ವರುಣನ ಕೃಪೆಯಿಂದ ರೈತರಿಗೆ ಸಖತ್ ಖುಷಿ – ಮುಂಗಾರು ಬಿತ್ತನೆಗೆ ಚುರುಕು ಮೂಡಿಸಿದ ರೋಹಿಣಿ.
ಹುನಗುಂದ ಜೂನ್.03

ತಾಲೂಕಿನಾದ್ಯಾಂತ ರವಿವಾರ ರಾತ್ರಿಯಿಡೀ ಭಾರೀ ಪ್ರಮಾಣದ ಗುಡುಗು, ಸಿಡಿಲು, ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಹೊಲ ಗದ್ದೆಗಳಲ್ಲಿ ನೀರು ತುಂಬಿ ಕೊಂಡಿದ್ದರೇ ತಾಲೂಕಿನ ಕೆಲವೊಂದು ಕಡೆಗಳ ಪ್ರಮುಖ ಸೇತುವೆಗಳು ಮಳೆಯ ನೀರಿನಿಂದ ಜಲಾವೃತಗೊಂಡಿವೆ .ಹೌದು ಮುಂಗಾರು ಹಂಗಾಮಿನ ಪೂರ್ವದಲ್ಲಿ ತಾಲೂಕಿನಾದ್ಯಂತ ವರುಣನ ಕೃಪೆ ತೋರಿ ಒಂದು ವಾರದಿಂದ ಮಳೆಯು ಮಾಯವಾಗಿತ್ತು. ಮುಂಗಾರು ಬಿತ್ತನೆಗೆ ಸಕಲ ಸಿದ್ದತೆ ಮಾ ಡಿಕೊಂಡಿದ್ದ ರೈತರು ಮಳೆ ಮಾಯವಾಗಿ ಒಣ ಹವೆ ಮತ್ತು ಬಿಸಿಗಾಳಿ ಬಿಸಲು ತೊಡಗಿದ್ದರಿಂದ ಈ ಬಾರಿ ಮತ್ತೇ ಮುಂಗಾರು ಕೈಕೊಡತ್ತಾ ಎನ್ನುವ ಆಂತಕದಲ್ಲಿದ್ದ ರೈತರಿಗೆ ರವಿವಾರ ಬೆಳಿಗ್ಗೆ ರಾಜ್ಯದಲ್ಲಿ ಮೂರ‍್ನಾಲ್ಕು ದಿನಗಳ ಕಾಲ ಬಾರಿ ಮಳೆಯಾಗಲಿದೆ ಎನ್ನುವ ಮಾಹಿತಿ ಹವಮಾನ ಇಲಾಖೆಯಿಂದ ಹೊರ ಬೀಳುವ ಬೆನ್ನಲ್ಲೆ ರವಿವಾರ ರಾತ್ರಿ ಏಕಾ ಏಕಿಯಾಗಿ ರೋಹಿಣಿ ಮಳೆಯು ಬಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದ ಮೂರು ತಿಂಗಳಿನಿಂದ ಬೇಸಿಗೆಯ ಭಯಂಕರ ಬಿಸಿಲಿಗೆ ಬಸವಳಿದ ಜನರಿಗೆ ಸಧ್ಯ ತಂಪಾದ ವಾತಾವರಣ ನಿರ್ಮಾಣವಾಗಿದೆ.ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಹುನಗುಂದ ತಾಲೂಕಿನಲ್ಲಿ ೧೧೩ ಎಂ.ಎಂ. ಮಳೆಯಾಗಬೇಕಿತ್ತು ಆದರೆ ಅದನ್ನು ಮೀರಿ ೧೫೩ ಎಂ.ಎಂ. ಮಳೆಯಾಗಿದೆ.

