಂದಿಗೆನಿಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲಗೋಡ ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಹಾಗೂ ಸರ್ವ ಸದಸ್ಯರು,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.