ಮಸ್ಕಿ ಪುರಸಭೆ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜಾಗೃತಿ ಅಭಿಯಾನ – ಪರಿಸರ ಸ್ವಚ್ಛತೆ ನಮ್ಮೆಲ್ಲರ ಆದ್ಯತೆ ತಹಶೀಲ್ದಾರ್.

ಮಸ್ಕಿ ಆ .04

ಪರಿಸರ ಸ್ವಚ್ಛತೆ ನಮ್ಮೇಲ್ಲರ ಆದ್ಯತೆ ಆದ್ದರಿಂದ ನಮ್ಮ ಮನೆಯ ಸುತ್ತ-ಮುತ್ತ ಚರಂಡಿಯ ನೀರು ನಿಂತಲ್ಲೇ ನಿಲ್ಲದಂತೆ ಎಚ್ಚರ ವಹಿಸಬೇಕು ಡೆಂಗ್ಯೂ ರೋಗ ಹರಡದಂಂತೆ ತಡೆ ಗಟ್ಟಬಹುದು ಎಂದು ಮಸ್ಕಿಯ ತಹಸೀಲ್ದಾರ್ ಮಲ್ಲಪ್ಪ.ಕೆ.ಯರಗೋಳ ಹೇಳಿದರು.ಮಸ್ಕಿ ಪಟ್ಟಣದ ಕೇಂದ್ರ ಶಾಲೆಯ ಆವರಣದ ಮುಂಭಾಗದಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡೆಂಗ್ಯೂ ರೋಗದ ಜಾಗೃತಿ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರೋಗದ ಬಗ್ಗೆ ಗಾಬರಿ ಬೇಡ ಸ್ವಚ್ಛತೆಗೆ ಆದ್ಯತೆ ನೀಡಿ ಇದರಿಂದ ಸೋಳ್ಳೆಗಳು ಹರಡುವುದಿಲ್ಲ ಎಂದರು. ಡೆಂಗ್ಯೂ ಚಿಕೂನ್ ಗುನ್ಯಾದಂಥ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಗರಿಕರನ್ನು ಭಯ ಭೀತಿಗೊಳ್ಳುವಂತೆ ಮಾಡಿದೆ. ಸಾರ್ವಜನಿಕರಿಗೆ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ನಿಯಂತ್ರಣದ ಬಗ್ಗೆ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿ ಧೈರ್ಯ ತುಂಬುವ ಸಲುವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ಪುರಸಭೆ ಮುಖ್ಯಾಧಿಕಾರಿ ನರದರಡ್ಡಿ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯವಾಗಿ ನಮ್ಮ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಆದ್ದರಿಂದ ಸಾರ್ವಜನಿಕರು ಕಸವನ್ನು ಎಲ್ಲೇಂದರಲ್ಲಿ ಹಾಕಬೇಡಿ ಕಸ ಸಂಗ್ರಹಕ್ಕೆ ಬರುವ ವಾಹನದಲ್ಲಿ ಕಸವನ್ನು ಹಾಕಿ ಎಂದು ಮನವಿ ಮಾಡಿದರು. ಗಾಬರಿ ಬೇಡ, ನಿಮ್ಮೊಡನೆ ನಾವಿದ್ದೆವೆ. ಸುತ್ತ-ಮುತ್ತ ನೈರ್ಮಲ್ಯ ಕಾಪಾಡಿ, ನೀರಿನ ಸಂಗ್ರಹಗಳನ್ನು ವಾರಕ್ಕೆ ಎರಡು ಬಾರಿ ಬದಲಾಯಿಸಿ ಹಳೆ ಟೈರುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ ಈಗಾಗಳೆ ವಾರ್ಡಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಲಾಗಿದೆ ಎಂದರು. ನಂತರ ಜಾಥಾವೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಡಾ: ಮೌನೇಶ ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button