“ಶರಣರ ಶಕ್ತಿ” ಚಲನ ಚಿತ್ರದ ಆಡಿಯೋ ಬಿಡುಗಡೆ.

ದಾವಣಗೆರೆ ಮೇ.29

ಶ್ರೀಶಾ ಫಿಲ್ಮ್ ಹುಬ್ಬಳ್ಳಿ ಅರ್ಪಿಸುವ “ಶರಣರ ಶಕ್ತಿ” ತಡಿವ್ಯಾರ ನೋಡು ! – ಭಕ್ತಿ ಪ್ರಧಾನ ಕನ್ನಡ ಚಲನ ಚಿತ್ರದ ‘ತಡಿವ್ಯಾರ ನೋಡು’ ಆಡಿಯೋ ಬಿಡುಗಡೆ ಸಮಾರಂಭ ದಾವಣಗೆರೆ ಶ್ರೀ ಮುರುಘಾ ಮಠದಲ್ಲಿ ಜರುಗಿತು. ಸಾನಿಧ್ಯವನ್ನು ಮುರುಘಾ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿಗಳು ವಹಿಸಿ ‘ತಡಿವ್ಯಾರ ನೋಡು’ ಆಡಿಯೋ ಬಿಡುಗಡೆ ಮಾಡಿ ಸತಿ-ಪತಿಗಳು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶ್ವಕ್ಕೆ ಶರಣರ ಶಕ್ತಿಯನ್ನು ತೋರಿಸುವ ಈ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭವನ್ನು ಕೋರಿದರು. ಧ್ರುವ ಶರ್ಮಾ , ಭಾರ್ಗವ್ ಶರ್ಮಾ, ರಘು ಶೆಟ್ಟಿ , ಅಬ್ದುಲ್ ಲತೀಫ್, ರಾಮಕೃಷ್ಣ ಕುಲಕರ್ಣಿ, ಕೆಜಿ ಬಸನಗೌಡ್ರು, ಕೆಜಿ ಶಿವಕುಮಾರ್ , ಗಿರೀಶ್ ಸವಡಿಜೋಶಿ ,ಬಸವಣ್ಣನ ಪಾತ್ರಧಾರಿ ಮಂಜುನಾಥ್ ಗೌಡ ಪಾಟೀಲ್. ಗಂಧರ್ವ ಗಿರಿ, ಶ್ರೀನಿವಾಸ್ ಜಿ , ಸಂಗೀತ ನಿರ್ದೇಶಕ ವಿನು ಮನಸು, ಚಲನ ಚಿತ್ರ ಪಿ ಆರ್ ಓ ಡಾ. ಪ್ರಭು ಗಂಜಿಹಾಳ, ಸಂಪಾದಕ ಮತ್ತು ಕಲಾವಿದ ರವಿಕಾಂತ್ ಅಂಗಡಿ , ನಿರ್ಮಾಪಕಿ ಆರಾಧನಾ ಕುಲಕರ್ಣಿ, ನಿರ್ದೇಶಕ ದಿಲೀಪ್ ಶರ್ಮ ಹಾಗೂ ಚಿತ್ರದ ಕಲಾವಿದರು, ತಂತ್ರಜ್ಞರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಿರ್ಮಾಪಕರು, ನಿರ್ದೇಶಕರನ್ನು ಮತ್ತು ಚಿತ್ರ ತಂಡದ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಮಿಶ್ರಕೋಟಿ, ಕಾಮಧೇನು, ಗಂಜಿಗಟ್ಟಿ, ಉಳವಿ ಸುತ್ತಮುತ್ತ ಸತತ ಚಿತ್ರೀಕರಣ ನಡೆಸಲಾಗಿದ್ದು, ೧೨ ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರನ್ನು ಒಮ್ಮೆ ಕಾಣುವುದೇ ಜೀವನದ ಗುರಿ ಎಂದು ಕೊಂಡವರು ಸಾಕಷ್ಟು ಶರಣರು. ಇವರೆಲ್ಲರಿಗೂ ಸ್ಫೂರ್ತಿಯಾದ ಶಕ್ತಿ ಸ್ಥಳವೇ ಅನುಭವ ಮಂಟಪ. ಅಲ್ಲಿಗೆ ಎಲ್ಲರೂ ಯಾಕೆ ಬಂದರು ಎನ್ನುವುದೇ ಕಥೆಯ ಮುಖ್ಯ ಸಾರ. ನಂತರ ಬಸವಣ್ಣನವರು ಹರಳಯ್ಯ, ಮಧು ವರಸರ ಮಕ್ಕಳ ಮದುವೆ, ವರ್ಣಸಂಕರ, ಗಡಿಪಾರು ಎಲ್ಲವನ್ನೂ ಕಥೆ ಹೊಂದಿದೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ವಚನ ಸಾಹಿತ್ಯ ರಕ್ಷಣೆಗೆ ಪಟ್ಟ ಕಷ್ಟಗಳು ,ಹೋರಾಟಗಳು, ಚನ್ನಬಸವಣ್ಣ ಉಳವಿ ಕಡೆಗೆ ನಡೆದ ಪ್ರಸಂಗವನ್ನು ಇಲ್ಲಿ ತೋರಿಸಲಾಗಿದೆ.

