ಋತು ಮಾಸದ ನೈರ್ಮಲ್ಯಕ್ಕೆ ಪೌಷ್ಟಿಕ ಆಹಾರ ಒಳ್ಳೆಯ ಔಷಧಿ – ಡಾ. ಶಶಿಕಾಂತ ಬಾಗೇವಾಡಿ.
ಕಲಕೇರಿ ಮೇ.29

ಕಲಕೇರಿ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮುಟ್ಟಿನ ಋತು ಮಾಸದ ಅಂಗವಾಗಿ ಕಿಶೋರಿಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿಗಳಾದ ಡಾ,, ಶಶಿಕಾಂತ ಬಾಗೇವಾಡಿ ಅವರು ಅಧ್ಯಕ್ಷಿಯಾ ಮಾತನಾಡಿ ಋತು ಮಾಸದ ಮತ್ತು ಋತು ಸ್ರಾವದ ಕುರಿತು ಸವಿಸ್ತಾರವಾಗಿ ತಿಳಿಸಿದರಲ್ಲದೆ ಗರ್ಭಕೋಶದ ಕ್ಯಾನ್ಸರನ್ನು ತಡೆಗಟ್ಟಲು ಇತ್ತೀಚೆಗೆ ಅವಿಸ್ಕರಿಸಿದ ಹ್ಯೂಮನ್ ಪೇಪಲೋಮ್ ವೈರಸ್ ಲಸಿಕೆಯ ಮಾಹಿತಿ ನೀಡಿ ಪೌಷ್ಟಿಕ ಆಹಾರ, ರಕ್ತ ವರ್ಧಕ ಆಹಾರಗಳನ್ನು ಸೇವಿಸುವ ಮಾಹಿತಿ ನೀಡಿದರು.

ಅತಿಥಿಗಳಾದ ಶ್ರೀ ಅಪ್ಪಾಸಾಬ ಮಾಂಗ ಮಾತನಾಡಿ ಮುಟ್ಟಿನ ನೈರ್ಮಲ್ಯದ ಜೊತೆ ಒಳ್ಳೆಯ ಆಹಾರ ಸೇವನೆ ಅಷ್ಟೇ ಮುಖ್ಯವಾಗಿರುತ್ತದೆ ಎಂದರು ಹಿರಿಯ ಆರೋಗ್ಯ ನಿರೀಕ್ಷೆಕರಾದ ಎಂ ಡಿ ಮೋತಿಬಾಯಿ, ಡಾ,, ಸಂತೋಷ ತೆಂಗಳಿ ಇತರರು ಪಾಲ್ಗೊಂಡಿದದ್ದರು. ಹಿರಿಯರಾದ ಶ್ರೀಮತಿ ಹುಸೇನಬಿ ವಲ್ಲಿಭಾಯಿ ಶ್ರೀ ಲಾಲಸಾಬ ನಾಯ್ಕೋಡಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾಮದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.