ಇನ್ನೂ ಇಳಕಲ್ಲ ತಾಲೂಕಿನಲ್ಲಿ ವಾಡಿಕೆಯಂತೆ ೧೧೭ ಎಂ.ಎಂ. ಮಳೆಯಾಗ ಬೇಕಿತ್ತು ಆದರೆ ೧೭೩ ಎಂ.ಎಂ. ಮಳೆಯಾಗಿದೆ. ಇನ್ನೂ ರವಿವಾರ ರಾತ್ರಿ ಸುರಿದ ಬಾರಿ ಮಳೆಯು ಹುನಗುಂದದಲ್ಲಿ ೬೨.೩ ಎಂ.ಎಂ ಮತ್ತು ಇಳಕಲ್ಲದಲ್ಲಿ ೫೯.೩ ಎಂ.ಎಂ ಅಮೀನಗಡದಲ್ಲಿ ೧೮ ಎಂ.ಎಂ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಮೂಲದಿಂದ ತಿಳಿದು ಬಂದಿದೆ. ಗುಡುಗು ಸಿಡಿಲು ಗಾಳಿಯಿಂದ ಆರಂಭಗೊಂಡ ಮಳೆಯು ರಾತ್ರಿಯಿಡೀ ವರಣನ ಆರ್ಭಟಕ್ಕೆ ಮಳೆಯ ನೀರು ಹೊಲ ಗದ್ದೆಗಳಲ್ಲಿ ನುಗ್ಗಿ ಕೆಲವೊಂದು ಹೊಲದ ಒಡ್ಡುಗಳು ಕೊಚ್ಚಿ ಹೋಗಿದ್ದರೇ ಕೆಲವೊಂದು ಕಡೆಗೆ ಹಳ್ಳ, ಕೆರೆಗಳ ಬದಿಯಲ್ಲಿ ಹೊಲಗಳ ಒತ್ತುವರಿಯಿಂದ ಮಳೆಯ ನೀರು ಕೆಲವೊಂದು ಹೊಲಗಳಲ್ಲಿ ಕೆರೆಯಂತೆ ಮಳೆಯ ನೀರು ತುಂಬಿ ಕೊಂಡಿದೆ. ಭಾರಿ ಮಳೆಯಿಂದ ಬೆಳಗಲ್ಲ ಇದ್ದಲಗಿ ಮಾರ್ಗವಾಗಿ ಧನ್ನೂರ ಸಂಪರ್ಕಿಸುವ ರಸ್ತೆಯಲ್ಲಿರುವ ಕಮದತ್ತ ಸೇತುವೆ, ಹುನಗುಂದಕ್ಕೆ ಸಂಪರ್ಕಿಸುವ ಬೇಕಮಲದಿನ್ನಿ ಸೇತುವೆ, ಕರಡಿಯಿಂದ ಹುನಗುಂದ ಮತ್ತು ಇಳಕಲ್ಲ ಸಂಪರ್ಕಿಸುವ ಸೇತುವೆ ಮಳೆಯ ನೀರಿನಿಂದ ಜಲಾವೃತ ಗೊಂಡು ಕೆಲ ಹೊತ್ತು ದ್ವಿಚಕ್ರ, ಬಸ್, ಬಾರಿ ವಾಹನಗಳ ಸವಾರರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು.

ಇನ್ನೂ ಹುನಗುಂದ ಪಟ್ಟಣದಲ್ಲಿ ಗದ್ದಿ ಆಲ್ ಮಿಲ್ ಮತ್ತು ಆರ್.ಎಂ.ಎಸ್.ಎ ಶಾಲೆಯ ಕಡೆಗೆ ಎರಡು ಮೂರು ಕಡೆಗಲ್ಲಿ ವಿದ್ಯುತ್ ಟಿಸಿ ಸುಟ್ಟಿದ್ದು. ಹುನಗುಂದ ಎಪಿಎಂಸಿಯಲ್ಲಿ ಮರವೊಂದು ಧರೆ ಗುರುಳಿದೆ. ಒಟ್ಟಾರೆಯಾಗಿ ರವಿವಾರ ಮಳೆರಾಯನ ರೌದ್ರಾವತಾರಕ್ಕೆ ಕೆಲವೊಂದು ಆವಾಂತರಗಳನ್ನು ಸೃಷ್ಠಿಸಿದ್ದರೂ ಕೂಡಾ ಮುಂಗಾರು ಪೂರ್ವದಲ್ಲಿ ಮಳೆಯನ್ನು ನೆಚ್ಚಿಕೊಂಡು ಬಿತ್ತನೆ ಮಾಡಿ ಒಂದು ವಾರದಿಂದ ಮಳೆಯಿಲ್ಲದೇ ಮತ್ತೇ ಮುಂಗಾರು ಕೈ ಕೊಟ್ಟಿತ್ತು ಎಂದು ಆತಂಕದಲ್ಲಿದ್ದ ರೈತರಿಗೆ ರವಿವಾರದ ಮಳೆಯು ಖುಷಿ ತಂದಿದೆ.
“ಬಾಕ್ಸ್ ಸುದ್ದಿ”……
ಹಳ್ಳದ ಅಕ್ಕ ಪಕ್ಕದ ಜಮೀನನ ಮಾಲೀಕರು ಹಳ್ಳವನ್ನು ಒತ್ತುವರಿ ಮಾಡಿದ್ದರಿಂದ ಮಳೆಯ ನೀರು ಸರಾಗವಾಗಿ ಹಳ್ಳದ ಮೂಲಕ ಹೋಗದೇ ಅಕ್ಕ ಪಕ್ಕದ ಹೊಲಗಳಿಗೆ ನುಗ್ಗಿ ರೈತರಿಗೆ ತೊಂದರೆ ಯಾಗಿದ್ದು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಎಚ್ಚೇತ್ತು ಕೊಂಡು ಹಳ್ಳಗಳನ್ನು ಸರ್ವೆ ಮಾಡಿ ಒತ್ತುವರಿಯನ್ನು ತೆರುವು ಗೊಳಿಸಬೇಕು. ಹನಮಂತ ಸಂದಿಮನಿ ಹುನಗುಂದ ರೈತ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.