ಜಗಜ್ಯೋತಿ ಬಸವಣ್ಣನವರಾಗಿ ಮಂಜುನಾಥಗೌಡ್ರು ಪಾಟೀಲ, ಚನ್ನಬಸವಣ್ಣನವರಾಗಿ ರಂಜನ್‌ರಾಜ್, ಅಕ್ಕನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಗಂಗಾಂಬಿಕೆಯಾಗಿ ಸಂಗೀತಾ ವಸಂತ, ನೀಲಾಂಬಿಕೆ ಅಮೃತಾ ಸವಡಿ ಜೋಶಿ, ಅಕ್ಕ ಮಹಾದೇವಿಯಾಗಿ ರಮ್ಯಾ ಗೌಡ್ರು, ಬಿಜ್ಜಳನಾಗಿ ರಾಘವೇಂದ್ರ ಕಬಾಡಿ , ಅಲ್ಲಮಪ್ರಭುವಾಗಿ ಮಂಜುನಾಥಯ್ಯ ಬಿ.ಎಮ್, ಸಿದ್ಧರಾಮರಾಗಿ ಸಚಿನ್ ಮಾಗಣಗೇರಿ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ…. ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ , ಕೆ.ಕಲ್ಯಾಣ ಸಾಹಿತ್ಯ , ವಿನುಮನಸು ಸಂಗೀತ, ಆರ್.ಮಹಾಂತೇಶ ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ದಿಲೀಪ್ ಶರ್ಮ ಚಿತ್ರಕಥೆ ,ಸಂಭಾಷಣೆ ಜೊತೆಗೆ ಎರಡು ಹಾಡುಗಳನ್ನು ಬರೆದಿದ್ದು ಜೊತೆಗೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ಚಿತ್ರವನ್ನು ಶ್ರೀಮತಿ ಅರಾಧನಾ ಕುಲಕರ್ಣಿ ನಿರ್ಮಿಸಿದ್ದು ಸಧ್ಯ ಮಠಾಧೀಶರಾದಿಯಾಗಿ ಸಾರ್ವಜನಿಕರಿಂದಲೂ ಕರ್ನಾಟಕದಾದ್ಯಂತ ಸುದ್ದಿ ಮಾಡುತ್ತಿರುವ ಈ ಚಿತ್ರ ಹೊಸದೊಂದು ಕ್ರಾಂತಿಯನೇ ಮಾಡಲಿದೆ.ಶೀಘ್ರದಲ್ಲೇ ಸೆನ್ಸಾರ್ ಮುಗಿಸಿ ರಾಜ್ಯದ್ಯಂತ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕಿ ಆರಾಧನಾ ತಿಳಿಸಿದ್ದಾರೆ.

*****

ವರದಿ ಡಾ.ಪ್ರಭು ಗಂಜಿಹಾಳ

ಮೊ; ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button